ಶಿವರಾಜ್ ಕುಮಾರ್ ಬಾಲಿವುಡ್ಗೆ ಎಂಟ್ರಿ? ಖ್ಯಾತ ನಿರ್ದೇಶಕ ಸುದೀಪ್ತೋ ಸೇನ್ ಬುಲಾವು!
ಜೈಲರ್ ಚಿತ್ರದ ಮೂಲಕ ದೇಶದ ಗಮನ ಸೆಳೆದಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಾಲಿವುಡ್ಗೆ ಪದಾರ್ಪಣೆ ಮಾಡಲಿದ್ದಾರೆ ಎನ್ನಲಾಗಿದೆ. ಏನಿದು ವಿಷಯ?
ಜೈಲರ್ ಸಿನಿಮಾ ಕನ್ನಡಿಗರೂ ಅತಿ ಹತ್ತಿರವಾಗಲು ಕಾರಣ, ಅದಲ್ಲಿ ನಟ ಶಿವರಾಜ್ಕುಮಾರ್ (Shiva Rajkumar) ಅವರ ನಟನೆ. ಜೈಲರ್ ಚಿತ್ರದ ಮೂಲಕ ಶಿವರಾಜ್ ಕುಮಾರ್ ಎಲ್ಲರ ಗಮನ ಸೆಳೆದಿದ್ದಾರೆ. ಇವರ ನರಸಿಂಹನ ಪಾತ್ರದ ಬಗ್ಗೆ ಪರಭಾಷಿಗರೂ ಮಾತನಾಡಿಕೊಳ್ಳುತ್ತಿದ್ದು, ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟು ಸೂಪರ್ ಆಗಿ ಅವರು ಅಭಿನಯಿಸಿದ್ದಾರೆ. ತಮಗೆ ಇಷ್ಟೊಂದು ಒಳ್ಳೆಯ ಪ್ರತಿಕ್ರಿಯೆ ಸಿಗುತ್ತದೆ ಎಂದು ಖುದ್ದು ಶಿವಣ್ಣ ಅಚ್ಚರಿಪಟ್ಟಿದ್ದೂ ಇದೆ. ‘ನನಗೆ ಇದು ನಿಜಕ್ಕೂ ಸರ್ಪ್ರೈಸಿಂಗ್ ಆಗಿತ್ತು. ನಾನು ಮಾಡಿರೋ ಪಾತ್ರಕ್ಕೆ ಈ ಮಟ್ಟದ ಪ್ರತಿಕ್ರಿಯೆ ಸಿಗುತ್ತದೆ ಎಂದುಕೊಂಡಿರಲಿಲ್ಲ’ ಎಂದು ಸಂದರ್ಶನವೊಂದರಲ್ಲಿ ಶಿವರಾಜ್ಕುಮಾರ್ ಹೇಳಿದ್ದಾರೆ. ಇಷ್ಟು ಉತ್ತಮ ಪ್ರತಿಕ್ರಿಯೆ ದೊರೆತಿರುವ ಬೆನ್ನಲ್ಲೇ ಇದೀಗ ದೊಡ್ಡ ಅಪ್ಡೇಟ್ ಒಂದು ಹೊರಬಿದ್ದಿದೆ. ಅದೇನೆಂದರೆ, ಬಾಲಿವುಡ್ಗೆ ಶೀಘ್ರದಲ್ಲಿಯೇ ಶಿವಣ್ಣ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ!
