Asianet Suvarna News Asianet Suvarna News

ಅಮ್ಮನ ಸೀರೆಯುಟ್ಟು ಮಿಂಚಿದ ನಿವೇದಿತಾ ಗೌಡಗೆ ಹೀಗೆ ಬೆದರಿಕೆ ಹಾಕೋದಾ ಫ್ಯಾನ್ಸ್​!

ಅಮ್ಮನ ಸೀರೆಯುಟ್ಟು ಮಿಂಚಿದ ನಿವೇದಿತಾ ಗೌಡ: ಹೊಗಳುತ್ತಲೇ ಹೀಗೆ ಬೆದರಿಕೆ ಹಾಕೋದಾ ಫ್ಯಾನ್ಸ್​?
 

Bigg Boss fame Nivedita Gowda in mothers wedding saree fans react suc
Author
First Published May 2, 2024, 8:39 PM IST

ಬಿಗ್​ಬಾಸ್​​ ಖ್ಯಾತಿಯ ನಿವೇದಿತಾ ಗೌಡ, ತಾಯಿಯ ಮದುವೆ ಸೀರೆಯುಟ್ಟು ರೀಲ್ಸ್​ ಮಾಡಿದ್ದು, ಅಭಿಮಾನಿಗಳ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಸದಾ ಷಾರ್ಟ್ಸ್​, ಜೀನ್ಸ್, ಮಿನಿ ಅಂತೆಲ್ಲಾ ತೊಟ್ಟುಕೊಂಡು ರೀಲ್ಸ್​ ಮಾಡುತ್ತಿದ್ದರು. ದೇಹ ಪ್ರದರ್ಶನ ಮಾಡುತ್ತಾ ಹಾಟ್​ ಆಗಿ ಕಾಣಿಸಿಕೊಂಡು ಟ್ರೋಲ್​ಗೆ ಒಳಗಾಗುತ್ತಿದ್ದರು.ಇದೀಗ ಅಪರೂಪಕ್ಕೆ ಎಂಬಂತೆ ಅಭಿಮಾನಿಗಳಿಂದ ಹೊಗಳಿಸಿಕೊಂಡಿದ್ದಾರೆ. ಸೀರೆಯುಟ್ಟು ಗೊಂಬೆಯ ಹಾಗೆ ಕಾಣಸ್ತೀರಿ ಎನ್ನುತ್ತಿದ್ದಾರೆ. ಆದರೆ ಕೆಲವು ಫ್ಯಾನ್ಸ್​ ಬೆದರಿಕೆಯನ್ನೂ ಹಾಕಿದ್ದಾರೆ.  ಹೀಗೇ ಇದ್ರೆ ಸರಿ, ಕೈಮುಗಿತೀವಿ... ಇಲ್ಲಾಂದ್ರೆ ಉಗಿತೀವಿ ಎಂದಿದ್ದಾರೆ!

ಬಿಗ್​ಬಾಸ್​ ಖ್ಯಾತಿಯ ನಿವೇದಿತಾ ಗೌಡ ಅವರಂತೂ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಫೇಮಸ್​. ಅದೇ ಇನ್ನೊಂದೆಡೆ ಸೌಂದರ್ಯದಲ್ಲಿ ಮಗಳಿಗೇ ಸ್ಪರ್ಧೆ ಒಡ್ಡುತ್ತಾ ಇರೋರು ನಿವೇದಿತಾ ಅಮ್ಮ ಹೇಮಾ ರಮೇಶ್​. ಬಿಗ್​ಬಾಸ್​ 5ರ ಸಮಯದಲ್ಲಿ ನಿವೇದಿತಾ ಗೌಡ ಜೊತೆ ಹೇಮಾ ಅವರೂ  ಎಲ್ಲರ ಗಮನ ಸೆಳೆದಿದ್ದರು.  ಇವರು ನೋಡಲು ಕೂಡ ಸುಮಾರಾಗಿ ಒಂದೇ ರೀತಿಯಿದ್ದು  ಅಕ್ಕ ತಂಗಿಯಂತೆ ಕಾಣಿಸುತ್ತಿದ್ದರು. ಮಗಳು ನಿವೇದಿತಾರಂತೆ ತಾಯಿ ಹೇಮಾ  ಕೂಡ  ಸಕತ್​ ಡ್ರೆಸ್ಸಿಂಗ್ ಸೆನ್ಸ್​ ಹೊಂದಿದ್ದಾರೆ. ಅವರೂ ಮೇಕ್​ ಓವರ್​ ಮಾಡಿಕೊಂಡು ಬಿಟ್ಟರಂತೂ ನಿವೇದಿತಾ ಅಮ್ಮ ಎನ್ನಲು ಸಾಧ್ಯವೇ ಇಲ್ಲ. ಅದೇ ರೀತಿ ಮೇಕಪ್​ ಮಾಡಿಕೊಂಡು ಅವರು  ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವುದೂ ಇದೆ.  ನಿವೇದಿತಾ ಅವರ ಮೈ ಕಟ್ಟುನ್ನೇ ತಾಯಿಯೂ ಹೊಂದಿರುವುದರಿಂದ ಮಗಳಿಗೆ ಕಾಪಿಟೇಷನ್​ ನೀಡುತ್ತಿದ್ದಾರೆ ಎಂದೇ ಎಲ್ಲರೂ ಅಂದುಕೊಳ್ಳುತ್ತಾರೆ. 

