Asianet Suvarna News Asianet Suvarna News

ದರ್ಶನ್ ಅರೆಸ್ಟ್: ಮಾತನಾಡಿದ ಬುಲ್ ಬುಲ್ ರಚಿತಾ ರಾಮ್

ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ ಘಟನೆ ಕುರಿತು ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇನ್‌ಸ್ಟಾಗ್ರಾಂಲ್ಲಿ ಪೋಸ್ಟ್ ಹಂಚಿಕೊಂಡಿರುವ ರಚಿತಾ ರಾಮ್, ಕೊನೆಗೆ ಧರ್ಮೋ ರಕ್ಷತಿ ರಕ್ಷಿತಃ ಎಂಬ ಸಾಲು ಬರೆದುಕೊಂಡಿದ್ದಾರೆ.

actress rachita ram reacts darshan arrest case mrq
Author
First Published Jun 18, 2024, 3:03 PM IST

ಬೆಂಗಳೂರು: ರೇಣಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದರ್ಶನ್‌  (Actor Darshan) ಬಗ್ಗೆ ಚಿತ್ರರಂಗದ ಗಣ್ಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದೀಗ ಚಂದನವನದ ಡಿಂಪಲ್ ಕ್ವೀನ್ ರಚಿತಾ ರಾಮ್ (Dimple Queen Rachita Ram) ಘಟನ ಕುರಿತು ತಮ್ಮ ಮೊದಲ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇನ್‌ಸ್ಟಾಗ್ರಾಂಲ್ಲಿ ಪೋಸ್ಟ್ ಹಂಚಿಕೊಂಡಿರುವ ರಚಿತಾ ರಾಮ್, ಕೊನೆಗೆ ಧರ್ಮೋ ರಕ್ಷತಿ ರಕ್ಷಿತಃ ಎಂಬ ಸಾಲು ಬರೆದುಕೊಂಡಿದ್ದಾರೆ. ಬುಲ್ ಬುಲ್ ಸಿನಿಮಾದಲ್ಲಿ ದರ್ಶನ್ ಜೊತೆ  ರಚಿತಾ ರಾಮ್ ಬೆಳ್ಳಿ ಪರದೆಗೆ ಕಾಲಿಟ್ಟಿದ್ದರು. ತದನಂತರ ರಚಿತಾ ರಾಮ್ ಸಾಲು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 

ರಚಿತಾ ರಾಮ್ ಪೋಸ್ಟ್ ಹೀಗಿದೆ

ನಮಸ್ಕಾರ,  
ಈ ನೋಟ್‌ನ ನಾನು ನಟಿಯಾಗಿ ಅಲ್ಲ, ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚೆಗೆ ನಡೆದ  ಪ್ರಕರಣದ ಬಗ್ಗೆ ನನ್ನ ಮಾತು…!

ಮೊದಲನೇಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ.  ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ.

ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿದ ದರ್ಶನ್ ಸರ್ ನನಗೆ ಗುರು ಸಮಾನರು. ನನ್ನ ಜೀವನದ  ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು  ಸ್ವಲ್ಪ ಕಷ್ಟವಾಗತ್ತದೆ. ಏನಿದ್ರೂ ಸತ್ಯ ಪೊಲೀಸ್  ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ  ನನ್ನ ನಂಬಿಕೆ. ನನ್ನ ಮಾಧ್ಯಮ ಮಿತ್ರರು ಈ ಕೇಸ್‌ನ ವರದಿಯಲ್ಲಿ ಪಾದರ್ಶಕವಾಗಿರುತ್ತೀರಿ ಮತ್ತು ನಿಷ್ಪಕ್ಷವಾಗಿ ಕೆಲಸ ಮಾಡುತ್ತೀರಿ ಎಂದು ಆಶಿಸುತ್ತೇನೆ. ಧರ್ಮೋ ರಕ್ಷತಿ ರಕ್ಷಿತಃ ಎಂದು ಸೋಶಿಯಲ್ ಮೀಡಿಯಾದಲ್ಲಿ ನಟಿ ರಚಿತಾ ರಾಮ್ ಬರೆದುಕೊಂಡಿದ್ದಾರೆ.

ರೇಣುಕಾಸ್ವಾಮಿ ಸಾವಿಗೆ ನ್ಯಾಯ ಸಿಗಬೇಕೆಂದ ಸುದೀಪ್

ಬಾಳಿ ಬದುಕಬೇಕಿದ್ದ ರೇಣುಕಾಸ್ವಾಮಿ ಬೀದಿ ಹೆಣವಾಗಿದ್ದಕ್ಕೆ, ಆತನ ಹೆಂಡತಿಗೆ, ಮುಂದೆ ಹುಟ್ಟಿ ಬರುವ ಮಗುವಿಗೆ ಹಾಗೂ ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕೆಂಬುದು ನಮ್ಮ ಅಭಿಪ್ರಾಯವಾಗಿದೆ ಎಂದು ನಟ ಹಾಗೂ ನಿರ್ದೇಶಕ ಕಿಚ್ಚ ಸುದೀಪ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಸಕ್ಸಸ್ ತಲೆಗೆ ಏರಿದ್ರೆ ಏನಾಗುತ್ತೆ ಅನ್ನೋದಕ್ಕೆ ನಟ ದರ್ಶನ್ ದೊಡ್ಡ ಉದಾಹರಣೆ: ಭಾಮಾ ಹರೀಶ್

Latest Videos
Follow Us:
Download App:
  • android
  • ios