ಹೌದು. ಸದ್ಯ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಬಾಲಿವುಡ್ (Bollywood) ನಟರನ್ನು ಹಾಕಿಕೊಳ್ಳುವುದು ಇತ್ತೀಚೆಗೆ ತೀರಾ ಸಾಮಾನ್ಯ, ಸೈಫ್ ಅಲಿ ಖಾನ್, ಸಂಜಯ್ ದತ್ (Sanjay Dutt) ಅಂಥ ನಟರನ್ನು ವಿಲನ್ ಪಾತ್ರಗಳಲ್ಲಿ ನೋಡಿಯಾಗಿದೆ. ಇದಾದ ಬಳಿಕ ಶಿವರಾಜ್ ಕುಮಾರ್ ಅವರ ಅಭಿನಯದ ಭೈರತಿ ರಣಗಲ್ ಚಿತ್ರಕ್ಕೆ ಬಾಲಿವುಡ್ನಿಂದ ಪ್ರತಿಭಾವಂತ ನಟ ರಾಹುಲ್ ಭೋಸ್ ಅವರನ್ನು ಕರೆತರಲಾಗಿದೆ. ಇವರು ಶಿವರಾಜ್ ಕುಮಾರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಶಿವರಾಜ್ ಕುಮಾರ್ ಅವರ ಸೂಪರ್ ಹಿಟ್ ಸಿನಿಮಾ ಮಫ್ತಿಯ ಭೈರತಿ ರಣಗಲ್ ಪಾತ್ರವನ್ನು ಆಧರಿಸಿ ಅದೇ ಹೆಸರಿನ ಸಿನಿಮಾ ಮಾಡಲಾಗುತ್ತಿದೆ. ಮಫ್ತಿ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಬಾಲಿವುಡ್ ನಟರು ದಕ್ಷಿಣಕ್ಕೆ ಕಾಲಿಡುವ ಮಾತಾದರೆ, ಇದೀಗ ಖುದ್ದು ಕನ್ನಡದ ತಾರೆಯೊಬ್ಬರು ಬಾಲಿವುಡ್ಗೆ ನಾಯಕನಾಗಿ ಎಂಟ್ರಿ ಕೊಡುತ್ತಿರುವುದು ತುಂಬಾ ವಿಶೇಷವಾಗಿದೆ. ಈ ಮೂಲಕ ಕಾಲಿವುಡ್ ಟಾಲಿವುಡ್ ಬಳಿಕ ಬಾಲಿವುಡ್ನಲ್ಲಿ(Bollywood) ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮಿಂಚುವ ದಿನ ದೂರವಿಲ್ಲ.
JAILER ಚಿತ್ರಕ್ಕೆ ರಜನಿಕಾಂತ್ ಈ ಪರಿ ಸಂಭಾವನೆನಾ? ಶಿವರಾಜ್ಕುಮಾರ್, ತಮನ್ನಾ ಪಡೆದದ್ದೆಷ್ಟು?
ಇದಾಗಲೇ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ದಿ ಕೇರಳ ಸ್ಟೋರಿಯಂಥ ಖ್ಯಾತ ಚಿತ್ರ ನೀಡಿದವರು ಸುದೀಪ್ತೋ ಸೇನ್. ಇವರು ಖುದ್ದು ಶಿವರಾಜ್ಕುಮಾರ್ ಅವರ ಮನೆಯಲ್ಲಿಯೇ ಭೇಟಿ ಕೊಟ್ಟು ಕೆಲ ಕಾಲ ಸಿನಿಮಾದ ಕುರಿತು ಮಾತನಾಡಿದ್ದಾರೆ ಎನ್ನಲಾಗುತ್ತಿದೆ. ಈ ಭೇಟಿಯ ಫೋಟೋ ಕೂಡ ವೈರಲ್ ಆಗಿದೆ. ಈ ಮೂಲಕ ಬಾಲಿವುಡ್ ಸಿನಿಮಾಕ್ಕೆ ಆಫರ್ ನೀಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿ ಚಿತ್ರವನ್ನು ನಿರ್ಮಾಣ ಮಾಡಿರೋ ‘ಸನ್ಶೈನ್ ಪಿಕ್ಚರ್ಸ್’ ಸಂಸ್ಥೆಯಿಂದಲೇ ‘ಬಸ್ತರ್’ ಎನ್ನುವ ಚಿತ್ರ ಕೂಡ ಮೂಡಿಬರಲಿದೆ. ಈ ಸಿನಿಮಾದಲ್ಲಿನ ನಟರ ಬಗ್ಗೆ ಇನ್ನೂ ಬಹಿರಂಗಗೊಂಡಿಲ್ಲ. ಈ ಚಿತ್ರಕ್ಕಾಗಿಯೇ ಅವರು ಶಿವರಾಜ್ ಕುಮಾರ್ ಅವರನ್ನು ಭೇಟಿಯಾಗಿದ್ದಾರೋ ಅಥವಾ ಬೇರೆ ಚಿತ್ರಕ್ಕೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಅಂದಹಾಗೆ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ನಟಿಸಿದ ಕೆಲವು ಕಲಾವಿದರು ಕೂಡ ‘ಬಸ್ತರ್’ ಚಿತ್ರದಲ್ಲಿ ಇರುವುದಾಗಿ ತಿಳಿದುಬಂದಿದೆ.
ಯೋಗರಾಜ್‌ಭಟ್ಟರ ಸಾರಥ್ಯದಲ್ಲಿ ಮಲ್ಟಿಸ್ಟಾರರ್ ಚಿತ್ರ: ಮೊದಲ ಬಾರಿಗೆ ಒಂದಾದ ಪ್ರಭುದೇವ-ಶಿವಣ್ಣ