ಅಮ್ಮನ ಜೊತೆ ನಿವೇದಿತಾ ರೀಲ್ಸ್​: ಮಗಳಿಗೆ ನೀವಾದ್ರೂ ಬುದ್ಧಿ ಹೇಳ್ಬಾರ್ದಾ ಕೇಳ್ತಿದ್ದಾರೆ ನೆಟ್ಟಿಗರು

ಕೆಲ ದಿನಗಳ ಹಿಂದೆ ನಿವೇದಿತಾ ಅವರು ಅಮ್ಮನ ಜೊತೆ ರೀಲ್ಸ್​ ಮಾಡಿದ್ದರು. ಇದಕ್ಕೆ ಥರಹೇವಾರಿ ಕಮೆಂಟ್ಸ್​ ಬಂದಿವೆ. ಹಲವರು ನಿವೇದಿತಾ ಕಾಲೆಳೆದಿದ್ದು, ಓರ್ವ ವಿವಾಹಿತೆಗೆ ಇರಬೇಕಾದ ಕನಿಷ್ಠ ಗುಣವೂ ನಿನ್ನಲ್ಲಿ ಇಲ್ಲ... ಅಮ್ಮನನ್ನಾದ್ರೂನೋಡಿ ಕಲಿಯಬಾರದಾ ಕೇಳುತ್ತಿದ್ದರೆ, ಅಮ್ಮನಿಗೆ ನಿಮ್ಮ ಮಗಳಿಗೆ ಸ್ವಲ್ಪನಾದ್ರೂ ಬುದ್ಧಿ ಹೇಳಬಾರದಾ? ಮಂಗಳಸೂತ್ರ, ಕುಂಕುಮ ಏನೂ ಇಲ್ಲದೇ ಥೇಟ್​.... ಹಾಗೆ ಕಾಣಿಸುತ್ತಿದ್ದಾಳೆ. ನಿಮ್ಮ ಅಳಿಯ ಚಂದನ್​ ಶೆಟ್ಟಿಗಂತೂ ಬುದ್ಧಿ ಇಲ್ಲ, ಅಮ್ಮನಾಗಿ ನೀವಾದ್ರೂ ಹೇಳಬಾರ್ದಾ ಕೇಳಿದ್ದರು. ಇದೀಗ ಅಮ್ಮನ ಸೀರೆಯುಟ್ಟು ರೀಲ್ಸ್ ಮಾಡಿದ್ದಕ್ಕೆ ಹೊಗಳಿಕೆ ಮಾಡಿದರೂ ವಿವಾಹಿತೆಯ ಯಾವೊಂದು ಲಕ್ಷಣಗಳು ಇಲ್ಲದೇ ಇರುವುದಕ್ಕೆ ಟ್ರೋಲ್​  ಕೂಡ ಮಾಡಿದ್ದಾರೆ.

ಇನ್ನು ನಿವೇದಿತಾ ಅವರ ಅಮ್ಮ  ಹೇಮಾ ಅವರ ಪತಿ ಅಂದರೆ ನಿವೇದಿತಾ ಅವರ ತಂದೆ ಉದ್ಯಮಿಯಾಗಿದ್ದು ಇವರ ಹೆಸರು ಲಕ್ಷ್ಮಣ್​. ನಿವೇದಿತಾ ಬಾರ್ಬಿ ಡಾಲ್​ನಂತೆ ಕಂಗೊಳಿಸಿದರೆ ಅವರ ಅಮ್ಮ ಕೂಡ ತುಂಬಾ ಸುಂದರವಾಗಿದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಅಮ್ಮನ ಸೌಂದರ್ಯವೇ ಮಗಳಿಗೂ ಬಂದಿದೆ ಎಂದು ಹಲವರು ಹಾಡಿ ಹೊಗಳುತ್ತಿದ್ದಾರೆ.  ಅಂದಹಾಗೆ ನಿವೇದಿತಾ ಅವರು, ನಿವೇದಿತಾ ಗೌಡ ಹೆಚ್ಚಾಗಿ ತಮ್ಮ ತಾಯಿಯ ಜೊತೆಗೆ ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಾರೆ.  ತಾಯಿಯ ಜೊತೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಾರೆ. ಇನ್ನು ನಿವೇದಿತಾ ಅವರ ಬಗ್ಗೆ ಹೇಳುವುದಾದರೆ, ಚಂದನ್ ಮತ್ತು ನಿವೇದಿತಾ ಮದುವೆಯಾದದ್ದು  2020ರಲ್ಲಿ 26ರಂದು.  ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿದೆ. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.  

ಸಿಹಿ ಪುಟ್ಟಿ... ನಿನಗೆ ನಿನ್‌ ಫ್ರೆಂಡ್‌ ಸಿಗಬೇಕೆಂದ್ರೆ ಸೀತಮ್ಮಂಗೆ ಬುದ್ಧಿ ಹೇಳು., ಇಲ್ಲಾಂದ್ರೆ ಅನಾಹುತ ಆಗತ್ತೆ..

 

Latest Videos
Follow Us:
Download App:
  • android
  • ios