ವಸಿಷ್ಠ ಸಿಂಹ ಮಾತ್ರವಲ್ಲ ನಟಿ ಹರಿಪ್ರಿಯಾಗೆ 17ನೇ ವಯಸ್ಸಿಗೆ ಲವ್ ಆಗಿತ್ತಂತೆ. ಫಸ್ಟ್‌ ಕಿಸ್‌ ಚೆನ್ನಾಗಿರಲಿಲ್ಲ ಎಂದು ಬೇಸರ ಮಾಡಿಕೊಂಡ ನಟಿ...

ಕನ್ನಡ ಚಿತ್ರರಂಗದ ಸುಂದರ ನಟಿ ಹರಿಪ್ರಿಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ಪರ್ಸನಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಗುಡ್ ನ್ಯೂಸ್ ಕೊಡುವುದಾಗಿ ಹೇಳಿ ಯುಟ್ಯೂಬ್ ಚಾನೆಲ್ ಆರಂಭಿಸಿದ್ದರು. ಎಂಗೇಜ್‌ಮೆಂಟ್ ವಿಡಿಯೋ ವೈರಲ್ ಆಗುತ್ತಿದ್ದ ಬೆನ್ನಲೆ ಮತ್ತೊಂದು ಇಂಟ್ರೆಸ್ಟಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ...ನನ್ನ ಬಗ್ಗೆ ಯಾರಿಗೂ ಗೊತ್ತಿರದ ಸಂಗತಿಗಳು ಎಂದು. ಇದೆಲ್ಲಾ ಅಭಿಮಾನಗಳು ಕೇಳಿರುವ ಪ್ರಶ್ನೆ ಎಂದಿದ್ದಾರೆ.

- ನಿಮಗೆ ನಿಕ್ ನೇಮ್ ಇದ್ಯಾ?
ಹರಿಪ್ರಿಯಾ ಅನ್ನೋದು ನನ್ನ ಸ್ಕ್ರೀನ್ ನೇಮ್ ಆದರೆ ನನ್ನ ನಿಜವಾದ ಹೆಸರು ಬಂದು ಶ್ರುತಿ. ಪ್ರತಿಯೊಬ್ಬರು ಶ್ರುತಿ ಎಂದು ಕರೆಯುತ್ತಾರೆ. ಸಿನಿಮಾ ರಿಲೀಸ್ ಆದ್ಮೇಲೆ ಪಾತ್ರದ ಹೆಸರನ್ನು ಬಳಸಿಕೊಂಡು ಕರೆಯುತ್ತಾರೆ. ನನಗೆ ನಿಕ್ ನೇಕ್ ಇಟ್ಟಿಲ್ಲ ಎಂದು ಆಗಾಗ ಅಮ್ಮನಿಗೆ ದೂರು ಹೇಳುವೆ.

- ಹೀರೋಯಿನ್ ಆಗಿಲ್ಲ ಅಂದ್ರೆ ಮತ್ತೇನು? 
ಸ್ಕೂಲ್‌ನಲ್ಲಿ ಡ್ಯಾನ್ಸ್ ಮಾಡಿದಾಗ ಅಥವಾ ಮೇಕಪ್ ಮಾಡಿದಾಗ ಚೆನ್ನಾಗಿದೆ ಎಂದು ಹೇಳಿದಾಗ ಅಥವಾ ಬಾಡಿ ಲ್ಯಾಂಗ್ವೇಜ್ ಸೂಪರ್ ಆಗಿದೆ ಎಂದು ಹೇಳಿದಾಗ ನನಗೆ ಚೂರು ಇಷ್ಟ ಆಗುತ್ತಿರಲಿಲ್ಲ. ಜೀವನದಲ್ಲಿ ಹೀರೋಯಿನ್ ಆಗಲ್ಲ ನಾನು ಬ್ಯುಸಿನೆಸ್ ಮಾಡ್ತೀನಿ ಕಂಪನಿ ಓಪನ್ ಮಾಡ್ತೀನಿ ಎಂದು ಹೇಳುತ್ತಿದ್ದೆ. ಇಡೀ ಕುಟುಂಬದಲ್ಲಿ ತುಂಬಾ ಚೆನ್ನಾಗಿ ಓದುತ್ತಿದ್ದೆ ಸ್ಕೂಲ್ ಅಥವಾ ಕಾಲೇಜ್ ಮುಗಿದ ಮನೆಗೆ ಬಂದ ತಕ್ಷಣ ಬುಕ್ ಓಪನ್ ಮಾಡಿಕೊಂಡು ಓದಲು ಶುರು ಮಾಡುತ್ತಿದ್ದೆ. 16ನೇ ವಯಸ್ಸಿಗೆ ನಾನು ಸಿನಿಮಾ ಜರ್ನಿ ಶುರು ಮಾಡಿದೆ. ನನ್ನ ಡ್ಯಾನ್ಸ್‌ ಪರ್ಫಾರ್ಮೆನ್ಸ್‌ ನೋಡಿ ನನಗೆ ತುಳು ಸಿನಿಮಾ ಆಫರ್ ಕೊಟ್ಟರು. 15 ವರ್ಷ ಜರ್ನಿಯಲ್ಲಿ ನಾನು ವಿಭಿನ್ನ ಪಾತ್ರಗಳನ್ನು ಮಾಡಿಕೊಂಡು ಜನರನ್ನು ಮನೋರಂಜಿಸಿರುವೆ. ಕೆಲವು ನಿರ್ದೇಶಕರು ನನಗೆಂದು ಕಥೆ ಬರೆಯುತ್ತಾರೆ. ಇಷ್ಟು ವರ್ಷ ಚಿತ್ರರಂಗದಲ್ಲಿ ಉಳಿದುಕೊಳ್ಳುವುದು ಸುಮ್ಮನೆ ಅಲ್ಲ. 

