ಇತ್ತೀಚೆಗೆ ಗಂಗಾ ರಂಗಾ ಎಂಬ ಮಹಿಳೆ, ಉಪೇಂದ್ರ ಅವರ ಅಭಿಮಾನಿಯಾಗಿ, ಅವರ ಫೋಟೋಗಳನ್ನು ಧರಿಸಿ ಮೆಜೆಸ್ಟಿಕ್‌ನಲ್ಲಿ ನೃತ್ಯ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆಕೆಯ ಧೈರ್ಯವನ್ನು ಮೆಚ್ಚಿದ್ದಾರೆ. ಆಕೆಯ ಪತಿ ಪ್ರೋತ್ಸಾಹ ನೀಡುತ್ತಿದ್ದು, ಈ ಹಿಂದೆ ಕೂಡ ಗಂಗಾ ಹಲವು ವಿಡಿಯೋಗಳನ್ನು ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಟ್ಯಾಲೆಂಟ್ ಪ್ರದರ್ಶನ ಮಾಡಲು ಸಿನಿಮಾ ಅಥವಾ ಸೀರಿಯಲ್ ಆಗಬೇಕಿಲ್ಲ. ಇನ್‌ಸ್ಟಾಗ್ರಾಂ, ಫೇಸ್‌ಬುಲ್ ಮತ್ತು ಯೂಟ್ಯೂಬ್‌ನಲ್ಲಿ ಮುರ್ನಾಲ್ಕು ನಿಮಿಷಗಳ ವಿಡಿಯೋ ಮೂಲಕವೇ ಜನಪ್ರಿಯತೆ ಪಡೆಯುತ್ತಿದ್ದಾರೆ. ಸಿನಿಮಾ ಸ್ಟಾರ್‌ಗಳಿಗೆ ಹೆಚ್ಚು ಫಾಲೋವರ್ಸ್ ಇರ್ತಾರೋ ಇಲ್ವೋ ಗೊತ್ತಿಲ್ಲ ಆದರೆ ಕನ್ನಡದ ಕಂಟೆಂಟ್ ಕ್ರಿಯೇಟರ್‌ಗಳಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇರ್ತಾರೆ. ಕನ್ನಡ ಚಿತ್ರರಂಗದ ರಿಯಲ್ ಸ್ಟಾರ್ ಉಪೇಂದ್ರ ಅಪ್ಪಟ ಮಹಿಳಾ ಅಭಿಮಾನಿ ಆಗಿರುವ ಗಂಗಾ ರಂಗಾ ಸೆನ್ಸೇಷನ್ ಕ್ರಿಯೇಟ್ ಮಾಡುವಂತ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಇದನ್ನು ಉಪೇಂದ್ರ ಅವರಿಗೆ ತಲುಪಿಸಬೇಕು ಎಂದು ಟ್ರೋಲ್ ಪೇಜ್‌ಗಳು ಬಿಗ್ ಸಪೋರ್ಟ್ ನೀಡುತ್ತಿದ್ದಾರೆ.
ಹೌದು! ಗಂಗಾ ರಂಗಾ ಎಂಬ ಇನ್‌ಸ್ಟಾಗ್ರಾಂ ಖಾತೆ ಹೊಂದಿರುವ ಮಹಿಳೆ ರಿಯಲ್ ಸ್ಟಾರ್ ಉಪೇಂದ್ರ ಫೋಟೋಗಳನ್ನು ಒಂದು ಬಟ್ಟೆ ಅಥವಾ ಕವರ್ ಮಾದರಿಯಲ್ಲಿ ಅಂಟಿಸಿಕೊಂಡಿದ್ದಾರೆ. ಬೆಂಗಳೂರಿನ ದಿ ಮೋಸ್ಟ್ ಪಾಪ್ಯೂಲರ್ ಜಾಗ ಅಂದ್ರೆ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್. ದಿನ ಲಕ್ಷಾಂತರ ಜನರು ಓಡಾಡುವ ಜಾಗದಲ್ಲಿ ಗಂಗಾ ಅವರು ಉಪ್ಪಿ ಫೋಟೋ ಧರಿಸಿ ಕುಣಿದು ಕುಪ್ಪಳಿಸಿದ್ದಾರೆ. ಕಪ್ಪು ಬಣ್ಣದ ಪ್ಯಾಂಟ್‌ಗೆ ನೇರಳೆ ಬಣ್ಣದ ಟಾಪ್ ಧರಿಸಿದ್ದಾರೆ. ಅದ ಮೇಲೆ ಉಪೇಂದ್ರ ಫೋಟೋಗಳು ಇರುವ ಕವರ್ ಧರಿಸಿ ಅದಕ್ಕೆ ಮ್ಯಾಚ್ ಆಗುವ ಕೂಲಿಂಗ್ ಗ್ಲಾಸ್ ಧರಿಸಿದ್ದಾರೆ. ದಯವಿಟ್ಟು ಶೇರ್ ಮಾಡಿ ಸಪೋರ್ಟ್ ಮಾಡಿ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಒಬ್ಬ ಮಹಿಳೆಯಾಗಿ ಇಷ್ಟು ಧೈರ್ಯ ಮಾಡಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.
