ರೇಣುಕಾಸ್ವಾಮಿ ಪ್ರಕರಣದಲ್ಲಿ ಜಾಮೀನಿನ ಮೇಲಿರುವ ಪವಿತ್ರಾ ಗೌಡ, ಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿದ್ದಾರೆ. ರೆಡ್ ಕಾರ್ಪೆಟ್ ಅಂಗಡಿಯನ್ನು ಪುನಃ ಆರಂಭಿಸಿದ್ದಾರೆ. ತಮಿಳು ಹಾಡಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದರ್ಶನ್ ಮೈಸೂರಿನಲ್ಲಿ ಇರಲು ನ್ಯಾಯಾಲಯ ಅನುಮತಿ ನೀಡಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಸಿಲುಕಿ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ ನಟರಾದ ದರ್ಶನ್ ಮತ್ತು ಪವಿತ್ರಾ ಗೌಡ (Pavithra Gowda). ಜೈಲಿನಿಂದ ಹೊರಕ್ಕೆ ಬರುತ್ತಿದ್ದಂತೆಯೇ ಪವಿತ್ರಾ ಗೌಡ ಅವರು ಹಲವಾರು ಕಡೆಗಳಲ್ಲಿ ತಿರುಗಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ. ಈಚೆಗಷ್ಟೇ ನಟಿ ಪವಿತ್ರಾ ಗೌಡ ಅವರು, ಕುಂಭಮೇಳಕ್ಕೆ ಭೇಟಿ ಕೊಟ್ಟಿದ್ದರು. ಮೌನಿ ಅಮವಾಸ್ಯೆಯ ದಿನ ಪುಣ್ಯಸ್ನಾನ ಮಾಡಿ ನೆಗೆಟಿವ್ ಎನರ್ಜಿಯೆಲ್ಲಾ ಮಾಯವಾಗಿದೆ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಅಂದಹಾಗೆ ಅವರು, ಜೈಲಿನಿಂದ ಹೊರಕ್ಕೆ ಬಂದ ಮೇಲೆ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ. ಆರಂಭದಲ್ಲಿ ಅವರು, ದೇವಿಯ ದರ್ಶನ್ ಪಡೆದು ಒದ್ದೆ ಮೈನಲ್ಲಿ ಸೇವೆ ಮಾಡಿ ಭಕ್ತಿಯಿಂದ ದೇವರ ಮುಂದೆ ಅಡ್ಡಬಿದ್ದಿದ್ದರು. ಅದಾದ ಬಳಿಕ ತಾವು ಮೊದಲು ನಡೆಸುತ್ತಿದ್ದ ರೆಡ್ ಕಾರ್ಪೆಟ್ ಶಾಪ್ ಅನ್ನು ಮತ್ತೆ ಓಪನ್ ಮಾಡಿಕೊಂಡು ಆ ಮೊದಲಿನಂತೆ ಮತ್ತೆ ವ್ಯಾಪರ-ವಹಿವಾಟು ಶುರು ಮಾಡಿದ್ದಾರೆ.
ಇದೀಗ ಪವಿತ್ರಾ ಗೌಡ ಅವರು, ತಮಿಳು ಚಿತ್ರದ ಹಾಡೊಂದಕ್ಕೆ ರೀಲ್ಸ್ ಮಾಡಿದ್ದಾರೆ. ಇದರಲ್ಲಿ ಮಾಮೂಲಿನಂತೆ ನಟಿಯ ಸೌಂದರ್ಯ ಎದ್ದು ಕಾಣುತ್ತಿದೆ. ಹಾಸಿಗೆಯ ಮೇಲೆ ತಲೆದಿಂಬು ಇಟ್ಟುಕೊಂಡು ಈ ಹಾಡಿಗೆ ಅವರು ರೀಲ್ಸ್ ಮಾಡಿದ್ದಾರೆ. ಸೀರೆಯಲ್ಲಿ ನಟಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಫಳಫಳ ಹೊಳೆಯುತ್ತಿದ್ದಾರೆ. ಈ ವಿಡಿಯೋ ಥರಹೇವಾರಿ ಕಮೆಂಟ್ಸ್ ಸುರಿಮಳೆಯಾಗಿದೆ. ಹಲವರು ನಟಿಯ ಸೌಂದರ್ಯವನ್ನು ಹೊಗಳಿದ್ದಾರೆ. ಜೈಲಿನಿಂದ ಬಂದ ಮೇಲೆ ಮತ್ತಷ್ಟು ಸ್ಮಾರ್ಟ್ ಆಗಿದ್ದೀರಿ ಎಂದು ಕೆಲವರು ಹೇಳಿದರೆ, ಈಗಲಾದರೂ ಮಗಳ ಜೊತೆ ಚೆನ್ನಾಗಿ ಸಂಸಾರ ಮಾಡಿ ಎಂದು ಮತ್ತೆ ಕೆಲವರು ಹೇಳಿದ್ದಾರೆ. ಆದರೆ ಹಲವರು ಮಾತ್ರ ನಮಗೆ ಕಮೆಂಟ್ ಮಾಡಲು ಭಯ ಆಗ್ತಿದೆ, ಏನೂ ಹೇಳಲ್ಲಪ್ಪಾ, ಶೆಡ್ ಸಹವಾಸ ಯಾರಿಗೆ ಬೇಕು ಎಂದು ಪ್ರಶ್ನಿಸಿದ್ದಾರೆ.
