ಮದಗಜ ಚಿತ್ರದ ಗೆಲುವು ನನ್ನ ಅಭಿಮಾನಿಗಳದ್ದು ಹಾಗೂ ಪ್ರೇಕ್ಷಕರದ್ದು. ಒಂದು ಒಳ್ಳೆಯ ಚಿತ್ರ ಮಾಡಿದರೆ ಜನ ನೋಡಿ ಗೆಲ್ಲಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ನಿರ್ದೇಶಕ ಮಹೇಶ್, ನಿರ್ಮಾಪಕ ಉಮಾಪತಿ ಅವರ ಶ್ರಮ ಮತ್ತು ಕನಸು ಈ ಚಿತ್ರ.
'ಮದಗಜ (Madhagaja) ಚಿತ್ರದ ಗೆಲುವು ನನ್ನ ಅಭಿಮಾನಿಗಳದ್ದು ಹಾಗೂ ಪ್ರೇಕ್ಷಕರದ್ದು. ಒಂದು ಒಳ್ಳೆಯ ಚಿತ್ರ ಮಾಡಿದರೆ ಜನ ನೋಡಿ ಗೆಲ್ಲಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ನಿರ್ದೇಶಕ ಮಹೇಶ್ (Mahesh), ನಿರ್ಮಾಪಕ ಉಮಾಪತಿ (Umapathy) ಅವರ ಶ್ರಮ ಮತ್ತು ಕನಸು ಈ ಚಿತ್ರ. ನನ್ನ ಒಬ್ಬನಿಂದ ಆಗಿರುವ ಸಿನಿಮಾ ಅಲ್ಲ. ಇಂಥ ಯಶಸ್ಸಿನಿಂದ ಮತ್ತಷ್ಟುಒಳ್ಳೆಯ ಸಿನಿಮಾಗಳನ್ನು ಮಾಡುವ ಉತ್ಸಾಹ ಬರುತ್ತದೆ'. -ನಟ ಶ್ರೀಮುರಳಿ (Sriimurali) ಹೀಗೆ ಹೇಳಿದ್ದು ಮದಗಜ ಚಿತ್ರದ ಸಕ್ಸಸ್ ಸಂಭ್ರಮಾಚರಣೆಯಲ್ಲಿ.
ಇಡೀ ತಂಡ ಖುಷಿಯತ್ತು. ನಿರ್ದೇಶಕ ಮಹೇಶ್ ಕುಮಾರ್, ‘ನಮ್ಮ ಚಿತ್ರ 75 ದಿನ ಪೂರೈಸಿ 100ನೇ ದಿನದತ್ತ ಮುಖ ಮಾಡಿದರೆ. ಕೊರೋನಾದಂತಹ ಸಂಕಷ್ಟದಲ್ಲೂ ಚಿತ್ರವನ್ನು ನೋಡಿ ಗೆಲ್ಲಿಸಿದ ಪ್ರತಿಯೊಬ್ಬರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಶ್ರೀಮುರಳಿ ಅವರ ನೆರವು ಮರೆಯಲಾರೆ. ಇಡೀ ತಂಡದ ನಿರೀಕ್ಷೆಯಂತೆ ನಮ್ಮ ಚಿತ್ರ ಗೆದ್ದಿದೆ. ಇದೇ ತಂಡದಿಂದ ಮತ್ತೊಂದು ಅದ್ದೂರಿ ಸಿನಿಮಾ ಮಾಡಲಿದ್ದೇವೆ’ ಎಂದು ಹೇಳಿದರು.
ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಮಾತನಾಡಿ, ‘ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳನ್ನು ನಿರ್ಮಿಸಲು ಬಂದೆ. ಅದರಂತೆ ಸಿನಿಮಾ ಮಾಡಿದೆ. ಪ್ರೇಕ್ಷಕರು ತುಂಬಾ ಒಳ್ಳೆಯ ರೆಸ್ಪಾನ್ಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದ್ದೇವೆ’ ಎಂದರು. 'ಯಾವ ಭಾಷೆಗೆ ಹೋಗಿ ಏನೇ ಮಾಡ್ಲಿ. ಆದರೆ, ನಮ್ಮ ರಾಜ್ಯದಲ್ಲಿ ಬಂದು ಕನ್ನಡ ಮಾತನಾಡೋದು, ಕನ್ನಡದವರನ್ನು ನೋಡೋದು ತುಂಬಾನೇ ಖುಷಿ ಕೊಡುತ್ತದೆ. ‘ಮದಗಜ’ ಚಿತ್ರದಲ್ಲಿ ನಾನು ಮಾಡಿದ ಪಲ್ಲವಿ ಪಾತ್ರವನ್ನು ಎಲ್ಲರೂ ಇಷ್ಟಪಟ್ಟಿದ್ದೀರಿ. ಎಲ್ಲ ಹುಡುಗರಿಗೂ ದೊಡ್ಡ ಥ್ಯಾಂಕ್ಸ್' ಎಂದು ನಾಯಕಿ ಆಶಿಕಾ ರಂಗನಾಥ್ (Ashika Ranganath) ಹೇಳಿದರು.
