Asianet Suvarna News Asianet Suvarna News

ಅಮೆರಿಕದಲ್ಲಿ ಪಂಚೆ ತೊಟ್ಟು ಶಿವಣ್ಣ ಭರ್ಜರಿ ಡ್ಯಾನ್ಸ್​: ಎನರ್ಜಿ ಅಂದ್ರೆ ಇದಪ್ಪಾ ಅಂತಿದ್ದಾರೆ ಫ್ಯಾನ್ಸ್​

ಅಮೆರಿಕದಲ್ಲಿ ನಡೆಯುತ್ತಿರುವ ‘ನಾವಿಕ ವಿಶ್ವ ಕನ್ನಡ ಸಮಾವೇಶ’ದಲ್ಲಿ ನಟ ಶಿವರಾಜ್​ ಕುಮಾರ್​ ಅವರು ಭರ್ಜರಿ ಸ್ಟೆಪ್​ ಹಾಕಿದ್ದು, ಫ್ಯಾನ್ಸ್​ ಫಿದಾ ಆಗಿದ್ದಾರೆ. 
 

Actor Shivraj Kumar dance In  Navika Vishwa Kannada Samavesh in USA suc
Author
First Published Sep 3, 2023, 5:53 PM IST

ಸ್ಯಾಂಡಲ್‌ವುಡ್‌ನಲ್ಲಿ ಸೂಪರ್​ ಎನರ್ಜಿ ಇರೋ ನಟ ಎಂದು ಗುರುತಿಸಿಕೊಂಡವರಲ್ಲಿ ನಟ ಶಿವರಾಜ್​ಕುಮಾರ್​ (Shivarajkumar)​ಒಬ್ಬರು. ವಯಸ್ಸು 61 ಆದರೂ ಅವರಲ್ಲಿರುವ ಎನರ್ಜಿ ಕಂಡು ಯುವ ನಟರೇ ನಾಚಬೇಕು.   ಜೈಲರ್​ ಚಿತ್ರದ ಭರ್ಜರಿ ಯಶಸ್ಸಿನ ಖುಷಿಯಲ್ಲಿರುವ ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​ ಅವರ ಕೀರ್ತಿ ಇದಾಗಲೇ ದೇಶಾದ್ಯಂತ ಹರಡಿರುವ ನಡುವೆಯೇ ಇದೀಗ ಅಮೆರಿಕದಲ್ಲಿಯೂ ಖ್ಯಾತಿ ಗಳಿಸಿದ್ದಾರೆ. 

ಹೌದು. ಅಮೆರಿಕದ ಟೆಕ್ಸಾಸ್​ನಲ್ಲಿ ‘ನಾವಿಕ ವಿಶ್ವ ಕನ್ನಡ ಸಮಾವೇಶ’ದಲ್ಲಿ (Navika World Kannada Summit) ಶಿವಣ್ಣ ಭರ್ಜರಿ ಡ್ಯಾನ್ಸ್ ಮಾಡಿದ್ದು, ನೋಡುಗರನ್ನು ಮರುಳುಗೊಳಿಸಿದ್ದಾರೆ. ಅಮೆಕಾದ ಟೆಕ್ಸಾಸ್‌ನಲ್ಲಿ 7ನೇ ನಾವಿಕ ವಿಶ್ವ ಕನ್ನಡ ಸಮಾವೇಶ ನಡೆಯುತ್ತಿದೆ. ಸೆಪ್ಟೆಂಬರ್​ 1ರಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು, ಇವತ್ತು ಅಂದರೆ 3ನೇ ತಾರೀಖಿನವರೆಗೂ ಇದೆ.   ಈ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್‌ಕುಮಾರ್‌ರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆ ಮೇಲೆ ಶಿವಣ್ಣ ಭರ್ಜರಿಯಾಗಿ ಕುಣಿದು ರಂಜಿಸಿದ್ದಾರೆ.  ಪಂಚೆ ಧರಿಸಿ ಭರ್ಜರಿ ಸ್ಟೆಪ್​ ಹಾಕಿದ್ದಾರೆ.  ಶಿವಣ್ಣನ ಎನರ್ಜಿ ಕಂಡು ಎಲ್ಲರೂ ವಾವ್​ ಎನ್ನುತ್ತಿದ್ದಾರೆ. 

ಶಿವರಾಜ್​ ಕುಮಾರ್​ ಬಾಲಿವುಡ್​ಗೆ ಎಂಟ್ರಿ? ಖ್ಯಾತ ನಿರ್ದೇಶಕ ಸುದೀಪ್ತೋ ಸೇನ್ ಬುಲಾವು!

ಸದ್ಯ ‘ಘೋಸ್ಟ್​’, ‘ಕರಟಕ ದಮನಕ’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಶಿವರಾಜ್​ಕುಮಾರ್​ ಅವರು ಬ್ಯುಸಿ ಆಗಿದ್ದಾರೆ. ಆ ಕೆಲಸಗಳ ನಡುವೆಯೂ ಅವರು ‘ನಾವಿಕ ವಿಶ್ವ ಕನ್ನಡ ಸಮಾವೇಶ’ದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವರಾಜ್​ ಕುಮಾರ್​ ಮತ್ತು ಗೀತಾ ಅವರನ್ನು  ಮೆರವಣಿಗೆಯಲ್ಲಿ ಸಮಾರಂಭ ನಡೆವ ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು.  ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು.  ಅಲ್ಲಿನ ಕಲಾವಿದರು ಹುಲಿವೇಷ ಧರಿಸಿ ನೃತ್ಯ ಮಾಡುತ್ತಿದ್ದರು. ಆಗ  ಶಿವಣ್ಣ ಸಖತ್ ಜೋಷ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. 

ಈ ಮಧ್ಯೆಯೇ ಶಿವರಾಜ್​  ಕುಮಾರ್​ ಬಾಲಿವುಡ್​ಗೂ ಹಾರಲಿದ್ದಾರೆ ಎನ್ನುವ ಸುದ್ದಿಯಿದೆ.  ಇದಾಗಲೇ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರು ಶಿವರಾಜ್​ ಕುಮಾರ್​ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದಿ ಕೇರಳ ಸ್ಟೋರಿಯಂಥ ಖ್ಯಾತ ಚಿತ್ರ ನೀಡಿದವರು ಸುದೀಪ್ತೋ ಸೇನ್​. ಇವರು ಖುದ್ದು  ಶಿವರಾಜ್​ಕುಮಾರ್ ಅವರ ಮನೆಯಲ್ಲಿಯೇ ಭೇಟಿ ಕೊಟ್ಟು ಕೆಲ ಕಾಲ ಸಿನಿಮಾದ ಕುರಿತು ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಈ ಭೇಟಿಯ ಫೋಟೋ ಕೂಡ ವೈರಲ್​ ಆಗಿದೆ. ಈ ಮೂಲಕ ಬಾಲಿವುಡ್​  ಸಿನಿಮಾಕ್ಕೆ ಆಫರ್​ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. 

  ನನ್ನ ತುಟಿ ಮೇಲ್ಯಾಕೆ ಕಣ್ಣು? ನಿಜ ಹೇಳ್ತೇನೆ ಕೇಳಿ... 'ಯಜಮಾನ' ನಟಿ ತಾನ್ಯಾ ಗರಂ

 

Follow Us:
Download App:
  • android
  • ios