Ramya: ಡಾಲಿಗೆ ಭರ್ಜರಿ ಕಾರು ಗಿಫ್ಟ್ ಸಿಗ್ತಿದ್ದಂತೆಯೇ ರಮ್ಯಾ ಇಟ್ರು ಹೊಸ ಕೋರಿಕೆ!
ಡಾಲಿ ಧನಂಜಯ್ ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ ನಿರ್ಮಾಪಕರು ನಟನಿಗೆ ದುಬಾರಿ ಕಾರನ್ನು ಉಡುಗೊರೆ ನೀಡಿದ್ದಾರೆ. ಈ ಕುರಿತು ರಮ್ಯಾ ಹೊಸ ಬೇಡಿಕೆ ಇಟ್ಟಿದ್ದಾರೆ. ಏನದು?
ಡಾಲಿ ಧನಂಜಯ್ (Daali dhananjay) ನಟನೆಯ 25ನೇ ಸಿನಿಮಾ `ಗುರುದೇವ್ ಹೊಯ್ಸಳ’ (Gurudeva Hoysala) ಮಾರ್ಚ್ 30ರಂದು ತೆರೆ ಕಂಡಿದೆ. ರಿಲೀಸ್‌ಗೂ ಮೊದಲೇ ಈ ಸಿನಿಮಾಗೆ ವಿದೇಶದಲ್ಲಿ ಭಾರಿ ಡಿಮಾಂಡ್ ಕ್ರಿಯೇಟ್ ಆಗಿತ್ತು. ಭರ್ಜರಿ ಆಕ್ಷನ್, ಉತ್ತರ ಕರ್ನಾಟಕ ಶೈಲಿಯ ಖಡಕ್ ಡೈಲಾಗ್‌ನೊಂದಿಗೆ ಗಾಂಧಿನಗರದಲ್ಲಿ ಸೆನ್ಸೇಷನ್ ಸೃಷ್ಟಿಸಿದೆ ಹೊಯ್ಸಳ. ಈ ಸಿನಿಮಾ ವಿದೇಶದಲ್ಲಿ ಘರ್ಜಿಸಲಿದ್ದು, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ನಲ್ಲಿ ರಿಲೀಸ್ ಆಗಿವೆ. 'ಗುರುದೇವ್ ಹೊಯ್ಸಳ' ಸಿನಿಮಾದಲ್ಲಿ ಡಾಲಿ ಧನಂಜಯ್ ಖಡಕ್ ಪೊಲೀಸ್ ಅಧಿಕಾರಿ ಗುರುದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಡಾಲಿಗೆ ಮೂರನೇ ಬಾರಿ ಅಮೃತ ಅಯ್ಯಂಗಾರ್ ಈ ಚಿತ್ರದಲ್ಲಿ ಜೋಡಿಯಾಗಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೌಂಡ್ ಮಾಡ್ತಿದೆ. `ಗುರುದೇವ್ ಹೊಯ್ಸಳ’ ಕಥೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
25ನೇ ಸಿನಿಮಾ ರಿಲೀಸ್ ಆಗಿರುವ ಶುಭ ಸಂದರ್ಭದಲ್ಲಿ ಡಾಲಿಗೆ ವಿಶೇಷ ಉಡುಗೊರೆಯೊಂದು ಸಿಕ್ಕಿದೆ. ಈ ಮೂಲಕ ಡಾಲಿ ಇದೀಗ ಕೋಟಿ ಕಾರಿನ ಒಡೆಯನಾಗಿದ್ದಾರೆ. ಈ ಕುರಿತು ಡಾಲಿ ಸೋಷಿಯಲ್ ಮೀಡಿಯಾದಲ್ಲಿ ಖುಷಿ ಸುದ್ದಿ ಹೇಳಿಕೊಂಡಿದ್ದಾರೆ. ಅವರಿಗೆ ದುಬಾರಿ ಬೆಲೆಯ Toyota Vellfire ಕಾರನ್ನು ಚಿತ್ರದ ನಿರ್ಮಾಪಕರಾದ ಕಾರ್ತಿಕ್ ಗೌಡ ಮತ್ತು ಯೋಗಿ ಜಿ. ರಾಜ್ ಉಡುಗೊರೆ ನೀಡಿದ್ದಾರೆ. ಅಂದಾಜು 1.50 ಕೋಟಿ ರೂ. ಮೌಲ್ಯದ ಟೊಯೋಟಾ ಕಂಪೆನಿಯ ಕಾರು ಇದಾಗಿದೆ. 'ಧನು, ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ ಎಲ್ಲವೂ ನಮಗೆ ಒಂದೇ. ದೂರದ ಪ್ರಯಾಣ ಅಥವಾ ಸಣ್ಣ ಪ್ರಯಾಣ, ನಮಗೆ ಪ್ರಯಾಣ ಮುಖ್ಯವಾಗಿದೆ. ನಮ್ಮ ಜೀವನದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ಲವ್ ಯು ಸಹೋದರ' ಎಂದು ಯೋಗಿ ಜಿ. ರಾಜ್ ಟ್ವೀಟ್ ಮಾಡಿದ್ದಾರೆ.
