Asianet Suvarna News Asianet Suvarna News

ದೇವಿ ಭಕ್ತೆಯೊಬ್ಬರ ಮೂಲಕ ಭವಿಷ್ಯ ನುಡಿಸಿದ್ದರೂ, ಗೊತ್ತಿದ್ದೂ ನಟ ದರ್ಶನ್ ಕೇರ್‌ಲೆಸ್ ಮಾಡಿದ್ದೇಕೆ..?

'ಗುರುಗಳೇ, ನನಗೆ ಕರ್ನಾಟಕದ ಪ್ರಸಿದ್ಧ ವ್ಯಕ್ತಿಯೊಬ್ಬರ ಬಾಳಿನಲ್ಲಿ ಸಮಸ್ಯೆ ಆಗಲಿದೆ ಎಂದು ಭವಿಷ್ಯ ಬಂದಿದೆ. ಆದರೆ ಅದು ಕನಸೋ ಅಥವಾ ಅಂತರಂಗದ ಮಾತೋ ಅದೇನೂ ಅಂತ ನನಗೆ ತಿಳಿಯದು. ಅವರ ಪ್ರಾಣಕ್ಕೇ ಅಪಾಯವಿದೆ. ಜೊತೆಗೆ, ಒಮ್ಮೆ ಅವರ ಪ್ರಾಣ ಉಳಿದರೂ..

kannada actor darshan future incident predicted by a woman through goddess srb
Author
First Published Jun 30, 2024, 3:56 PM IST

ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದು ಕೋಟ್ಯಂತರ ಅಭಿಮಾನಿ ಬಳಗವನ್ನು ಹೊಂದಿರುವ ನಟ ದರ್ಶನ್ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿ ಬಂಧಿಯಾಗಿರುವುದು ಗೊತ್ತೇ ಇದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ, ಒಟ್ಟೂ ಹದಿನೇಳು ಜನರು ಆರೋಪಿಗಳಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚರಣಾಧೀನ ಖೈದಿಗಳಾಗಿ ಕಭಿ ಹಿಂದೆ ಸೇರಿದ್ದಾರೆ. ನಟ ದರ್ಶನ್, ಅವರಿಗೆ ಬೇಲ್ ಆಗುತ್ತಾ? ಆದರೂ ಯಾವಾಗ ಆಗುತ್ತೆ? ಈ ಬಗ್ಗೆ ಯಾವುದೇ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. 

ಆದರೆ, ಇವೆಲ್ಲಕ್ಕಿಂತ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ ಎಂದರೆ, ನಟ ದರ್ಶನ್ ಅವರಿಗೆ ಈ ಬಗ್ಗೆ ಮೊದಲೇ ಗೊತ್ತಿತ್ತು. ಅಂದರೆ, ಅವರಿಗೆ ಅಪಾಯದ ಸೂಚನೆಯನ್ನು ಕೊಡಲಾಗಿತ್ತು. ಅದು ದೇವತೆ, ದೇವಿ ಎಂದರೆ, ಹೆಣ್ಣು ದೈವದಿಂದ ಬಂದಿದ್ದ ಭವಿಷ್ಯವಾಗಿತ್ತು ಎಂದಿದ್ದಾರೆ. ಆಧ್ಯಾತ್ಮದ ಹಾದಿಯಲ್ಲಿ ಸಾಗುತ್ತಿರುವ ಸ್ವಾಮೀಜಿಯೊಬ್ಬರು ಈ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ನಡೆದ ಸಂಗತಿಯನ್ನು ಅವರು ಸವಿಸ್ತಾರವಾಗಿ ವಿವರಿಸಿದ್ದಾರೆ. ಅವರು ಹೇಳಿರುವ ಮಾಹಿತಿಯಂತೆ ಇಲ್ಲಿ ಎಲ್ಲವನ್ನೂ ಹೇಳಲಾಗಿದೆ, ಓದಿಕೊಳ್ಳಿ...

