Asianet Suvarna News Asianet Suvarna News

ರವಿಚಂದ್ರನ್ ಮಗನ ಮದುವೆ; ಅಮ್ಮ ಹುಡುಕಿದ ಹುಡುಗಿ, ಭಾವಿ ಪತ್ನಿ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಬಿಚ್ಚಿಟ್ಟ ಮನೋರಂಜನ್

ರವಿಚಂದ್ರನ್ ಪುತ್ರ ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಆಗಸ್ಟ್ 21 ಹಾಗೂ 22ರಂದು ನಡೆಯುವ ಮದುವೆ ಸಮಾರಂಭದಲ್ಲಿ ಮನೋರಂಜನ್, ಸಂಗೀತಾ ಅವರ ಜೊತೆ ಹಸೆಮಣೆ ಏರುತ್ತಿದ್ದಾರೆ. ತನ್ನ ಮದುವೆ ಬಗ್ಗೆ ಮನೋರಂಜನ್ ಮೊದಲ ಬಾರಿಗೆ ಮಾತನಾಡಿದ್ದಾರೆ. 

actor ravichandran son manoranjan speaks about his future wife Sangeetha sgk
Author
Bengaluru, First Published Aug 14, 2022, 1:06 PM IST

ಸ್ಯಾಂಡಲ್‌ವುಡ್‌ನ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಮನೆಮಾಡಿದೆ. 2019ರಲ್ಲಿ ಮಗಳ ಮದುವೆ ಅದ್ದೂರಿಯಾಗಿ ಮಾಡಿದ್ದ ರವಿಚಂದ್ರನ್ ಇದೀಗ ಮಗನ ಮದುವೆಗೆ ಸಜ್ಜಾಗಿದ್ದಾರೆ. ರವಿಚಂದ್ರನ್ ಹಿರಿಯ ಪುತ್ರ ಮನೋರಂಜನ್ ವೈಯಕ್ತಿಕ ಜೀವನದ ಮತ್ತೊಂದು ಹಂತಕ್ಕೆ ಏರುತ್ತಿದ್ದಾರೆ. ಹೌದು ಮನೋರಂಜನ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕ್ರೇಜಿ ಸ್ಟಾರ್ ಸೈಲೆಂಟ್ ಆಗಿ ಮಗನ ಮದುವೆಗೆ ಸಿದ್ಧತೆ ಮಾಡಿದ್ದು ಆಗಸ್ಟ್ 21 ಹಾಗೂ 22ರಂದು ನಡೆಯುವ ಮದುವೆ ಸಮಾರಂಭದಲ್ಲಿ ಮನೋರಂಜನ್ ಹಸೆಮಣೆ ಏರುತ್ತಿದ್ದಾರೆ. ತನ್ನ ಮದುವೆ ಬಗ್ಗೆ ಮನೋರಂಜನ್ ಮೊದಲ ಬಾರಿಗೆ ಮಾತನಾಡಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಮನೋರಂಜನ್ ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದಾರೆ. 

ಕುಟುಂಬದಲ್ಲಿ ನಾನೆ ತಡವಾಗಿ ಮದುವೆಯಾಗುತ್ತಿರುವುದು 

ಸಂಗೀತಾ ಜೊತೆ ಮದುವೆಗೆ ಸಿದ್ಧವಾಗಿರುವ ಮನೋರಂಜನ್ ಮಾತನಾಡಿ, 'ಇದು ಅರೇಂಜ್ ಮ್ಯಾರೇಜ್ ಮತ್ತು ಸಂಗೀತಾ ದೂರದ ಸಂಬಂಧಿ. ನನಗೆ ಈಗ 34 ವರ್ಷ ಮತ್ತು ಈಗಾಗಲೇ ನನಗೆ ಮದುವೆ ವಯಸ್ಸು  ಮೀರಿದೆ ಎಂದು ನನ್ನ ಕುಟುಂಬ ಭಾವಿಸಿದೆ. ಏಕೆಂದರೆ ನಮ್ಮ ಕುಟುಂಬದಲ್ಲಿ ಹುಡುಗರು ಸೇರಿದಂತೆ ಎಲ್ಲರೂ 27 ರೊಳಗೆ ಮದುವೆಯಾಗುತ್ತಾರೆ. ನಾನು ಮಾತ್ರ ಇಷ್ಟು ತಡವಾಗಿ ಮದುವೆಯಾಗುತ್ತಿದ್ದೇನೆ'  ಎಂದು ಹೇಳಿದರು. 

