ಕಿಚ್ಚ ಸುದೀಪ್ ಅವರು ಸಿನಿಮಾಕ್ಕೂಪ್ರವೇಶಿಸುವ ಮುನ್ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅವರ ಮೊದಲ ಹಾಸಿಗೆಯ ಜಾಹೀರಾತಿನ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಇದು ಸದ್ದು ಮಾಡುತ್ತಿದೆ.
ಸುದೀಪ್ ಎಂದರೆ ಸಾಕು, ಕರುನಾಡಿನ ಜನತೆಗೆ ಬೇರೆ ಏನು ಹೇಳುವುದೇ ಬೇಡ. ಇವರಿಗೆ ಬೇರೆ ಇಂಟ್ರೊಡಕ್ಷನ್ ಕೂಡ ಅಗತ್ಯವಿಲ್ಲಬಿಡಿ. ಅದರಲ್ಲಿಯೂ ಬಿಗ್ಬಾಸ್ನ 11 ಸೀಸನ್ ಬಳಿಕ ಸುದೀಪ್ ಕರ್ನಾಟಕದಾಚೆಯೂ ಸಕತ್ ಫೇಮಸ್ ಆದವರು. 1973ರಲ್ಲಿ ಶಿವಮೊಗ್ಗದಲ್ಲಿ ಹುಟ್ಟಿ, ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದಿರುವ ಸುದೀಪ್ ಅವರ ಹಿನ್ನೆಲೆಯನ್ನು ನೋಡುವುದಾದರೆ, ಇವರು ಮೊದಲು ಜಾಹೀರಾತಿನಲ್ಲಿ ಹಾಗೂ ಕಿರುತೆರೆಯಲ್ಲಿ ಫೇಮಸ್ ಆಗಿ ಬಳಿಕ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟವರು. ಉದಯ ಟಿವಿಯ 'ಪ್ರೇಮದ ಕಾದಂಬರಿ' ಮೂಲಕ ಸೀರಿಯಲ್ ಕ್ಷೇತ್ರಕ್ಕೆ ಹೆಜ್ಜೆ ಇಟ್ಟ ಸುದೀಪ್ ಅವರು, ಆಗಲೇ ಜಾಹೀರಾತಿನಲ್ಲಿಯೂ ಕಾಣಿಸಿಕೊಂಡಿದ್ದರು. 1997ರಲ್ಲಿ ತೆರೆಕಂಡ 'ತಾಯವ್ವ' ಅವರ ಮೊದಲ ಚಿತ್ರ. ಬಳಿಕ 1999ರಲ್ಲಿ ಪ್ರತ್ಯಾರ್ಥ ಎನ್ನುವ ಸಿನಿಮಾದಲ್ಲಿ ಪೋಷಕ ಪಾತ್ರ ಮಾಡಿದರು. ಸ್ಪರ್ಶ ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ನಾಯಕನಾದ ಸುದೀಪ್ ಅವರಿಗೆ ಬ್ರೇಕ್ ಕೊಟ್ಟದ್ದು 2001ರಲ್ಲಿ ಬಿಡುಗಡೆಯಾದ ಹುಚ್ಚ ಸಿನಿಮಾ. ಅಲ್ಲಿಂದ ಸುದೀಪ್ ಅವರ ಹಿಂದೆ ಕಿಚ್ಚ ಪದ ಸೇರಿತು. ಆ ಚಿತ್ರದಲ್ಲಿ ಅವರ ಹೆಸರು ಕಿಚ್ಚ. ಅಲ್ಲಿಂದ ಇಲ್ಲಿಯವರೆಗೂ ಸುದೀಪ್ ಎನ್ನುವುದಕ್ಕಿಂತ ಹೆಚ್ಚಾಗಿ ಕಿಚ್ಚ ಸುದೀಪ್ ಎಂದೇ ಎಲ್ಲರ ಬಾಯಲ್ಲಿ ನಲಿದಾಡುತ್ತಿದ್ದಾರೆ.