ಇರೋದ್ ಒಂದ್ ಹಾರ್ಟ್, ಎಷ್ಟು ಸರ್ತಿ ಕಾಡ್ತೀರ ಸರ್; ನೂರೊಂದು ನೆನಪಿಗೂ ಮೀರಿದವರು ಎಸ್‌ಪಿಬಿ!

ಸ್ವಾಮೀಜಿಯೊಬ್ಬರ ಭಕ್ತೆ, ಅವರೂ ಸಹ ಆಧ್ಯಾತ್ಮ ಸಾಧನೆ ಮಾಡುತ್ತಿರುವವರೇ ಆಗಿದ್ದು ತುಂಬಾ ದಿನಗಳ ಬಳಿಕ ತಮ್ಮ ಗುರು ಸಮಾನರಾದ ಸ್ವಾಮೀಜಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರಂತೆ. ಬಂದಿದ್ದ ಮಹಿಳೆ 'ಗುರುಗಳೇ, ನನಗೆ ಕರ್ನಾಟಕದ ಪ್ರಸಿದ್ಧ ವ್ಯಕ್ತಿಯೊಬ್ಬರ ಬಾಳಿನಲ್ಲಿ ಸಮಸ್ಯೆ ಆಗಲಿದೆ ಎಂದು ಭವಿಷ್ಯ ಬಂದಿದೆ. ಆದರೆ ಅದು ಕನಸೋ ಅಥವಾ ಅಂತರಂಗದ ಮಾತೋ ಅದೇನೂ ಅಂತ ನನಗೆ ತಿಳಿಯದು. ಅವರ ಪ್ರಾಣಕ್ಕೇ ಅಪಾಯವಿದೆ. ಜೊತೆಗೆ, ಒಮ್ಮೆ ಅವರ ಪ್ರಾಣ ಉಳಿದರೂ ಕೂಡ ಜೀವನ ತುಂಬಾ ಕಷ್ಟಕ್ಕೆ ಸಿಲುಕಲಿದೆ' ಎಂದಿದ್ದರಂತೆ ಆ ಮಹಿಳೆ. 

ಅಪಾಯದ ಸೆನ್ಸ್ ಮೊದ್ಲೇ ಆಗಿದೆ, ಆದ್ರೂ ಬೆಂಗಳೂರು ಬಿಟ್ಟು ಹೋಗದೇ ಜೈಲು ಸೇರ್ಕೊಂಡ್ರು ದರ್ಶನ್!

ಅದಕ್ಕೆ ಸ್ವಾಮೀಜಿಗಳು 'ಹೀಗೆ ಒಗಟಾಗಿ ಹೇಳಿದರೆ ಹೇಗಮ್ಮಾ ತಾಯೀ? ಯಾರು ಆ ವ್ಯಕ್ತಿ, ಎಲ್ಲಿರುತ್ತಾರೆ ಎಂಬ ಮಾಹಿತಿ ಹೇಳಿದರೆ ಸಾಧ್ಯವಾದರೆ ನಮ್ಮಿಂದ ಆಗಬಹುದಾದ ಏನಾದರೂ ಸಹಾಯ ಮಾಡಬಹುದು' ಎಂದರಂತೆ. ಅದಕ್ಕೆ ಆಕೆ, ಆ ಫೇಮಸ್ ವ್ಯಕ್ತಿ ದರ್ಶನ್' ಎಂದಾಗ ಸ್ವಾಮೀಜಿಗೆ ಏನು ಹೇಳಬೇಕೆಂದೇ ತೋಚಲಿಲ್ಲ ಎಂದಿದ್ದಾರೆ. ಅದಕ್ಕೆ ಸ್ವಾಮೀಜಿ, 'ಅಲ್ಲಮ್ಮಾ, ನಟ ದರ್ಶನ್ ಚೆನ್ನಾಗಿಯೇ ಇದ್ದಾರಲ್ಲಮ್ಮ, ಅವರಿಗೆ ನಾನು ಹೋಗಿ ಅಥವಾ ಬೇರೆ ಯಾರನ್ನಾದರೂ ಕಳಿಸಿ 'ಮುಂದೆ ಯಾವತ್ತೋ ನಿಮ್ಮ ಜೀವಕ್ಕೆ ಅಥವಾ ಜೀವನಕ್ಕೆ ಅಪಾಯವಿದೆ. ಬೀ ಕೇರ್‌ಫುಲ್' ಎಂದು ಹೇಳುವುದಾದರೂ ಹೇಗೆ' ಎಂದಿದ್ದರಂತೆ. 

