ಸನ್ನಿ ಲಿಯೋನ್ ಚಂದದ ಗೌನ್ ಹಿಂದೆ ಅಡಗಿ ಕುಳಿತಿದ್ಯಾರು ? ಯಾರನ್ನು ಹೈಡ್ ಮಾಡಿದ್ರು ಬಾಲಿವುಡ್ ನಟಿ ಸನ್ನಿ..?

ಬಾಲಿವುಡ್ ನಟಿ ಸನ್ನಿ ಲಿಯೋನ್ ಲಾಕ್‌ಡೌನ್ ಮುಗಿದು ಇದೀಗ ಮುಂಬೈನಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್‌ಡೌನ್‌ನಲ್ಲಿ ಫ್ಯಾಮಿಲಿ ಜೊತೆ ಸಮಯ ಕಳೆದ ನಟಿ ಇದೀಗ ಶೂಟಿಂಗ್‌ಗೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ.

ಬೇರೆ ಬೇರೆ ಶೂಟಿಂಗ್, ಶೆಡ್ಯೂಲ್ ಅಂತ ಮುಂಬೈನಲ್ಲೇ ಅತ್ತಿತ್ತ ಓಡಾಡ್ತಿದ್ದಾರೆ ಬಾಲಿವುಡ್‌ನ ಹಾಟ್ ಬ್ಯೂಟಿ. ಇತ್ತೀಚೆಗೆ ನಟಿ ಚಂದದ್ದೊಂದು ಬೂಮ್‌ರಂಗ್ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬರನ್ನು ರಿವೀಲ್ ಮಾಡಿದ್ದಾರೆ ನಟಿ.

ಹೊಸವರ್ಷಕ್ಕೆ ಬಾತ್‌ಟಬ್‌ನಲ್ಲಿ ಸನ್ನಿ ಪ್ರತ್ಯಕ್ಷ... ಗೋವಾದಲ್ಲಿ ಏನ್‌ ಮಾಡ್ತಿದ್ದಾರೆ?

ನಾವು ಮತ್ತೆ ಬಂದಿದ್ದೇವೆ. ಮತ್ತೊಮ್ಮೆ ನಿಜಕ್ಕೂ ಜೊತೆಯಾಗಿ ಶೂಟ್ ಮಾಡುವುದಕ್ಕೆ ಖುಷಿಯಾಗುತ್ತಿದೆ. ಆನ್‌ಸ್ಕ್ರೀನ್‌ನಲ್ಲಿ ಒಟ್ಟಿಗೆ ಕೆಲಸ ಮಾತ್ರವಲ್ಲ, ಅವನು ನನ್ನ ಫ್ಯಾಮಿಲಿ, ಮಯ್ ಲಿಟಲ್ ಬಿಗ್ ಬ್ರದರ್ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ ಸನ್ನಿ ಲಿಯೋನ್.

ಅಂದ ಹಾಗೆ ನಟಿ ಎರಡು ಬೂಮ್‌ರಂಗ್ ಪೋಸ್ಟ್ ಮಾಡಿದ್ದು ಇದರಲ್ಲಿ ನಟ ರನ್‌ವಿಜಯ್ ಸಿಂಗ್ ಕೂಡಾ ಇದ್ದಾರೆ. ಒಂದರಲ್ಲಿ ನಟ ಸನ್ನಿ ಜೊತೆ ಟರ್ನ್ ಆಗ್ತಿರೋ ಪೋಸ್ ಕೊಟ್ಟಿದ್ದರೆ ಇನ್ನೊಂದರಲ್ಲಿ ನಟಿ ಸನ್ನಿ ಲಿಯೋನ್ ಅವರ ಗೌನ್ ಹಿಂಭಾಗದಲ್ಲಿ ಅಡಗಿ ನಿಂತಿದ್ದಾರೆ ನಟ.

View post on Instagram