ರಕ್ಷಿತ್ ಶೆಟ್ಟಿಚಿತ್ರರಂಗ ಪ್ರವೇಶಿಸಿ 11 ವರ್ಷ!
11 ವರ್ಷ ಸಿನಿ ಪೂರೈಸಿದ ಸಿಂಪಲ್ ಸ್ಟಾರ್. ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದ ರಿಚಿ....
ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು, 11 ವರ್ಷಗಳನ್ನು ಪೂರೈಸಿದ್ದಾರೆ.
ಅಭಿಮಾನಿಗಳು ಈ ಖುಷಿಯನ್ನು ಕಾಮನ್ ಡಿಪಿ ಬಿಡುಗಡೆ ಮಾಡುವ ಮೂಲಕ ಸಂಭ್ರಮಿಸಿದ್ದಾರೆ.
‘ನಮ್ ಏರಿಯಾಲ್ ಒಂದಿನ’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ರಕ್ಷಿತ್ ಈವರೆಗೆ ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ್ದಾರೆ.
ತಮ್ಮ ಹನ್ನೊಂದು ವರ್ಷದ ಸಿನಿ ಜರ್ನಿಯಲ್ಲಿ ಸಹಕರಿಸಿದ ಎಲ್ಲರಿಗೂ ರಕ್ಷಿತ್ ಕೃತಜ್ಞತೆ ಹೇಳಿದ್ದಾರೆ.
ಇನ್ನೊಂದು ಕಡೆ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಮಲಯಾಳಂ ಡಬ್ಬಿಂಗ್ ಪೂರ್ಣಗೊಂಡಿದೆ.
ಹೊಂಬಾಳೆ ಫಿಲಂ ತಂಡದ ಜೊತೆ 'ರಿಚರ್ಡ್ ಆ್ಯಂಟನಿ' ಸಿನಿಮಾ ಘೋಷಣೆ ಮಾಡಿದ್ದಾರೆ.
ಕಿರಿಕ್ ಪಾರ್ಟಿ ಸಿನಿಮಾ ರಿಲೀಸ್ ಆದ ನಂತರ ಸಿಕ್ಕ ಪ್ರೀತಿ ಈಗಲೂ ಮರೆಯಲಾಗುವುದಿಲ್ಲ. ಇದರ ಪ್ರಯುಕ್ತ ತೂಗು ಮಂಚದಲ್ಲಿ ಸಿನಿಮಾದಲ್ಲಿ ಹಾಡು ಬಿಡುಗಡೆ ಮಾಡುತ್ತಿದ್ದಾರೆ.