ಕೊರೋನಾದಿಂದ ಮುಂದೂಡಿದೆ ಸ್ಯಾಂಡಲ್‌ವುಡ್ ಖ್ಯಾತ ಖಳನಟನ ಅದ್ಧೂರಿ ಮದುವೆ!
ಗೃಹಸ್ಥಾಶ್ರಮಕ್ಕೆ ಕಾಲಿಡಬೇಕಿದ್ದ ಬಹುಭಾಷಾ ನಟ ರಾಜ್ ದೀಪಕ್ ಶೆಟ್ಟಿ ಮದುವೆ ಮುಂದೂಡಿಕೆ. ಫಿಕ್ಸ್ ಆದ ದಿನಾಂಕದಂದು ಎರಡು ಶುಭ ಸಮಾರಂಭಗಳು. ಏನದು?
'ಶ್ರೀಕಂಠ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಖಳನಟನಾಗಿ ಪದಾರ್ಪಣೆ ಮಾಡಿದ ಮಂಗಳೂರು ಹುಡುಗ ರಾಜ್ ದೀಪಕ್ ಶೆಟ್ಟಿ ಮೇ.17ರಂದು ಬಹು ದಿನಗಳ ಗೆಳತಿ ಸೋನಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಬೇಕಿತ್ತು ಆದರೆ ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಮದುವೆ ದಿನಾಂಕವನ್ನು ಮುಂದೂಡಿದ್ದಾರೆ.
ಸೋನಿಯಾ ರಾಡ್ರಿಗೋಸ್ ಅವರೊಟ್ಟಿಗೆ ಮೇ.17ರಂದು ನಿಗದಿಯಾಗಿದ್ದ ಮದುವೆ ದಿನಾಂಕವನ್ನು ಅಕ್ಟೋಬರ್ 18ಕ್ಕೆ ಫಿಕ್ಸ್ ಮಾಡಲಾಗಿದೆ. ವಿಶೇಷವೇನೆಂದರೆ ಅಂದು ದೀಪಕ್ ಶೆಟ್ಟಿ ಅವರ ಹುಟ್ಟುಹಬ್ಬವಾಗಿದ್ದು ಇನ್ನೂ ಹೆಚ್ಚು ವಿಜೃಂಭಣೆಯಿಂದ ಮಾಡಲಾಗುತ್ತದೆ ಎನ್ನಲಾಗಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ
ಇನ್ನು ಸೋನಿಯಾ ರಾಡ್ರಿಗೋಸ್ ಫ್ಯಾಷನ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಮಂಗಳೂರು ಫ್ಯಾಷನ್ ವೀಕ್ ಮಾಲಕಿ ಆಗಿದ್ದು ಅನೇಕ ಈವೇಂಟ್ ಆರ್ಗನೈಸ್ ಮಾಡುತ್ತಾರೆ. ಕೊರೋನಾ ವೈರಸ್ ಲಾಕ್‌ಡೌನ್ ಇರುವ ಕಾರಣ ದೀಪಕ್ ಮಂಗಳೂರಿನಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿದ್ದಾರೆ.
ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು
ಇತ್ತೀಚಿಗೆ ಅಲ್ಲು ಅರ್ಜುನ್ ಮುಂದಿನ ಚಿತ್ರ 'ಪುಷ್ಪ' ಪೋಸ್ಟರ್ ರಿಲೀಸ್ ಆಗಿದ್ದು ಆ ಚಿತ್ರದಲ್ಲೂ ರಾಜ್ ದೀಪಕ್ ಶೆಟ್ಟಿ ಪ್ರಮುಖ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಪಕ್ಷ ಮೀರಿದ ಸಂಬಂಧ; ಆರ್‌ವಿ ದೇವರಾಜ್ ಫ್ಯಾಮಿಲಿಗೆ ಪಿಸಿ ಮೋಹನ್ ಪುತ್ರಿ