ಹೇಗಿದೆ ನೋಡಿ ಗುರುದೇವ್ 'ಹೊಯ್ಸಳ' ಚಿತ್ರದ ಕ್ರೇಜ್: ಹೊಸ ಅಪ್ಡೇಟ್ ಏನು ಗೊತ್ತಾ?
ಕಾರು ಉಡುಗೊರೆಯಾಗಿ ಸಿಕ್ಕಿರುವುದಕ್ಕೆ ಹಲವರು ಶುಭ ಕೋರಿದ್ದಾರೆ. ಅವರ ಪೈಕಿ ನಟಿ ರಮ್ಯಾ ಕೂಡ ಒಬ್ಬರು. ಆದರೆ ಇವರಿಬ್ಬರ ಚಾಟ್ ಈಗ ಸಕತ್ ಸೌಂಡ್ ಮಾಡುತ್ತಿದೆ. ಇದಕ್ಕೆ ಕಾರಣ, ಮೋಹಕ ತಾರೆ ರಮ್ಯಾ ಅವರು ಧನಂಜಯ್ ಅವರಿಗೆ ಮಾಡಿಕೊಂಡಿರುವ ಕೋರಿಕೆ. ಇದು ವೈರಲ್ (Viral) ಆಗಿದ್ದು, ರಮ್ಯಾ ಅವರ ಕೋರಿಕೆಯನ್ನು ಡಾಲಿ ಕೂಡ ಈಡೇರಿಸಲು ರೆಡಿ ಇದ್ದಾರೆ. ಕಾರು ಸಿಕ್ಕಿ ವಿಷಯವನ್ನು ಡಾಲಿ ಧನಂಜಯ್ ಅವರು, ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ನನ್ನ 25ನೇ ಸಿನಿಮಾಕ್ಕೆ ನಿರ್ಮಾಪಕರಿಂದ ಸಿಕ್ಕ ವಿಶೇಷ ಉಡುಗೊರೆಯಿದು. ಒಟ್ಟಿಗೆ ಮತ್ತಷ್ಟು ಕೆಲಸ ಮಾಡೋಣ. ನಿಮ್ಮ ಪ್ರೀತಿಗೆ ಧನ್ಯವಾದಗಳು. ಇದು ನನ್ನ ನಿರ್ಮಾಪಕರ ಮತ್ತು ಅಭಿಮಾನಿಗಳ ಕೊಡುಗೆ" ಎಂದು ಫೋಟೋ ಸಮೇತ ಹೇಳಿಕೊಂಡಿದ್ದಾರೆ. ಇದಕ್ಕೆ ರಮ್ಯಾ ಪ್ರತಿಕ್ರಿಯೆ ನೀಡಿದ್ದಾರೆ.