ಅವ್ನೊಬ್ಬ ಕಂತ್ರಿ.. ಕಜ್ಜಿನಾಯಿ, ಶುರುವಾಗಿದ್ದೇ ಅವ್ನಿಂದ; ಆದ್ರೆ ನಟ ದರ್ಶನ್ 'ಇದನ್ನ' ಮಾಡ್ಬೇಕಿತ್ತು: ಅಗ್ನಿ ಶ್ರೀಧರ್

ಆದರೆ, ಆ ಮಹಿಳೆ ಪಟ್ಟು ಬಿಡದೇ, ಇಲ್ಲ ಗುರುಗಳೇ, ನಾನು ಸ್ಪಷ್ಟವಾಗಿ ಹೇಳುತ್ತೇನೆ, ನನಗೆ ಅದು ಅತೀಂದ್ರಿಯ ಶಕ್ತಿ ಹೇಳಿದಂತೆ ಭಾಸವಾಗುತ್ತಿದೆ. ಸಿಕ್ಸ್ತ್ ಸೆನ್ಸ ಅಂತೇನೋ ಹೇಳ್ತಾರಲ್ಲ, ಹಾಗೇ, ನಟ ದರ್ಶನ್ ಪ್ರಾಣಕ್ಕೆ ಅಥವಾ ಜೀವನಕ್ಕೆ ಪಕ್ಕಾ ಗಂಡಾಂತರವಿದೆ. ನಾವೇನಾದ್ರೂ ಸಹಾಯ ಮಾಡ್ಲೇಬೇಕು' ಎಂದಿದ್ದರಂತೆ. ಜತೆಗೆ, ಅಪಾಯದ ಮೊದಲು, ಅವರ ಎಡಗೈಗೆ ಏಟು ಬೀಳುತ್ತದೆ. ಪ್ರಾಕ್ಚರ್ ಆಗಬಹುದು. ಒಟ್ಟಿನಲ್ಲಿ, ಮೊದಲು ಅವರ ಎಡಗೈಗೆ ಖಂಡಿತ ದೊಡ್ಡ ಪ್ರಮಾಣದಲ್ಲೇ ಹೊಡೆತ ಬೀಳುತ್ತದೆ. ಬಳಿಕ, ಮಹಾ ಸಮಸ್ಯೆ ಅವರ ಮೇಲೆ ಎರಗುತ್ತದೆ' ಎಂದರಂತೆ. 

ಗಂಡ-ಹೆಂಡತಿ ಮಧ್ಯೆ 'ಅದು' ಆಗ್ತಿಲ್ಲ ಅಂದ್ರೆ ಒಟ್ಟಿಗೇ ಒಂದೇ ಮನೇಲಿ ಯಾಕೆ ಇರ್ಬೇಕು; ಚಂದನ್ ಶೆಟ್ಟಿ

