ಬೆಂಗಳೂರು(ಏ. 10)  ಸಂಬಂಧಗಳಿಗೆ ಪಕ್ಷಗಳ ಎಣೆಯಿಲ್ಲ. ಬಿಜೆಪಿ ನಾಯಕ ಸಚಿವ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಬೀಗರು.  ಈಗ ಮತ್ತೆ ಅಂಥದೆ ಒಂದು ಸಂಬಂಧ ಕುದುರಿದೆ. ಆದರೆ ಇದು ಬೆಂಗಳೂರಿನ ವ್ಯಾಪ್ತಿ.

ಬೆಂಗಳೂರು ಕೇಂದ್ರ ಸಂಸದ ಬಿಜೆಪಿಯ ಪಿಸಿ ಮೋಹನ್  ಮತ್ತು ಕಾಂಗ್ರೆಸ್ ನಾಯಕ ಮಾಜಿ ಎಂಎಲ್‌ಎ ಆರ್.ವಿ.ದೇವರಾಜ್ ಅವರು ನೆಂಟರಾಗುತ್ತಿದ್ದಾರೆ. ಆರ್‌.ವಿ.ದೇವರಾಜ್ ಅವರ ಪುತ್ರ ಮತ್ತು ಪಿಸಿ ಮೋಹನ್ ಪುತ್ರಿ ಮದುವೆ ಮಾತುಕತೆ ನಡೆದಿದೆ.

ಲಾಕ್ ಡೌನ್ ಇದ್ದರೆ ಏನಾತು? ಮದುವೆಯಾಗಿ ಠಾಣೆಗೆ ಬಂದ ನವಜೋಡಿ

ಪಿಸಿ ಮೋಹನ್ ಪುತ್ರಿ ರಿತಿಕಾ ಮತ್ತು ಆರ್.ವಿ.ದೇವರಾಜ್  ಪುತ್ರ ಯುವರಾಜ ಸತಿ ಪತಿಗಳಾಗುವ ಕಾಲ ಬಂದಿದೆ. ಪಿಸಿ ಮೋಹನ್ ಪುತ್ರ ರಿತಿನ್ ಸಹ ತಮ್ಮ ಸೋಶಿಯಲ್ ಮೀಡಿಯಾ ಖಾತೆ ಮೂಲಕ ವಿಚಾರ ಹಂಚಿಕೊಂಡಿದ್ದಾರೆ.

ಲಾಕ್ ಡೌನ್ ಮಧ್ಯೆಯೂ ಎರಡು ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ನಿಶ್ಚಿತಾರ್ಥ ಎಂದು ಕರೆಯಲೂ ಸಾಧ್ಯವಿಲ್ಲವಾದರೂ ಸೋಶಿಯಲ್ ಮೀಡಿಯಾದಲ್ಲಿಯೂ  ಹೊಸ ಜೋಡಿಯ ಪೋಟೋ ಶೇರ್ ಆಗಿದೆ.   ಒಟ್ಟಿನಲ್ಲಿ ಮತ್ತೊಂದು ಘಟಾನುಘಟಿ ರಾಜಕಾರಣಿಗಳ ನಡುವೆ ಸಂಬಂಧ ಬೆಸೆಯುವ ಎಲ್ಲ ಲಕ್ಷಣ ಕಾಣುತ್ತಿದೆ.