Asianet Suvarna News Asianet Suvarna News

ಆರು ಅವತಾರಗಳಲ್ಲಿ ಶರಣ್; ಪಾತ್ರದ ಸೀಕ್ರೆಟ್ ರಿವೀಲ್‌!

ನಟ ಶರಣ್‌ ಈಗ ‘ಅವತಾರ ಪುರುಷ’ನ ಗುಂಗಿನಲ್ಲಿದ್ದಾರೆ. ಸಿಂಪಲ್‌ ಸುನಿ ನಿರ್ದೇಶನ ಹಾಗೂ ಪುಷ್ಕರ್‌ ಫಿಲಂಸ್‌ ನಿರ್ಮಾಣದ ‘ಅವತಾರ ಪುರುಷ ’ ಹಲವು ಕಾರಣಕ್ಕೆ ಸಾಕಷ್ಟುಕುತೂಹಲ ಹುಟ್ಟಿಸಿದೆ. 

Actor Sharan  reveals about kannada actor  Avatara Purusha
Author
Bangalore, First Published Jan 30, 2020, 8:30 AM IST
  • Facebook
  • Twitter
  • Whatsapp

‘Rambo2’ ಚಿತ್ರದ ಸಕ್ಸಸ್‌ ಜೋಡಿ ಶರಣ್‌-ಆಶಿಕಾ ರಂಗನಾಥ್‌ ಮತ್ತೆ ಇಲ್ಲಿ ಒಂದಾಗಿದ್ದಾರೆ. ಈಗ ಚಿತ್ರದ ಚಿತ್ರೀಕರಣ ಕ್ಲೈಮ್ಯಾಕ್ಸ್‌ ತಲುಪಿದೆ. ಇನ್ನು ಮೂರು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆಯಂತೆ. ಈ ಹಂತದಲ್ಲೀಗ ‘ಅವತಾರ ಪುರುಷ ’ಚಿತ್ರದಲ್ಲಿನ ತಮ್ಮ ಪಾತ್ರದ ಬಗೆಗಿನ ಕುತೂಹಲಕಾರಿ ಸಂಗತಿಯನ್ನು ಶರಣ್‌ ರಿವೀಲ್‌ ಮಾಡಿದ್ದಾರೆ.

‘ನನ್ನ ಮಟ್ಟಿಗೆ ಇದೊಂದು ವಿಶೇಷವಾದ ಸಿನಿಮಾ. ಇಷ್ಟುವರ್ಷದ ನನ್ನ ಸಿನಿ ಜರ್ನಿಯಲ್ಲಿ ಒಂದು ಪಾತ್ರದೊಳಗೆಯೇ ಎರಡಕ್ಕಿಂತ ಹೆಚ್ಚು ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಅದು ಸಾಧ್ಯವಾಗಿದೆ. ಒಂದು ಪಾತ್ರದೊಳಗೆಯೇ ಆರು ರೀತಿಯ ಡಿಫರೆಂಟ್‌ ಶೇಡ್ಸ್‌ಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿದೆ. ಇದು ನನಗೆ ವಿಭಿನ್ನ ಮತ್ತು ವಿಶಿಷ್ಟವಾದ ಅನುಭವ. ಆರು ಶೇಡ್ಸ್‌ ಕೇವಲ ಗೆಟಪ್‌ಗಳ ಕಾರಣಕ್ಕೆ ವಿಶೇಷ ಅಂತಲ್ಲ,ಆ ಗೆಟಪ್‌ಗಳಲ್ಲಿನ ವ್ಯಕ್ತಿತ್ವವೂ ವಿಭಿನ್ನವಾಗಿರುತ್ತೆ. ಇದು ಪ್ರೇಕ್ಷಕರಿಗೆ ನನ್ನನ್ನು ಇನ್ನೊಂದು ರೀತಿಯಲ್ಲೇ ತೋರಿಸಬಲ್ಲದು ಎನ್ನುವ ವಿಶ್ವಾಸವಿದೆ’ಎನ್ನುವ ಮಾತುಗಳನ್ನು ಶರಣ್‌ ಔಪಚಾರಿಕ ಮಾತುಕತೆಯಲ್ಲಿ ಹಂಚಿಕೊಂಡರು.

ಚಿತ್ರ ವಿಮರ್ಶೆ: ಅಧ್ಯಕ್ಷ ಇನ್‌ ಅಮೆರಿಕಾ

‘ಅವತಾರ ಪುರುಷ ’ಸಿನಿಮಾ ಬಿಟ್ಟರೆ ಶರಣ್‌ ಕೈಯಲ್ಲೀಗ ಯಾವುದೇ ಹೊಸ ಸಿನಿಮಾ ಇಲ್ಲ. ಅವರು ಯಾವುದನ್ನು ಒಪ್ಪಿಕೊಂಡಿಲ್ಲ. ಯಾಕೆಂದು ಕೇಳಿದರೆ ಅವರು ಹೇಳುವುದಿಷ್ಟು:

ವರ್ಷಕ್ಕೆ ನಾಲ್ಕೈದು ಸಿನಿಮಾ ಒಪ್ಪಿಕೊಳ್ಳುವುದು ಕಷ್ಟಆಗೋದಿಲ್ಲ. ಆದ್ರೆ ಒಂದೊಳ್ಳೆಯ ಸಿನಿಮಾ ಸಿಕ್ಕಾಗ ಅದರ ಜತೆಗೆ ಒಂದಷ್ಟುಜರ್ನಿ ಮಾಡ್ಬೇಕು ಎನ್ನುವ ಕಾರಣಕ್ಕೆ ನಾನಿನ್ನು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ’ ಎಂದು ಬಿಡುಗಡೆ ಆಗಬೇಕಿರುವ ಅವತಾರ ಪುರುಷ ಚಿತ್ರದ ಬಗ್ಗೆ ಇನ್ನಿಲ್ಲದ ಕುತೂಹಲ ಹುಟ್ಟಿಸುತ್ತಾರೆ ಶರಣ್‌.‘ನನ್ನ ಸಿನಿಮಾ ಅಂದ್ರೆ ಫ್ಯಾನ್ಸ್‌ಗೆ ಕಾಮಿಡಿ ಬೇಕು, ಅದು ಕೂಡ ಇಲ್ಲಿದೆ. ಕಾಮಿಡಿ ಜತೆಗೆಯೇ ಹಾರರ್‌ ಅಂಶಗಳನ್ನೊಳಗೊಂಡ ಸಿನಿಮಾ.

Follow Us:
Download App:
  • android
  • ios