4 ವರ್ಷದ ಹಿಂದಿನ ಹರಕೆ ಈಗ ತೀರಿಸಿದ ನಟ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಂಹ ಪ್ರಿಯಾ!
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ದಂಪತಿ ಭಾನುವಾರ ತುಲಾಭಾರ ಸೇವೆ ನೆರವೇರಿಸಿದ್ದಾರೆ. 4 ವರ್ಷದ ಹರಕೆ ತೀರಿಸಿದ ಜೋಡಿ...
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಕನ್ನಡ ಚಿತ್ರರಂಗದ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ದಂಪತಿ ಭಾನುವಾರ ಭೇಟಿ ನೀಡಿ ತುಲಾಭಾರ ಸೇವೆ ನೆರವೇರಿಸಿದರು.
ಪತಿ ವಸಿಷ್ಠ ಸಿಂಹ ಅವರು 84 ಕೆ.ಜಿಯ ಅಕ್ಕಿ (Rice) ಮತ್ತು ಬೆಲ್ಲದಲ್ಲಿ (Jaggery) ಸುಬ್ರಹ್ಮಣ್ಯ ದೇವರಿಗೆ ತುಲಾಭಾರ ಸೇವೆ ಅರ್ಪಿಸಿದರು.
ಪತ್ನಿ ಹರಿಪ್ರಿಯಾ ಸಾಥ್ ನೀಡಿದರು. ಪತ್ರಕರ್ತರೊಂದಿಗೆ ಮಾತನಾಡಿದ ವಷಿಷ್ಠ ಸಿಂಹ-ಹರಿಪ್ರಿಯಾ ದಂಪತಿ, ಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ್ದೇವೆ.
4 ವರ್ಷಗಳ ಹಿಂದೆ ನನ್ನ ಅಕ್ಕ ತುಲಾಭಾರ ಸೇವೆ ಮಾಡಿಸಲು ಹರಕೆ ಹೊತ್ತಿದ್ದರು. ಹರಕೆಯನ್ನು ಸುಬ್ರಹ್ಮಣ್ಯ ದೇವರಿಗೆ ದಂಪತಿಗಳಾಗಿ ಬಂದು ತೀರಿಸಿದ್ದೇನೆ ಎಂದು ವಸಿಷ್ಠ ಹೇಳಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ಷಣದಿಂದ ವಸಿಷ್ಠ ಮತ್ತು ಹರಿಪ್ರಿಯಾ ಟೆಂಪಲ್ ರನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.riya Kukke Shri Subrahmanya
ಸಾಮಾಜಿಕ ಜಾಲತಾಣದಲ್ಲಿ ಹರಕೆ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದೆ. ರೇಶ್ಮೆ ಪಂಚೆ ಮತ್ತು ಶಲ್ಯೆಯಲ್ಲಿ ವಸಿಷ್ಠ ಕಾಣಿಸಿಕೊಂಡಿದ್ದಾರೆ, ಪಿಂಕ್ ಆಂಡ್ ಕ್ರಿಮ್ ಸೀರೆಯಲ್ಲಿ ಪ್ರಿಯಾ ಮಿಂಚಿದ್ದಾರೆ.