ವರಮಹಾಲಕ್ಷ್ಮಿ ಹಬ್ಬಕ್ಕೆ ಹೊಸ ಕಾರು ಖರೀದಿಸಿದ ಸಿಂಪಲ್ ಸ್ಟಾರ್. ಬ್ಲಾಕ್ ಔಟ್‌ಫಿಟ್‌ನಲ್ಲಿ ಬ್ಲ್ಯಾಕ್ ಕಾರು ಮುಂದೆ ನಿಂತ ಶೆಟ್ರು... 

ಸ್ಯಾಂಡಲ್‌ವುಡ್‌ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಐಷಾರಾಮಿ ಕಾರು ಖರೀದಿಸಿದ್ದಾರೆ. ಕಾರಿನ ಎದುರು ನಿಂತಿರುವ ರಕ್ಷಿತ್ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಶೆಟ್ರೇ ನಿಮ್ಮ ಲಕ್ಷ್ಮಿ ಯಾವಾಗ ಬರೋದು ಎಂದು ಪ್ರಶ್ನೆ ಮಾಡಿದ್ದಾರೆ ನೆಟ್ಟಿಗರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

98 ಲಕ್ಷದಿಂದ 1.27 ಕೋಟಿ ಬೆಲೆ ಬಾಳುವ ಆಡಿ ಕ್ಯೂ 8 ಕಪ್ಪು ಬಣ್ಣದ ಕಾರನ್ನು ರಕ್ಷಿತ್ ಖರೀಸಿದ್ದಾರೆ. ಕಾರಿಗೆ ಪೂಜೆ ಸಹ ಮಾಡಿದ್ದಾರೆ. ರಕ್ಷಿತ್ ಸ್ನೇಹಿತ ವಿವೇಕ್ ಟ್ಟೀಟ್ ಮಾಡಿದ್ದಾರೆ. 'ಕಂಗ್ರಾಜುಲೇಷನ್ಸ್ ಬ್ರದರ್ ರಕ್ಷಿತ್, ವರಮಹಾಲಕ್ಷ್ಮಿ ಹಬ್ಬದ ದಿನ ಈ ಹೊಸ ಕಾರು ಖರೀದಿಸಿರುವುದಕ್ಕೆ. ನಿಮಗೆ ಶುಭವಾಗಲಿ, ಇನ್ನು ಎತ್ತರಕ್ಕೆ ಬೆಳೆಯಿರಿ,' ಎಂದು ಬರೆದುಕೊಂಡಿದ್ದಾರೆ. 

ರಕ್ಷಿತ್‌ ಶೆಟ್ಟಿಚಿತ್ರರಂಗ ಪ್ರವೇಶಿಸಿ 11 ವರ್ಷ!

ಇನ್ನು ರಕ್ಷಿತ್ ಶೆಟ್ಟಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಹೇಮಂತ್ ರಾವ್ ನಿರ್ದೇಶನ ಮಾಡುತ್ತಿರುವ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರ ಫಸ್ಟ್ ಶೆಡ್ಯೂಲ್ ಚಿತ್ರೀಕರಣ ಮುಗಿದಿದೆ, ಎರಡನೇ ಶೆಡ್ಯೂಲ್ ಶೀಘ್ರದಲ್ಲಿಯೇ ಆರಂಭವಾಗಲಿದೆ. ಇನ್ನು ಚಾರ್ಲಿ 777 ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಇದರ ಜೊತೆಗೆ ಹೊಂಬಾಳೆ ಫಿಲಂ ಜೊತೆಗೆ 'ರಿಚರ್ಡ್ ಆ್ಯಂಟನಿ' ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶನಕನಾಗಿಯೂ ಕೆಲಸ ಮಾಡಲಿದ್ದಾರೆ.

ಇನ್ನು ರಕ್ಷಿತ್ ಹಬ್ಬದ ದಿನ ಕಾರು ಖರೀದಿಸಿರುವುದಕ್ಕೆ ನೆಟ್ಟಿಗರು ತಮಾಷೆಗ ಕಾಲೆಳೆದಿದ್ದಾರೆ. ರಿಯಲ್ ಲೈಫ್ ಮಹಾಲಕ್ಷ್ಮಿ ಯಾವಾಗಾ ಎಂಟ್ರಿ ಕೊಡುವುದು ಎಂದು ಪ್ರಶ್ನೆ ಮಾಡಿದ್ದಾರೆ.

Scroll to load tweet…