ಇದ್ದಕ್ಕಿದ್ದಂತೆ ಸಂಭವಿಸಿದ್ದಲ್ಲ

'ನಾನು ನನ್ನ ಪೋಷಕರನ್ನು  ಭೇಟಿ ಮಾಡಲು ಯಾರನ್ನೂ ಮನೆಗೆ ಕರೆದುಕೊಂಡು ಬಂದಿಲ್ಲ. ಸ್ವಲ್ಪ ದಿನಗಳಿಂದ ನನ್ನ ತಾಯಿ ನನಗೆ ಹುಡುಗಿ ಹುಡುಕುತ್ತಿದ್ದರು. ಸಂಗೀತಾ ಪ್ರಪೋಸಲ್ ಬಂದಾಗ ಅದನ್ನು ಮುಂದುವರೆಸಬಹುದು ಎಂದು ನಿರ್ಧರಿಸಿದರು' ಎಂದು ಹೇಳಿದರು. 'ಮೊದಲು ಅವರು (ತಂದೆ-ತಾಯಿ) ಸಂಗೀತಾ ಅವರನ್ನು ಭೇಟಿಯಾದರು, ನಂತರ ಸಂಗೀತಾ ಮತ್ತು ನಾನು ಭೇಟಿಯಾದೆವು ಎಲ್ಲವೂ ಓಕೆಯಾಯಿತು. ಇದು ಇದ್ದಕ್ಕಿದ್ದಂತೆ ಸಂಭವಿಸಿದಂತಲ್ಲ, ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು ಮತ್ತು ವಿಶೇಷವಾಗಿ ನಾನು ನಟನಾಗಿರುವುದರಿಂದ, ಅವರಿಗೆ ನನ್ನನ್ನು ತಿಳಿದುಕೊಳ್ಳಲು ಸಮಯ ನೀಡಬೇಕು ಎಂದು ನಾನು ಭಾವಿಸಿದೆ' ಎಂದು ಹೇಳಿದರು.

ಅವಳು ಮದುವೆಯಾಗುತ್ತಿರುವುದು ನಟನನ್ನು

ಸಂಗೀತಾ ತುಂಬಾ ಪ್ರೊಫೇಷನಲ್ ತನಗೆ ಇಷ್ಟವಾದುದ್ದನ್ನು ಮಾಡುತ್ತಾಳೆ ಎಂದರು ಮನೋರಂಜನ್. 
ಅವಳು ಮದುವೆಯಾಗುತ್ತಿರುವುದು ಅನೇಕ ನಾಯಕಿಯರೊಂದಿಗೆ ಕೆಲಸ ಮಾಡುವ ಮತ್ತು ಸದಾ ಚಿತ್ರೀಕರಣದಲ್ಲಿರುವ ನಟನನ್ನು. ಅವಳು ನನ್ನ ಮೇಲೆ ಇಟ್ಟಿರುವ ನಂಬಿಕೆ  ನನಗೆ ತುಂಬಾ ಇಷ್ಟ ಆಯ್ತು. ನನ್ನ ಪರ ನಿಲ್ಲುತ್ತಾಳೆ ಎನ್ನುವ ಸಂಬಿಕೆ ಇದೆ.  ಹೆಚ್ಚು ತಿಳುವಳಿಕೆ ಮತ್ತು ಕಾಳಜಿಯುಳ್ಳ ಯಾರನ್ನೂ ನಾನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಜೊತೆಗೆ ನಾನು ಸರಳ ವ್ಯಕ್ತಿಯನ್ನು ಬಯಸಿದ್ದೆ ಮತ್ತು ಸಂಗೀತಾ ಅದನ್ನು ಸಾಕಾರಗೊಳಿಸಿದ್ದಾಳೆ' ಎಂದು ಮನೋರಂಜನ್ ಹೇಳಿದರು.

