ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್. ನಟಿ ಚಂದದ ಪರ್ಪಲ್ ಕಲರ್ ಸೀರೆಯುಟ್ಟು ಫೋಟೋ ಶೂಟ್ ಮಾಡಿಸ್ಕೊಂಡಿದ್ದಾರೆ. ಆದರೆ ನಟಿಯ ಮುಖ ಸಪ್ಪಗಿದೆ.

ಹೌದು. ರಚಿತಾ ರಾಮ್ ಫೋಟೋ ಶೂಟ್‌ನಲ್ಲಿ ಸಪ್ಪೆ ಮೋರೆ ಹಾಕಿದ್ದಾರೆ ನಟಿ. ಚಂದ ಸೀರೆಯುಟ್ಟು, ಕೈತುಂಬಾ ಬಳೆ ತೊಟ್ಟು ಸೂಪರ್ ಆಗಿ ರೆಡಿ ಆಗಿ ನಗ್ತಾ ಸ್ಮೈಲ್ ಕೊಡ್ಬೇಕಾದಲ್ಲಿ ನಟಿ ಸಪ್ಪೆ ಮೋರೆ ಹಾಕಿದ್ದಾರೆ.

ಸನ್ನಿ ಲಿಯೋನ್ ಗೌನ್‌ ಹಿಂದೆ ಬಚ್ಚಿಟ್ಟ ಬಾಲಿವುಡ್ ನಟ: ರೀಸನ್ ಏನು..?

ಪರ್ಪಲ್ ಬಣ್ಣದಲ್ಲಿ ಬಿಳಿ ಜರಿಯ ಸೀರೆಗೆ ಹಳದಿ ಬ್ಲೌಸ್ ಹಾಕಿದ್ದಾರೆ ನಟಿ. ಅದಕ್ಕೆ ಹಸಿರು ಬಳೆಗಳು. ಹಣೆಯಲ್ಲೊಂದು ಬಿಂದಿ ಇಟ್ಟು ಎಂದಿನಂತೆ ಸಿಂಪಲ್ ಲುಕ್‌ನಲ್ಲಿ ಮಿಂಚಿದ್ದಾರೆ ರಚಿತಾ.

ಫೊಟೋದಲ್ಲಿ ನಟಿ ಸಪ್ಪೆ ಮೋರೆ ಹಾಕಿದ್ದಾರೆ. ರೀಸನ್ ಏನೋ ಗೊತ್ತಿಲ್ಲ, ಬಹುಶಃ ಪೋಸ್ ಕೊಟ್ಟು ಸುಸ್ತಾಗಿದ್ದಾರೆ ರಚ್ಚು. ಸಪ್ಪೆ ಮೋರೆಲೂ ಕ್ಯೂಟ್ ಆಗಿ ಕಾಣ್ತಾರೆ ರಚಿತಾ ರಾಮ್.