ಇಷ್ಟು ಹೇಳಿದ ಮೇಲೂ ಸುಮ್ಮನಿರಬಾರದು ಎಂದು ಸ್ವತಃ ಆ ಸ್ವಾಮೀಜಿಗಳೇ ನಟ ದರ್ಶನ್ ಅವರನ್ನು ಸಂಪರ್ಕಿಸಿ ಈ ಸಂಗತಿ ತಿಳಿಸಿದ್ದರಂತೆ. ಆಗ ಸ್ವಾಮೀಜಿಗಳು ಬಿಡಿಸಿ ಹೇಳದೇ ನಿಮ್ ಕೈಗೆ ಎನ್ನಲು ನಟ ದರ್ಶನ್ ನನ್ ಕೈ ಈಗಾಗಲೇ ಪ್ರಾಕ್ಚರ್ ಆಗಿದೆ ಎಂದರು. ಅದಕ್ಕೆ ನಾನು ಈಗ ಆಗಿರುವುದು ನಿಮ್ಮ ಬಲಗೈ, ಮುಂದೆ ಆಗಲಿರುವುದು ಎಡಗೈಗೆ ಎಂದಾಗ, ದರ್ಶನ್‌ಗೆ ಶಾಕ್ ಆಗ್ಬಿಟ್ಟು ಮೌನಕ್ಕೆ ಶರಣಾಗಿದ್ದರು. ಅದರಂತೆ, ಸ್ವಲ್ಪ ದಿನದಲ್ಲೇ ನಟ ದರ್ಶನ್ ಎಡಗೈಗೆ ತೀವ್ರ ಏಟ್ ಆಗಿತ್ತು. ಬಳಿಕ, ಆ ಮಹಿಳೆ ಹೇಳಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ' ಎಂದಿದ್ದಾರೆ ಹೆಸರು ಹೇಳಲು ಇಚ್ಛಿಸದ ಸ್ವಾಮೀಜಿಗಳು. 

ಅವ್ರು ಕೊಡೋ ಪೋಸ್, ನಾವೇ ಗ್ರೇಟು ಅನ್ನೋ ಫೀಲಿಂಗ್‌ಗೆ ಕೌಂಟರ್..;ಕೆಜಿಎಫ್ ಸ್ಟಾರ್ ಯಶ್!

ಯಾಕೆ ನೀವು ಹೆಸರು ಹೇಳುವುದಿಲ್ಲ ಎಂಬ ಪ್ರಶ್ನೆಗೆ ಅವರು 'ಕೆಲವರು ಕಣ್ಣಿಗೆ ಕಂಡಿದ್ದನ್ನು ಬಿಟ್ಟು ಕಾಣದ್ದನ್ನು ನಂಬುವುದಿಲ್ಲ. ಎಲ್ಲವನ್ನೂ ತರ್ಕಕ್ಕೇ ಸಿಕ್ಕಿಹಾಕಿಸಿ ಹೇಳುವುದಕ್ಕೆ ಆಗುವುದಿಲ್ಲ. ಆ ಕಾರಣಕ್ಕೇ ನಾನು ಸ್ವತಃ ದರ್ಶನ್‌ ಅವರಿಗೇ ತಿಳಿಸಿದ್ದರೂ ವಾದ ಮಾಡಲು ಹೋಗಲಿಲ್ಲ. ಕಾರಣ, ವಾದ ಮಾಡಿದರೆ ಅದೊಂದು ವಿವಾದವಾಗುತ್ತದೆ. ಆದರೆ, ಯಾವತ್ತು ಭವಿಷ್ಯವು ವರ್ತಮಾನವಾಗಿ ಬದಲಾಗುತ್ತದೆಯೋ ಆಗ, ಭವಿಷ್ಯವನ್ನು ಮೊದಲೇ ಹೇಳಿದ್ದವರಿಗೂ ಕೇಳಿಸಿಕೊಂಡವರಿಗೂ ಯಾವುದೇ ತರ್ಕ ಶಾಸ್ತ್ರದ ಅಗತ್ಯ ಇರುವುದಿಲ್ಲ' ಎಂದಿದ್ದಾರೆ. 

ಅದು ಹಾಗೇ ಆಗಿದ್ರೆ ಕೊಲೆಗೂ ಮೊದ್ಲೇ ದರ್ಶನ್ & ಗ್ಯಾಂಗ್ ಮಹಾ ಅಪರಾಧ ಎಸಗಿದೆ: ಅಗ್ನಿ ಶ್ರೀಧರ್ ಹೇಳಿದ್ದೇನು?

Latest Videos
Follow Us:
Download App:
  • android
  • ios