ತಮ್ಮದೇ ಫಸ್ಟ್ ನೈಟ್ ವಿಡಿಯೋ ನೋಡಿ ನಾಚಿ ನೀರಾದ ಕಿಚ್ಚ ಸುದೀಪ್! ತುಂಟತನಕ್ಕೆ ಫ್ಯಾನ್ಸ್ ಫಿದಾ
ಇನ್ನು ನಟಿಯ ಕುರಿತು ಹೇಳುವುದಾದರೆ, ಅವರು ತಮ್ಮ ಉದ್ಯಮ ರೆಡ್ ಕಾರ್ಪೆಟ್ ಸ್ಟೂಡಿಯೋ ಪುನಃ ತೆರೆಯುವ ತಯಾರಿಯಲ್ಲಿ ಇದಾಗಲೇ ಸಾಕಷ್ಟು ಶಾಪಿಂಗ್ ಮಾಡಿದ್ದರು. ಇದರ ರೀ ಲಾಂಚ್ಗೂ ರೆಡಿ ಮಾಡಿಕೊಂಡಿದ್ದು, ದರ್ಶನ್ ಅವರ ಬರುವಿಕೆಯನ್ನು ಅಭಿಮಾನಿಗಳು ಕಾಯುತ್ತಿದ್ದಾರೆ. ಹೊರ ರಾಜ್ಯಕ್ಕೆ ಹೋಗಲು ಕೋರ್ಟ್ ಅನುಮತಿ ನೀಡಿರುವುದರಿಂದ ಇದಾಗಲೇ ಹಲವಾರು ಕಡೆಗಳಲ್ಲಿ ನಟಿ ಹೋಗಿದ್ದಾರೆ. ತಮ್ಮ ಸ್ಟುಡಿಯೋಗಾಗಿ ದೆಹಲಿಯಲ್ಲಿ ಶಾಪಿಂಗ್ ಕೂಡ ಮಾಡಿದ್ದಾರೆ. ದರ್ಶನ್ ಅವರು ಜೈಲಿನಲ್ಲಿ ಇದ್ದ ಸಂದರ್ಭದಲ್ಲಿ ಅವರ ಪತ್ನಿ ವಿಜಯಲಕ್ಷ್ಮಿಅಸ್ಸಾಂನ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದರು. ಪವಿತ್ರಾ ಕೂಡ ಅಲ್ಲಿಗೆ ಹೋಗಲು ಸಿದ್ಧತೆ ನಡೆಸಿದ್ದರು ಎಂದು ಕೇಳಿಬಂದಿತ್ತು.
ಇದಾಗಲೇ ಕೋರ್ಟ್ ದರ್ಶನ್ ಅವರಿಗೆ ಮೈಸೂರಿನಲ್ಲಿ ಇರಲು ಅನುಮತಿ ನೀಡಿದೆ. ವೈದ್ಯರ ಜೊತೆ ಸಮಾಲೋಚನೆ, ಫಾರ್ಮ್ಹೌಸ್ಗೆ ಭೇಟಿ ಹಾಗೂ ತಾಯಿ ಭೇಟಿಗೆ ಸಂಬಂಧಿಸಿದಂತೆ ದರ್ಶನ್ ಮನವಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ, ಇದೇ 10ನೇ ತಾರೀಖಿನವರೆಗೂ ಮೈಸೂರಿನಲ್ಲಿ ಇರಲು ಅನುಮತಿ ನೀಡಲಾಗಿದೆ.
ಪ್ರಯಾಗ್‌ರಾಜ್‌ನಲ್ಲಿ ಪವಿತ್ರಾ ಗೌಡ: ಈ ಪುಣ್ಯಸ್ನಾನದ ಬಳಿಕ ನೆಗೆಟಿವ್ ಎನರ್ಜಿಯೆಲ್ಲಾ ಮಾಯ!
