ಕೊರಗಜ್ಜನ ಸನ್ನಿಧಿಯಲ್ಲಿ ಪವಾಡ: ಕಪ್ಪು ಬಣ್ಣದ ಘಟನೆ ವಿವರಿಸಿದ ನಟಿ ರಕ್ಷಿತಾ ಪ್ರೇಮ್​

ಕೊರಗಜ್ಜನ ಸನ್ನಿಧಿಗೆ ಹೋಗಿದ್ದ ನಟಿ ರಕ್ಷಿತಾ ಪ್ರೇಮ್​ ಅಲ್ಲಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ನಟಿ ಹೇಳಿದ್ದೇನು?
 

Actress Rakshita Prem who went to Koragajjas place in Tulunadu shared her experience suc

ಶತಶತಮಾನಗಳಿಂದಲೂ ತುಳುನಾಡಿನಲ್ಲಿ ದೈವೀ ಶಕ್ತಿಯ ದರ್ಶನ ಮಾಡಿಸುತ್ತಿರುವ ಆ ನಂಬಿಕೆಯ ದೈವವೇ ಸ್ವಾಮಿ ಕೊರಗಜ್ಜ. ತುಳುನಾಡಿನ ದೈವಗಳಲ್ಲಿ ಎಲ್ಲ ದೈವಗಳು ಅಗ್ರಗಣ್ಯವಾದವು. ಅದರಲ್ಲೂ ಸ್ವಾಮಿ ಕೊರಗಜ್ಜ, ಗುಳಿಗ, ಪಂಜುರ್ಲಿ ದೈವಗಳು ಭಾರೀ ಕಾರಣಿಕಕ್ಕೆ ಹೆಸರಾದವು.  ಕಳೆದುಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಮೊದಲ ಮತ್ತು ಅಗ್ರಗಣ್ಯವಾಗಿ, ಜನರು ಈ ದೈವವನ್ನು ನೆನಪಿಸಿಕೊಳ್ಳುತ್ತಾರೆ.  ದಕ್ಷಿಣ ಕನ್ನಡಾದ್ಯಂತ ಈ ಕೊರಗಜ್ಜನಿಗೆ ಹಲವಾರು ದೇವಾಲಯಗಳಿವೆ. ಈ ದೇವಾಲಯಗಳಿಗೆ ವಿವಿಧ ಕಡೆಯಿಂದ ಭಕ್ತರು ಆಗಮಿಸಿ, ತಮ್ಮ ಕಷ್ಟ ನಷ್ಟಗಳನ್ನು ಹೇಳಿಕೊಂಡರೆ, ಕೊರಗಜ್ಜನು ಅದನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಗಳು ಇಲ್ಲಿವೆ. ಅದಕ್ಕೆ ಪುಷ್ಟಿ ನೀಡುವಂತೆ ಅನೇಕ ಪವಾಡಗಳು ಇಲ್ಲಿ ಪ್ರತಿನಿತ್ಯವೂ ನಡೆಯುತ್ತಲೇ ಬಂದಿರುವುದು ಆ ಭಕ್ತಾದಿಗಳ ನಂಬಿಕೆಯನ್ನು   ಧೃಡಪಡಿಸುತ್ತಲೇ ಸಾಗಿದೆ.
 