ಇದೀಗ ಅವರ ಹಳೆಯ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಅದು ಅವರ ಫಸ್ಟ್ ನೈಟ್ ವಿಡಿಯೋ. ಅದನ್ನು ನೋಡಿ ಖುದ್ದು ಸುದೀಪ್ ಅವರೇ ನಾಚಿ ನೀರಾಗಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು. ಅಂದಹಾಗೆ ಇದು ಅವರು ಹಾಸಿಗೆ ಒಂದಕ್ಕೆ ನೀಡಿರುವ ಜಾಹೀರಾತು. Sleeping bed ಎನ್ನುವ ಅಡ್ವಟೈಸ್ನಲ್ಲಿ ಸುದೀಪ್ ಅವರು ಮೊದಲ ರಾತ್ರಿಯ ಸನ್ನಿವೇಶ ಸೃಷ್ಟಿಸಿ ಜಾಹೀರಾತು ನೀಡಿದ್ದರು. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ, ಸುದೀಪ್ ಅವರು ಗೆಸ್ಟ್ ಆಗಿ ಬಂದ ಸಂದರ್ಭದಲ್ಲಿ, ಈ ವಿಡಿಯೋ ಪ್ರಸಾರ ಮಾಡಲಾಗಿತ್ತು. ಅದೀಗ ಮತ್ತೊಮ್ಮೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ನಟನೆಯಿಂದ ಸುದೀಪ್ ನಿವೃತ್ತಿ? ಸ್ಯಾಂಡಲ್‌ವುಡ್‌ನಲ್ಲಿ ಸಂಚಲನ ಸೃಷ್ಟಿಸಿದ ಕಿಚ್ಚನ ಹೇಳಿಕೆ- ಹೇಳಿದ್ದೇನು ಕೇಳಿ..
ಅದರಲ್ಲಿ ಮೊದಲ ರಾತ್ರಿಯ ತುಂಟತನ, ನಗು ಎಲ್ಲವನ್ನೂ ನೋಡಿ ಕಾರ್ಯಕ್ರಮ ನಡೆಸುತ್ತಿರುವ ರಮೇಶ್ ಅವರು ನಾಚಿಕೊಂಡಿದ್ದರೆ, ಸುದೀಪ್ ಕೂಡ ಒಂದು ಹಂತದಲ್ಲಿ ನಾಚಿಕೊಂಡಿರುವುದನ್ನು ನೋಡಬಹುದು. ಸುದೀಪ್ ಅವರು ಬಿಗ್ಬಾಸ್-12ನೇ ಸೀಸನ್ನಿಂದ ತಾವು ಕಾಣಿಸಿಕೊಳ್ಳುವುದಿಲ್ಲ ಎಂದು ಇದಾಗಲೇ ಘೋಷಿಸಿದ್ದಾರೆ. ಆದರೆ ಅವರು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ. ಆದ್ದರಿಂದ ಸುದೀಪ್ ಅವರು ಸದ್ಯ ಸದ್ದು ಮಾಡುತ್ತಿರುವ ಕಾರಣ, ಅವರ ಹಳೆಯ ವಿಡಿಯೋಗಳು ವೈರಲ್ ಆಗುತ್ತಿದ್ದು, ಇದು ಕೂಡ ಒಂದಾಗಿದೆ.
ಅಂದಹಾಗೆ ಸುದೀಪ್ ಅವರು, ಹಿಂದಿಯ ಪೂಂಕ್, ತೆಲುಗಿನ ಈಗ, ಬಾಹುಬಲಿ, ತಮಿಳಿನ ಪುಲಿ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆ ಆರಂಭಿಸಿರುವ ಸುದೀಪ್ ಅವರು ಈ ಬ್ಯಾನರ್ ಅಡಿ 2006ರಲ್ಲಿ ಮೊದಲಿಗೆ ಮೈ ಆಟೋಗ್ರಾಪ್ ಚಿತ್ರ ಬಿಡುಗಡೆ ಮಾಡಿದರು. ಬಳಿಕ, 73 ಶಾಂತಿ ನಿವಾಸ, ಮಾಣಿಕ್ಯ, ಜಿಗರಥಂಡ, ಅಂಬಿ ನಿಂಗೆ ವಯಸ್ಸಾಯ್ತೋ, ವಾರಸ್ದಾರ ಎಂಬ ಸೀರಿಯಲ್ ಕೂಡ ನಿರ್ಮಿಸಿದ್ದಾರೆ. 2001ರಲ್ಲಿ ಕೇರಳ ಮೂಲದ ಪ್ರಿಯಾ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಸಾನ್ವಿ ಎಂಬ ಪುತ್ರಿಯನ್ನು ಪಡೆದಿದ್ದಾರೆ. ಈ ವಿಡಿಯೊ ಅನ್ನು ದೀಪು ಕ್ರಿಯೇಟರ್ ಎನ್ನುವ ಇನ್ಸ್ಟಾಗ್ರಾಮ್ ಶೇರ್ ಮಾಡಿಕೊಂಡಿದೆ. ಇಲ್ಲಿದೆ ನೋಡಿ ವಿಡಿಯೋ.
ಸುದೀಪ್ ಕೊನೆಯ ಬಿಗ್ಬಾಸ್ನಲ್ಲಿ ಕಣ್ಣೀರ ಕೋಡಿ! ಆ ದನಿ ಕೇಳಿ ಕಣ್ಣೀರಾದ ಕಿಚ್ಚನ ಅಪ್ಪ-ಮಗಳು