Madhagaja Release: ಚಿತ್ರದ ಟೈಟಲ್ ಮಾಸ್ ಕತೆ ಕ್ಲಾಸ್, ಶ್ರೀಮುರಳಿ ಸಂದರ್ಶನ
ರಂಗಾಯಣ ರಘು, ಚಿಕ್ಕಣ್ಣ, ಧರ್ಮಣ್ಣ ಕಡೂರು ಮುಂತಾದವರು ಚಿತ್ರದ ಯಶಸ್ಸಿನ ಕುರಿತು ಮಾತನಾಡಿದರು. 'ಅಯೋಗ್ಯ'ದಂತಹ ಕಾಮಿಡಿ ಸಿನಿಮಾ ಮಾಡಿದ್ದ ಮಹೇಶ್ ಕುಮಾರ್ 'ಮದಗಜ' ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ತೆರೆಕಂಡ ಬಳಿಕ, ಓಟಿಟಿಯಲ್ಲೂ ಈ ಸಿನಿಮಾ ರಿಲೀಸ್ ಆಗಿತ್ತು. ಮುಖ್ಯವಾಗಿ 'ಮದಗಜ' ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಬರೋಬ್ಬರಿ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಅಫೀಸ್‌ನಲ್ಲೂ ರೇಕಾರ್ಡ್ ಮಾಡಿತ್ತು. 
'ಮದಗಜ' ಶ್ರೀಮುರಳಿ ಕೆರಿಯರ್‌ನಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದ್ದು, ಒಂದು ಕಡೆ ಆಕ್ಷನ್ ಧಮಾಕ, ಮತ್ತೊಂದು ಕಡೆ ತಾಯಿ ಸೆಂಟಿಮೆಂಟ್ ಕಥೆಯನ್ನೊಳಗೊಂಡಿದೆ. ರತ್ನ ಪಾತ್ರದಲ್ಲಿ ತೆಲುಗಿನ ದೇವಯಾನಿ (Devayani), ಬಸವನಾಗಿ ರಂಗಾಯಣ ರಘು (Rangayana Raghu) ಹಾಗೂ ತಾಂಡವನ ಪಾತ್ರದಲ್ಲಿ ಗರುಡ ರಾಮ್ (Garuda Ram) ಚಿತ್ರದಲ್ಲಿ ಅಬ್ಬರಿಸಿದ್ದರು. ಮುಖ್ಯವಾಗಿ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು (Jagapati Babu) ಈ ಚಿತ್ರದ ಮುಖ್ಯ ಖಳನಾಯಕನಾಗಿದ್ದು ಅವರ ರಾ ಲುಕ್ ನೋಡುಗರ ಮೈಜುಮ್ಮೆನಿಸಿತ್ತು.
Ashika Ranganath: ಮದಗಜ ಚಿತ್ರದ ಪಲ್ಲವಿ ಪಾತ್ರ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ
ಇನ್ನು ಮೊದಲ ಬಾರಿಗೆ ಶ್ರೀಮುರಳಿ ಎದುರಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸಿದ್ದು, ಚಿತ್ರದಲ್ಲಿ ಅವರು ಎರಡು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ (Umapathy Srinivas Gowda) ಚಿತ್ರಕ್ಕೆ ಬಂಡವಾಳ ಹೂಡಿದ್ದು, 'ಮಫ್ತಿ' (Mufti) ಖ್ಯಾತಿಯ ನವೀನ್ ಕುಮಾರ್ ಚಿತ್ರಕ್ಕೆ ಸಿನಿಮಾಟೋಗ್ರಫಿ ಕೆಲಸ ಮಾಡಿದ್ದಾರೆ. ಹರೀಶ್ ಕೊಮ್ಮೆಯವರ ಸಂಕಲನವಿರುವ ಈ ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ ಸೇರಿದಂತೆ ದೊಡ್ಡ ತಾರಾಬಳಗ ಚಿತ್ರಕ್ಕಿದ್ದು, 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರ್ (Ravi Basrur) ಸಂಗೀತ ಸಂಯೋಜನೆಯಿತ್ತು.