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಮದುವೆ ಫಿಕ್ಸ್; ಹುಡುಗಿ ಯಾರು?

ಆಗಸ್ಟ್ 21ರಂದು ಮದುವೆ, 22ಕ್ಕೆ ಆರತಕ್ಷತೆ

ಆಗಸ್ಟ್ 21 ರಂದು ವಿವಾಹ ನಡೆಯಲಿದೆ, ಇದಕ್ಕೂ ಮೊದಲು, ಆಗಸ್ಟ್ 20 ರಂದು ಆರತಕ್ಷತೆಯನ್ನು ನಡೆಯಲಿದೆ. ನಂತರ ಆಗಸ್ಟ್ 22 ರಂದು ರವಿಚಂದ್ರನ್ ಅವರು ಆಯೋಜಿಸುವ ಮತ್ತೊಂದು ಆರತಕ್ಷತೆ ಇದೆ. 'ನನ್ನ ತಂಗಿ ಅಂಜು ಅವರ ವಿವಾಹವು ಅದ್ಧೂರಿಯಾಗಿತ್ತು, ಏಕೆಂದರೆ ಹುಡುಗಿಯ ಕಡೆಯಿಂದ ನಾವು ಅದನ್ನು ಆ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಸಂಗೀತಾ ಅವರ ಕುಟುಂಬವು ಚಲನಚಿತ್ರಗಳಿಂದ ದೂರವಿದೆ ಮತ್ತು ಕಡಿಮೆ-ಪ್ರೊಫೈಲ್ ಮದುವೆಯನ್ನು ಬಯಸುತ್ತಿದ್ದಾರೆ. ಆದ್ದರಿಂದ ನಾವು ಅವರ ಆಶಯಗಳನ್ನು ಗೌರವಿಸಲು ಬಯಸುತ್ತೇವೆ' ಎಂದು ಹೇಳಿದರು. 

ಅಜ್ಜಿಗೆ ದೊಡ್ಡ ಮಗನೇ ಫೆವರೆಟ್; ಕೊನೆ ವಿಡಿಯೋ ಹಂಚಿಕೊಂಡ ರವಿಚಂದ್ರನ್ ಪುತ್ರ

 ಮೀಡಿಯಾ ಮುಂದೆ ಬರಲು ಇಷ್ಟಪಡಲ್ಲ 

ಸಂಗೀತಾ ಬಗ್ಗೆ ಮಾತನಾಡಿದ ಮನೋರಂಜನ್, ನನ್ನ ಕುಟುಂಬ ಆವಳನ್ನು ತುಂಬಾ ಇಷ್ಟಪಟ್ಟಿದೆ. ಅವಳು ತನ್ನ ತಂದೆ-ತಾಯಿ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾಳೆ ಎಂದು ಹೇಳಿದರು. ಸದ್ಯ ನಾನು ಗೋ ವಿತ್ ಫ್ಲೋ ಎನ್ನುವ ಹಾಗೆ ಹೋಗುತ್ತಿದ್ದೇನೆ. ಹಾಗೆ ಆಕೆಯ ಪ್ರೈವೆಸಿ ಕಾಪಾಡುವುದು ಮುಖ್ಯ. ಮಾಧ್ಯಮದ ಮುಂದೆ ಬರಲು ನಾಚಿಕೆ ಪಡುತ್ತಾಳೆ' ಎಂದು ಮನೋರಂಜನ್ ಭಾವಿ ಪತ್ನಿ ಬಗ್ಗೆ ವಿವರಿಸಿದರು.

Follow Us:
Download App:
  • android
  • ios