ಇದೀಗ ಇದೇ ವಿಷಯವನ್ನು ಹಾಗೂ ಕೊರಗಜ್ಜನ ಕುರಿತು ತಮಗಿರುವ ಶ್ರದ್ಧಾ ಭಕ್ತಿಯನ್ನು ತಿಳಿಸಿದ್ದಾರೆ ನಟಿ ರಕ್ಷಿತಾ ಪ್ರೇಮ್​. ಕೊರಗಜ್ಜನ ಕುರಿತು ತಮಗೆ ಅಪಾರ ನಂಬಿಕೆ ಇದೆ ಎಂದಿರುವ ರಕ್ಷಿತಾ ಅವರು ಅಲ್ಲಿಯ ಪವಾಡಗಳನ್ನು ಸ್ಮರಿಸುತ್ತಾರೆ. ಇದೇ ವೇಳೆ ಕೊರಗಜ್ಜನ ಬಳಿ ಹೋದಾಗಲೆಲ್ಲಾ ತಮಗೆ ಏನಾದರೂ   ನಾಯಿ, ಬೆಕ್ಕು ಇಲ್ಲವೇ ಕಾಗೆ ಹೀಗೆ ಯಾವುದಾದರೂ ಕಪ್ಪು ಬಣ್ಣದ ದರ್ಶನ ಮಾಡಿಸು ಎಂದು ಬೇಡಿಕೊಳ್ಳುವ ಕುತೂಹಲದ ವಿಷಯವನ್ನೂ ಅವರು ಹೇಳಿದ್ದಾರೆ. ಕೊರಗಜ್ಜನ ಇರುವಿಕೆಯೇ ಇದಕ್ಕೆ ಸಾಕ್ಷಿ ಎನ್ನುವುದು ಅವರ ಮಾತು. ಹೀಗೆ ಕಪ್ಪು ಬಣ್ಣದ ಕುರಿತು ಬೇಡಿಕೊಂಡಾಗ ತಮಗೆ ಅದರ ದರ್ಶನವಾಗಿದೆ ಎನ್ನುತ್ತಾರೆ ರಕ್ಷಿತಾ. ರ‍್ಯಾಪಿಡ್ ರಶ್ಮಿ ಅವರು ನಡೆಸಿಕೊಡುವ  ಜಸ್ಟ್ ಕ್ಯೂರಿಯೆಸ್ ಷೋದಲ್ಲಿ ಈ ವಿಷಯವನ್ನು ರಕ್ಷಿತಾ  ಹೇಳಿದ್ದಾರೆ. ಅಲ್ಲಿ ಹೋದ ಮೇಲೆ ನನಗೆ ತುಂಬಾ ಶಾಂತವಾಗಿದ್ದೇನೆ. ಶಾಂತ ಮನೋಭಾವ ನನ್ನಲ್ಲಿ ಮೂಡಿದೆ ಎಂದು ಸ್ಮರಿಸಿಕೊಂಡಿದ್ದಾರೆ. ನನಗಿಂತ ಹೆಚ್ಚಾಗಿ ಮಗ ಅಲ್ಲಿ ಕನೆಕ್ಟ್​ ಆಗಿದ್ದಾನೆ ಎಂದಿದ್ದಾರೆ. 

ಕಗ್ಗತ್ತಲಿನಲಿ, ಸುರಂಗದಾಳದಲೂ ಮಿನುಗುವ ಬೆಳಕು ನೀನು: 7ನೇ ವಿವಾಹ ವಾರ್ಷಿಕೋತ್ಸವಕ್ಕೆ ಭಾವುಕ ಪೋಸ್ಟ್‌

ಕೊರಗಜ್ಜನ ಸನ್ನಿಧಾನದಲ್ಲಿ ಪ್ರತಿ ದಿನವೂ ಕೋಲ ನಡೆಯುತ್ತವೆ. ಇಲ್ಲಿ ಹೆಣ್ಣುಮಕ್ಕಳು ಹೋಗುವಂತಿಲ್ಲ ಎನ್ನುವುದು ನಿಯಮ ಎಂದಾಗ ರಶ್ಮಿ ಅವರು ಹಾಗಿದ್ದರೆ ಇದ್ಯಾಕೆ ಎಂದು ನಿಮಗೆ ಅನ್ನಿಸಲಿಲ್ಲವೇ ಎಂದು ಪ್ರಶ್ನಿಸಿದರು. ಅದಕ್ಕೆ ರಕ್ಷಿತಾ, ಇಲ್ಲವೇ ಇಲ್ಲ. ಅದು ಸಂಪ್ರದಾಯ ಅದನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ.  ಇದೇ ವೇಳೆ ರಶ್ಮಿ ಕೂಡ ತಮ್ಮ ಷೋ ಚೆನ್ನಾಗಿ ನಡೆಯಲಿ ಎನ್ನುವ ಕಾರಣಕ್ಕೆ ಕೊರಗಜ್ಜನಿಗೆ ನೈವೇದ್ಯ ಅರ್ಪಿಸಿ ಬಂದಿದ್ದು, ಅದು ಈಡೇರಿದೆ ಎಂದು ಹೇಳಿಕೊಂಡಿದ್ದಾರೆ. 


