ಮಹಾಕುಂಭ ಮೇಳ ನಡೆಯುತ್ತಿರುವುದು ಗೊತ್ತೇ ಇದೆ. ಇದರಲ್ಲಿ ನಟಿ ಪವಿತ್ರಾ ಗೌಡ ಅವರು ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೌನಿ ಅಮವಾಸ್ಯೆಯಂದು ಪ್ರಯಾಗ್​ ರಾಜ್​ನಲ್ಲಿ ಪುಣ್ಯಸ್ನಾನ.. 

ಉತ್ತರ ಪ್ರದೇಶದ ಪ್ರಯಾಗ್‌ ರಾಜ್‌ನಲ್ಲಿ ಮಹಾಕುಂಭ ಮೇಳ (Mahakumbha Mela) ನಡೆಯುತ್ತಿರುವುದು ಗೊತ್ತೇ ಇದೆ. ಇದರಲ್ಲಿ ನಟಿ ಪವಿತ್ರಾ ಗೌಡ (Pavithra Gowda) ಅವರು ಭಾಗಿಯಾಗಿದ್ದಾರೆ. ಈ ಬಗ್ಗೆ ಸ್ವತಃ ಪವಿತ್ರಾ ಗೌಡ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೌನಿ ಅಮವಾಸ್ಯೆಯಂದು ಪ್ರಯಾಗ್​ ರಾಜ್​ನಲ್ಲಿ ಪುಣ್ಯಸ್ನಾನ.. ಈ ಪವಿತ್ರಸ್ನಾನದ ಬಳಿಕ ನೆಗೆಟಿವ್ ಎನರ್ಜಿಯೆಲ್ಲಾ ಮಾಯ' ಎಂದಿದ್ದಾರೆ ಪವಿತ್ರಾ ಗೌಡ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Murder Case) ಆರೋಪಿಯಾಗಿರುವ ನಟಿ ಪವಿತ್ರಾ ಗೌಡ ಅವರು, ಕಳೆದ ತಿಂಗಳು ಜಾಮೀನಿನ ಮೇಲೆ ಬಿಡುಗಡೆ ಆಗಿರುವುದು ಗೊತ್ತೇ ಇದೆ. ಇದೀಗ ಪ್ರಯಾಗ್‌ರಾಜ್‌ನಲ್ಲಿರುವ ಪವಿತ್ರಾ ಗೌಡ, ಮೌನಿ ಅಮವಾಸ್ಯೆಯಂದು ಶಾಹಿ ಸ್ನಾನ ಮಾಡಿ, ಇದ್ರಿಂದ ಪುಣ್ಯ ಸಿಕ್ಕಿದೆ, ನಾನೆ ಧನ್ಯ ಎಂದಿದ್ದಾರೆ. ಪವಿತ್ರಾ ಗೌಡ ಈ ಪೋಸ್ಟ್‌ಗೆ ವಿಭಿನ್ನ ರೀತಿಯ ಕಾಮೆಂಟ್‌ಗಳು ಹರಿದಾಡುತ್ತಿವೆ. 

ಆಪ್ತರು ಹೇಳೋ ಪ್ರಕಾರ, ನಟ ದರ್ಶನ್ ಮುಂದಿನ ಹೆಜ್ಜೆಗಳು ಹೀಗಿರಬಹುದು!

ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ನಟಿ ಪವಿತ್ರಾ ಗೌಡ, ಜಾಮೀನಿನ ಬಳಿಕ ಹೆಚ್ಚುಹೆಚ್ಚು ದೈವಭಕ್ತಿಗೆ ಮೊರೆ ಹೋಗಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದವರೇ ಸೀದಾ, ದೇವಿಯ ದರ್ಶನ್ ಪಡೆದು ಒದ್ದೆ ಮೈನಲ್ಲಿ ಸೇವೆ ಮಾಡಿ ಭಕ್ತಿಯಿಂದ ದೇವರ ಮುಂದೆ ಅಡ್ಡಬಿದ್ದಿದ್ದಾರೆ. ತಾವು ಮೊದಲು ನಡೆಸುತ್ತಿದ್ದ ರೆಡ್ ಕಾರ್ಪೆಟ್‌ ಶಾಪ್‌ ಅನ್ನು ಮತ್ತೆ ಓಪನ್ ಮಾಡಿಕೊಂಡು ಆ ಮೊದಲಿನಂತೆ ಮತ್ತೆ ವ್ಯಾಪರ-ವಹಿವಾಟು ಶುರು ಮಾಡಿದ್ದಾರೆ. 

ನಟ ದರ್ಶನ್ (Darshan) ಹಾಗೂ ಪವಿತ್ರಾ ಗೌಡ ಮಧ್ಯೆ ಈಗಿನ ಸಂಬಂಧ ಹೇಗಿದೆ ಎಂಬುದನ್ನು ಆ ದೇವರೇ ಬಲ್ಲ. ಅದನ್ನು ಹೊರಗಿನವರು ಹೇಗೆ ಹೇಳಲಾಗುವುದು? ಯಾವುದೇ ಸಾಕ್ಷಿ ಸಿಕ್ಕರೆ ಅದನ್ನು ಕನ್ಫರ್ಮ್ ಮಾಡಬಹುದಷ್ಟೇ. ಆದರೆ, ಮಗಳೊಂದಿಗೆ ತಾವು ಈಗ ಖುಷಿಖುಷಿಯಾಗಿ ಇರೋ ಫೋಟೋವನ್ನು ಪವಿತ್ರಾ ಗೌಡ ಆಗಾಗ ಪೋಸ್ಟ್ ಮಾಡುತ್ತಾ ಇರುತ್ತಾರೆ. ಈ ಮೊದಲಿನಂತೆ ಪವಿತ್ರಾ ಗೌಡ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. 

ರಾಜಮೌಳಿ-ಮಹೇಶ್ ಬಾಬು ಮಾಡ್ತಿರೋದು ಅಂತಿಂಥದ್ದಲ್ಲ, ಆಫ್ರಿಕಾದಲ್ಲೇ ಯಾಕೆ ಶೂಟ್?

ಒಟ್ಟಿನಲ್ಲಿ, ಸದ್ಯ ಪವಿತ್ರಾ ಗೌಡ ಪ್ರಯಾಗ್‌ರಾಜ್‌ನಲ್ಲಿ ನೆಗೆಟಿವ್ ಎನರ್ಜಿ ತೊಳೆದುಕೊಳ್ಳುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನಬಹುದು. ಪುಣ್ಯಸ್ನಾದ ಬಳಿಕ ವೀಡಿಯೋವನ್ನು ಪೋಸ್ಟ್ ಮಾಡಿ, ಸೋಷಿಯಲ್ ಮೀಡಿಯಾ ಮೂಲಕ ಅದನ್ನು ಜಗಜ್ಜಾಹೀರು ಮಾಡಿದ್ದಾರೆ ಪವಿತ್ರಾ ಗೌಡ. 

View post on Instagram