ಕಮಲ್ ಹಾಸನ್ ಮಗಳು ಅಂತ ಜನರಿಗೆ ಗೊತ್ತಾಗಬಾರದು ಎಂದು ಸುಳ್ಳು ಹೆಸರು ಹೇಳಿಕೊಂಡು ಓಡಾಡುತ್ತಿದ್ದೆ: ಶ್ರುತಿ
'ಉಪ್ಪಿ ಅಕ್ಕ ನೀನು ಸೂಪರ್, ಈತರ ಪಬ್ಲಿಕ್‌ನಲ್ಲಿ ಕಲೆ ಪ್ರದರ್ಶನ ಮಾಡೋಕು ಡಬಲ್ ಗುಂಡಿಗೆ ಬೇಕು, ನಿಜವಾದ ಬಡವರ ಮಕ್ಕಳಲ್ಲಿ ಇರುತ್ತದೆ ಗಂಗಮ್ಮಕ್ಕ ಎಲ್ಲಿ ಬೇಕಾದರೂ ಪ್ರದರ್ಶನ ಮಾಡೋದಕ್ಕೆ ಖುಷಿಯಾಗುತ್ತದೆ, ಒಂದು ಲೈಕ್ ಪಡೆಯಲು ನೀವು ಎಷ್ಟು ಕಷ್ಟು ಪಡುತ್ತೀರಿ. ಹೀಗಾಗಿ ನಿಮಗೆ ನಾವು ಸಪೋರ್ಟ್ ಮಾಡುತ್ತೀವಿ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಈ ರೀತಿ ಗಂಗಾ ಮಾಡಿರುವುದು ಮೊದಲು ಅಲ್ಲ....ನಮ್ಮ ಮನೆ ಇರುವ ರಸ್ತೆಯಲ್ಲಿ ಕೂಡ ವಿಭಿನ್ನ ವೇಶಗಳನ್ನು ಧರಿಸಿ ವಿಡಿಯೋ ಮಾಡಿದ್ದಾರೆ. ಬೆಂಗಳೂರಿನ ಜನಪ್ರಿಯ ಮಾಲ್ ಒಂದರಲ್ಲಿ ಗಂಗಾ ಕೆಲಸ ಮಾಡುತ್ತಿದ್ದರು. ಗಂಗಾ ನಟನೆಗೆ ಬಿಗ್ ಸಪೋರ್ಟ್ ಆಗಿ ನಿಂತಿರುವುದು ಪತಿ, ಹೋಗು ವಿಡಿಯೋ ಮಾಡು ಸಪೋರ್ಟ್ ಮಾಡು ಎಂದು ಧೈರ್ಯ ಕೊಡುವುದು ಪತಿ ಅಂತೆ.
ಗೌಡಗೆರೆ ಚಾಮುಂಡೇಶ್ವರಿ ದೇವಾಲಯಕ್ಕೆ ನಟ ದರ್ಶನ್ ತಾಯಿ ಭೇಟಿ; ಬಸವ ಆಶೀರ್ವಾದ ಪಡೆದ ಮೀನಮ್ಮ
https://www.instagram.com/reel/DF41XxeSF49/?utm_source=ig_web_copy_link&igsh=MzRlODBiNWFlZA==