ಇನ್ನು ಕೊರಗಜ್ಜನ ಕುರಿತು ಹೇಳುವುದಾದರೆ, ಕಾಂತಾರ ಸಿನಿಮಾ ತೆರೆ ಕಂಡ ಮೇಲಂತೂ ಹಲವಾರು ಮಂದಿ ತುಳುನಾಡಿನ ದೈವಗಳಿಗೆ  ಭಕ್ತರಾಗಿದ್ದಾರೆ. ಹಲವಾರು ಗಣ್ಯರು ಸಂಕಷ್ಟ ಬಂದಾಗ ದೈವಗಳನ್ನು ಅರಸಿ ಬರುತ್ತಿದ್ದಾರೆ. ಭಾರತೀಯ ದ್ರಾವಿಡರು ತಮ್ಮ ಪೂರ್ವಜರನ್ನು ಆರಾಧಿಸುತ್ತಾರೆ, ಅವರು ತಮ್ಮ ಸಮುದಾಯಕ್ಕೆ ಹೆಚ್ಚಿನ ಒಳಿತಿಗಾಗಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ ಅವರನ್ನು ಅವರ ನಂತರದ ವಂಶಸ್ಥರು ಗುರುತಿಸಿ ಪೂಜಿಸುತ್ತಿದ್ದರು ಎನ್ನುವ ನಂಬಿಕೆಯಿದೆ. ಕೊರಗಜ್ಜ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕೊರಗ ತನಿಯ. ಇಲ್ಲಿ  ಕೊರಗ ಎಂಬುದು ಸಮುದಾಯದ ಹೆಸರು ಮತ್ತು ಅಜ್ಜ ಎಂಬುದು ತುಳು ಭಾಷೆಯಲ್ಲಿ ಸಾಮಾನ್ಯವಾಗಿ ಹಳೆಯ ಪುರುಷ ನಾಗರಿಕರಿಗೆ ಬಳಸುವ ಪದವಾಗಿದೆ. ತನ್ನ ಮಧ್ಯವಯಸ್ಸಿನಲ್ಲಿ ದೈವತ್ವವನ್ನು ಪಡೆದುಕೊಂಡಿದ್ದರೂ. ಮತ್ತು ಅವನ ಮೇಲಿನ ಪ್ರೀತಿ ಮತ್ತು ವಾತ್ಸಲ್ಯದಿಂದಾಗಿ ಜನರು ಅವನನ್ನು ಅಜ್ಜ ಎಂದು ಕರೆಯಲು ಪ್ರಾರಂಭಿಸಿದರು.
 
ಕೊರಗಜ್ಜನ ಪೂಜಾವಿಧಿವಿಧಾನಗಳು ಸಾಂಪ್ರದಾಯಿಕ ಪೂಜೆಗಿಂತ ಸ್ವಲ್ಪ ವಿಭಿನ್ನವೇ ಆಗಿದೆ. ಕುತ್ತಾರು ಕಟ್ಟೆಯ ಮೂಲ ದೇವರುಗಳಾದ ಪಂಜನ್ದಾಯ ಮತ್ತು ಬಂಟ ದೈವಗಳ ನಡುವೆ ಹೊರಗಿನಿಂದ ಬಂದ ಅರಸು ದೇವತೆಗಳು ಇಟ್ಟಿರುತ್ತಾರೆ, ಆಗ ಮೂಲ ದೇವತೆಗಳು ಕೊರಗಜ್ಜನ ಸಹಾಯ ಬೇಡಿ ಅದಕ್ಕೆ ಪರ್ಯಾಯವಾಗಿ ತಮ್ಮ ಪೂಜಾ ಸ್ಥಾನವನ್ನು ನೀಡುತ್ತಾರೆ. ಕೊರಗಜ್ಜ ದನದ ರಕ್ತವನ್ನು ಚೆಲ್ಲಿ ಅರಸು ದೇವತೆಗಳನ್ನು ಓಡಿಸುತ್ತಾನೆ. ಡೆಕ್ಕಾರು, ಬೊಲ್ಯ,ಸೋಮೇಶ್ವರ, ದೇರಳಕಟ್ಟೆ, ಕುತ್ತಾರು ಸೇರಿ ಹೀಗೆ ಒಟ್ಟು 7 ಕಲ್ಲುಗಳು ಕೋಲ ಸೇವೆಗೆ ಸೇರುತ್ತದೆ.  

ಅಮ್ಮನ ಸೀರೆಯುಟ್ಟು ಮಿಂಚಿದ ನಿವೇದಿತಾ ಗೌಡಗೆ ಹೀಗೆ ಬೆದರಿಕೆ ಹಾಕೋದಾ ಫ್ಯಾನ್ಸ್​!
 

Latest Videos
Follow Us:
Download App:
  • android
  • ios