ಮೂಗು ಚುಚ್ಚಿಸಿಕೊಂಡ ನಟಿ ಹರಿ ಪ್ರಿಯಾ; ಮದುವೆ ಫಿಕ್ಸ್‌ ಆಗಿದ್ಯಾ?

- ಫಸ್ಟ್‌ ಲವ್?
ತುಂಬಾ ಜನರು ನನ್ನ ಫಸ್ಟ್‌ ಲವ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಟೀನೇಜ್‌ನಲ್ಲಿ ಆಗುವ ಲವ್‌ ತುಂಬಾ ಕನ್ಫ್ಯೂಸಿಂಗ್ ಲವ್ ಏಕೆಂದರೆ ಆ ವಯಸ್ಸು ನಮ್ಮನ್ನು ಮೇಕ್‌ ಮಾಡ್ಬೇಕು ಇಲ್ಲ ಬ್ರೇಕ್ ಮಾಡಬಹುದು. ನಮ್ಮ ಪೋಷಕರು ನಮಗೆ ಸಪೋರ್ಟ್ ಮಾಡಿ ಅರ್ಥ ಮಾಡಿಸಿದಾಗ ಒಳ್ಳೆಯ ವ್ಯಕ್ತಿ ಆಗುತ್ತೀವಿ. ಆ ಸಮಯದಲ್ಲಿ ನನ್ನ ತಾಯಿ ಸಪೋರ್ಟ್ ಮಾಡಿದ್ದರು. 17ನೇ ವಯಸ್ಸಿದ್ದಾಗ ಫಸ್ಟ್‌ ಲವ್ ಆಯ್ತು ಕೆಲವು ತಿಂಗಳು ನಡೆಯಿತ್ತು ಅಷ್ಟೇ. 

- ಯಾರಿಗೂ ಗೊತ್ತಿರದ ಒಂದು ಸೀಕ್ರೆಟ್?
ನಾನು ಈಗಲೂ ಅಮ್ಮನ ಪಕ್ಕ ಮಲಗಿಕೊಳ್ಳುವುದು. ನನ್ನ ಕ್ಲೋಸ್ ಫ್ರೆಂಡ್ಸ್‌ಗಳಿಗೆ ಗೊತ್ತಿದೆ. ನನ್ನ ರೂಮ್‌ ನನಗೆ ಇದೆ ಆದರೆ ಅಮ್ಮನ ಜೊತೆ ಮಲಗುವುದು ಖುಷಿ ಕೊಡುತ್ತದೆ. 

- ವಿಚಿತ್ರ ಅಭ್ಯಾಸ?
ಇದು ವಿಚಿತ್ರ ಅಥವಾ ಒಳ್ಳೆ ಗುಣ ನನಗೆ ಗೊತ್ತಿಲ್ಲ. ಯಾವ ವಸ್ತು ಎಲ್ಲಿ ಇರಬೇಕು ಅಲ್ಲೇ ಇರಬೇಕು. ಶೂ ಒಂದು ಕಡೆ ಸಾಕ್ಸ್‌ ಒಂದು ಕಡೆ ಇದ್ರೆ ಇಷ್ಟ ಆಗಲ್ಲ ಆದರೆ ಪ್ರತಿಯೊಬ್ಬರನ್ನು ಗಮನಿಸಿ ನೋಡುವೆ. 

4 ವರ್ಷದ ಹಿಂದಿನ ಹರಕೆ ಈಗ ತೀರಿಸಿದ ನಟ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಂಹ ಪ್ರಿಯಾ!

- ಫಸ್ಟ್‌ ಕಿಸ್? 
ನನ್ನ ಸಿನಿಮಾವೊಂದಕ್ಕೆ ನಾನು ಕಿಸ್ ಸೀನ್‌ ಮಾಡಬೇಕಿತ್ತು. ಮಾಡಲ್ಲ ಎಂದು ಹೇಳಿದೆ ಆದರೆ ನಿರ್ದೇಶಕರು ಪಾತ್ರಕ್ಕೆ ಅಗತ್ಯವಿದೆ ಎನ್ನುತ್ತಾರೆ. ಕಿಸ್ ಸೀನ್ ಆದ್ಮೇಲೆ ಅಳುತ್ತಿದ್ದ ಕೂತಿದ್ದೆ. ಸಿನಿಮಾಗೋಸ್ಕರ ನಾನು ಕಿಸ್ ಮಾಡಿರುವುದು ಹೀಗಾಗಿ ಡ್ರೀಮ್ ಡ್ರೀಮಿ ಅಗಿರಲಿಲ್ಲ. 

YouTube video player