ನಟಿ ಅನುಷಾ ರೈ ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮ ಲಲ್ಲನ ದರ್ಶನ ಪಡೆದಿದ್ದಾರೆ. ಈ ಕುರಿತು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೂ ಮುನ್ನ ಕುಂಭಮೇಳದಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. 

ಚಂದನವನದ ಬೆಡಗಿ ಹಾಗೂ ಬಿಗ್ ಬಾಸ್ ಸೀಸನ್ 11 (Bigg Boss Season 11) ರಲ್ಲಿ ಸ್ಪರ್ಧಿಯಾಗಿದ್ದ ನಟಿ ಅನುಷಾ ರೈ ರಾಮ ಜನ್ಮ ಭೂಮಿ ಅಯೋಧ್ಯೆಗೆ ತೆರಳಿದ್ದು, ಶ್ರೀರಾಮ ಲಲ್ಲನ ದರ್ಶನ ಪಡೆದು ಬಂದಿದ್ದಾರೆ. ಈ ಪುಣ್ಯ ದರ್ಶನದ ಕುರಿತು ವಿಡೀಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ. ಶ್ರೀರಾಮನ ದರ್ಶನ ಪದೆದ ನಾನೇ ಧನ್ಯಳು ಎಂದು ಸಹ ನಟಿ ಹೇಳಿಕೊಂಡಿದ್ದಾರೆ. ಅದಕ್ಕೂ ಮುನ್ನ ನಟಿ ಕುಂಭ ಮೇಳಕ್ಕೆ ತೆರಳಿ ತೀರ್ಥ ಸ್ನಾನ ಮಾಡಿ ಬಂದಿದ್ದರು. 

ಕುಂಭಮೇಳದಲ್ಲಿ ಅನುಷಾ ರೈ.. ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ ನಟಿ

ಶ್ರೀರಾಮನ ದರ್ಶನ ಪಡೆದ ಅನುಷಾ ರೈ (Anusha Rai) ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೀಗೆ ಬರೆದುಕೊಂಡಿದ್ದಾರೆ…. 
ರಾಮನೂರ ನೋಡಲು ಹೋದೆ,
ಹೂ ಎತ್ತಿದ ಹಾಗೆ ರಾಮ ದರ್ಶನ ಕೊಟ್ಟ,
ಅದೃಷ್ಟ ಶುಭ ಸಂಕೇತದ ಸೂಚನೆಯ ನೀಡಿದ ಅನುಭವ ಆಯ್ತು.
ರಾಮ ನಮ್ಮ ನಿಮ್ಮೆಲ್ಲರನ್ನು ರಕ್ಷಿಸಿ ಎಲ್ಲರಿಗೂ ಒಳಿತು ಮಾಡಲಿ.
ರಾಮನಿರುವ ಹೃದಯ
ಆಗುವದು ಸಮೃದ್ಧಿ ನಿಲಯ
ನಿನಗಿದೋ ನಮ್ಮ ಪ್ರಣಾಮ
ಪುರುಷೋತ್ತಮ ಜಾನಕಿ ರಾಮ
ಭಜಿಸೋಣ ದಿನನಿತ್ಯ ರಾಮ ರಾಮ ಜಯ ಸೀತಾ ರಾಮ
ಜೈ ಶ್ರೀ ರಾಮ್
ಈ ರೀತಿಯಾಗಿ ಬರೆದಿದ್ದು, ಜೊತೆಗೆ ಶ್ರೀರಾಮ ದರ್ಶನ ಪಡೆದ ತಾನೇ ಧನ್ಯಳು ಎಂದು ಹೇಳಿಕೊಂಡಿದ್ದಾರೆ. 

ಸಖತ್ ದುಬಾರಿ ಕಣ್ಣಮ್ಮ ನೀನು....; ಅನುಷಾ ರೈ ಶಾಪಿಂಗ್‌ ನೋಡಿ ಫ್ಯಾನ್ಸ್ ಶಾಕ್

ಎರಡು ದಿನಗಳ ಹಿಂದೆ ಪ್ರಯಾಗ್ ರಾಜ್ ನ ಕುಂಭಮೇಳಕ್ಕೆ (Kumbh Mela) ತೆರಳಿದ್ದ ನಟಿ ಅನುಷಾ ರೈ, ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಅದರ ಜೊತೆಗೆ ತಮ್ಮ ಅನುಭವವನ್ನು ಬಿಚ್ಚಿಟ್ಟು ಪ್ರಯಾಗ್ ರಾಜ್ ನ ಮಹಾ ಕುಂಭಮೇಳ ನೋಡುತ್ತಲೇ ಹಾಕಿತ್ತು ಹೃದಯ ತಾಳ, ಗಂಗಾ ಯಮುನಾ ಸರಸ್ವತಿಯ ತ್ರಿವೇಣಿ ಸಂಗಮ, ಒಮ್ಮೆ ಮುಳುಗೆದ್ದರೆ ಮನದಲ್ಲಿ ಮಹಾ ಸಂಭ್ರಮ, ಜೊತೆಯಲ್ಲಿ ಕೋಟ್ಯಾಂತರ ಭಕ್ತರ ಸಮಾಗಮ, ಬೆಳಗಲಿ ನಮ್ಮ ಹಿಂದೂ ಧರ್ಮ, ಕಳೆಯಲಿ ಎಲ್ಲ ಪಾಪ ಕರ್ಮ, ಕಡೆಗೂ ಆಯ್ತು ಪುಣ್ಯ ಸ್ನಾನ, ಎದೆಯಲ್ಲಿ ಸದಾ ಶಿವನದ್ದೇ ಧ್ಯಾನ ಎಂದು ಬರೆದುಕೊಂಡಿದ್ದರು. 

ನಮ್ಮಿಬ್ಬರ ನಡುವೆ ಲವ್ ಆಗಿಲ್ಲ, ಕಂಕಣ ಭಾಗ್ಯ ಬರಲು ಸಾಧ್ಯವೇ ಇಲ್ಲ: ಧರ್ಮ ಕೀರ್ತಿರಾಜ್ ಸ್ಪಷ್ಟನೆ

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಬಿಗ್ ಬಾಸ್ ನಿಂದ ಹೊರಗೆ ಬಂದ ನಂತರ ಅನುಷಾ ರೈ ದೇಶ ವಿದೇಶ ಸುತ್ತೋದ್ರಲ್ಲೇ ಬ್ಯುಸಿಯಾಗಿದ್ದಾರೆ. ಅದಕ್ಕೂ ಮುನ್ನ ನಟಿ ಖರ್ಶನಂ, ಪೆಂಟಗಾನ್, ಗೋಸಿ ಗ್ಯಾಂಗ್, ದಮಯಂತಿ, ರೈಡರ್ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದರು. ನಟಿಯ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. 

View post on Instagram