ಅಷ್ಟಕ್ಕೂ ರಮ್ಯಾ ಅವರು ಟ್ವೀಟ್ ಮೂಲಕವೇ ಈ ಕೋರಿಕೆಯನ್ನು ಇಟ್ಟಿದ್ದಾರೆ. 'ನಿಮ್ಮ ಹೊಸ ಕಾರಿಗಾಗಿ ಧನ್ಯವಾದಗಳು. ಧನು, ಗುರುದೇವ್ ಹೊಯ್ಸಳ ಗೆದ್ದಿದ್ದಕ್ಕೂ ನಿಮ್ಮ ತಂಡಕ್ಕೆ ಅಭಿನಂದನೆಗಳು. ನಮ್ಮನ್ನೆಲ್ಲ ನಿಮ್ಮ ಕಾರಿನಲ್ಲಿ ಕಾರ್ನರ್ ಹೌಸ್‌ಗೆ ಕರೆದುಕೊಂಡು ಹೋಗಿ ಟ್ರೀಟ್ ಕೊಡಿಸಿ, ನೀವೀಗ ನಮ್ಮನ್ನು ನಿಮ್ಮ ಹೊಸ ಕಾರಿನಲ್ಲಿ ರೌಂಡ್ಸ್‌ಗೆ ಕರೆದೊಯ್ಯಬೇಕು. ಬಿಸಿ ಚಾಕಲೇಟ್ ಮಿಠಾಯಿ ಟ್ರೀಟ್ ನೀಡಬೇಕು. ಯಾವಾಗ್ ಕರ್ಕೊಂಡ್ ಹೋಗ್ತೀರಾ?' ಎಂದು ರಮ್ಯಾ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಧನಂಜಯ್, 'ಈಗಲೇ, ಈ ಕ್ಷಣದಲ್ಲೇ ಹೋಗೋಣ ಬನ್ನಿ..' ಎಂದು ರಿಪ್ಲೈ ಮಾಡಿದ್ದಾರೆ. ಅದಕ್ಕೆ ಮತ್ತೊಂದು ಪ್ರತಿಕ್ರಿಯೆ ಕೊಟ್ಟಿರುವ ರಮ್ಯಾ, 'ಸುಮ್ನೆ ಹೇಳಬೇಡಿ, ನಾನು ಐಸ್‌ಕ್ರೀಮ್ ಅಂದ್ರೆ 24/7 ನಾನು ರೆಡಿ ಇರುತ್ತೇನೆ' ಎಂದಿದ್ದಾರೆ. ಅದಕ್ಕೆ ಧನಂಜಯ್ ಅವರು, 'ಈಗಲೇ ಈ ಕ್ಷಣದಲ್ಲೇ ಹೋಗಣ ಬನ್ನಿ.. ಬಂದೇ ಇರಿ, 10 ಮಿನಟ್ಸ್ ರೆಡಿ ಆಗ್ಬಿಡಿ... ಹೋಗೋಣ' ಎಂದಿದ್ದಾರೆ.
Priyanka Chopra: ನಿಕ್ ಜೊತೆ ಡೇಟಿಂಗ್ ಮಾಡಲು ಪ್ರಿಯಾಂಕಾ ಭಯಪಟ್ಟಿದ್ದು ಈ ಕಾರಣಕ್ಕಂತೆ!
ಇದಕ್ಕೆ ರಮ್ಯಾ LOL ಎಂದು ನಕ್ಕಿದ್ದಾರೆ. ಈ ಚಾಟಿಂಗ್ (Chatting) ವೈರಲ್ ಆಗಿದ್ದು, ಫ್ಯಾನ್ಸ್ ಶುಭಾಶಯ ಕೋರುತ್ತಿದ್ದಾರೆ. ಜೊತೆಗೆ ತಮ್ಮನ್ನೂ ಪಾರ್ಟಿಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದಾರೆ. ಅಂದಹಾಗೆ ಹೊಯ್ಸಳ ಚಿತ್ರವು ಸೋಷಿಯಲ್ ಮೆಸೇಜ್ ಹೊತ್ತಿರುವ ಕಮರ್ಷಿಯಲ್ ಸಿನಿಮಾ ಆಗಿದೆ. ನಿರ್ದೇಶಕ ವಿಜಯ್. ಎನ್ ಚಿತ್ರ ನಿರ್ದೇಶಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಹೊಯ್ಸಳನಿಗೆ ಜೋಡಿಯಾಗಿ ಅಮೃತಾ ಅಯ್ಯಂಗಾರ್ ನಟಿಸಿದ್ದು, ಅಚ್ಯುತ್ ಕುಮಾರ್, ನವೀನ್ ಶಂಕರ್, ಅವಿನಾಶ್, ಪ್ರತಾಪ್ ನಾರಾಯಣ್, ರಾಜೇಶ್ ನಟರಂಗ, ನಾಗಭೂಷಣ್ ಹಾಗೂ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.