ಸುಖ ದಾಂಪತ್ಯಕ್ಕೆ ಜ್ಯೋತಿಷ್ಯ ಸೂತ್ರಗಳು
ಮುಂದುವರೆದರೂ ಎಷ್ಟೋ ಬಾರಿ ಸಮಸ್ಯೆಗಳಾಗುತ್ತದೆ. ಅಂತಹ ಹಲವು ಸಮಸ್ಯೆಗಳನ್ನು ಜಾತಕದಿಂದ ತಿಳಿದುಕೊಳ್ಳಬಹುದಾಗಿರುತ್ತದೆ. ವಿವಾಹ ಪೂರ್ವದಲ್ಲೇ ಪರಸ್ಪರ ಹೊಂದಾಣಿಕೆಯನ್ನು, ದೋಷಗಳನ್ನು
ಮನಗಂಡು ಸರಿಪಡಿಸಿಕೊಂಡಲ್ಲಿ ವಿವಾಹದ ನಂತರ ಆಗಬಹುದಾದ ತೊಂದರೆಗಳನ್ನು ತಪ್ಪಿಸಬಹುದಾಗಿದೆ.
ಜಾತಕ ಹೊಂದಿಸುವ ಮೊದಲು
ವಿವಾಹಕ್ಕೆ ಮುಂಚೆ ಗಂಡು ಮತ್ತು ಹೆಣ್ಣಿನ ವಯಸ್ಸಿನ ಅಂತರವನ್ನು ತಿಳಿದುಕೊಂಡಿರ ಬೇಕು. ಹೆಣ್ಣಿನ ವಯಸ್ಸು ಗಂಡಿಗಿಂತ ಕಡಿಮೆ ಇರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಗಂಡು ಅಥವಾ ಹೆಣ್ಣಿನ ಆರ್ಥಿಕ ಸ್ಥಿತಿಯ ಬಗ್ಗೆ ಇಬ್ಬರಿಗೂ ತಿಳಿದು ಮದುವೆಗೆ ಸಮ್ಮತಿಸಿದ್ದರೆ ಮಾತ್ರ ಮುಂದುವರೆಯಬೇಕು. ಇಲ್ಲದಿದ್ದಲ್ಲಿ ಮುಂದೆ ಇದರಿಂದಲೇ ಕಲಹಗಳು ಬರುವ ಸಾಧ್ಯತೆ ಇರುತ್ತದೆ. ಗಂಡು ಮತ್ತು ಹೆಣ್ಣಿನ ಮಾನಸಿಕ ಹಾಗು ಶಾರೀರಿಕ ಸ್ವಸ್ಥತೆಯ ಬಗ್ಗೆ ಅರಿವಿರುವುದು ಮುಖ್ಯ. ಇದರಿಂದ ಮದುವೆಯ ನಂತರದಲ್ಲಿ ಬರುವ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.
ಇದನ್ನೂ ಓದಿ: ಹುಟ್ಟಿದಬ್ಬದ ಸಂಭ್ರಮ ಅಂತ ಎಣ್ಣೆ ಪಾರ್ಟಿ ಮಾಡೋ ಮುನ್ನ ಓದಿ
ಜಾತಕ ಮತ್ತು ಗುಣ ಹೊಂದಾಣಿಕೆ
ಮೇಲೆ ಹೇಳಲಾದ ವಿಷಯಗಳನ್ನು ತಿಳಿದ ನಂತರ ಮುಂದಿನ ಕ್ರಮವೇ ಜಾತಕ ಹೊಂದಾಣಿಕೆಯನ್ನು ಪರಿಶೀಲಿಸುವುದು. ವಧು–ವರರ ಜಾತಕ ಹೊಂದಿಸುವಾಗ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಹೊಂದಿದರೆ ಶುಭವೆಂದೇ ಪರಿಗಣಿಸಲಾಗುತ್ತದೆ. ಇದರಲ್ಲಿ ಗಣ ಮೈತ್ರಿ ಮತ್ತು ನಾಡಿ ದೋಷವಿರಬಾರದು. ಗಂಡು-ಹೆಣ್ಣಿನ ರಾಶಿಯನ್ನು ಹೊಂದಿಸುವುದು ಮುಖ್ಯವಾಗಿದೆ. ರಾಶಿ ಹೊಂದಾಣಿಕೆಯಲ್ಲಿ ವರ ಮತ್ತು ವಧು ಕ್ರಮವಾಗಿ ಅಗ್ನಿ ಹಾಗೂ ವಾಯು ತತ್ತ್ವ, ಭೂಮಿ ಮತ್ತು ಜಲ ತತ್ತ್ವದವರಾಗಿದ್ದರೆ ವಿವಾಹ ಜೀವನದಲ್ಲಿ ಸಾಮರಸ್ಯತೆ ಇರುತ್ತದೆ.
ಜಾತಕದಲ್ಲಿ ರಾಶಿ ಹೊಂದಾಣಿಕೆ
ಗಂಡು-ಹೆಣ್ಣಿನ ರಾಶಿಯ ಹೊಂದಾಣಿಕೆಯು ವಿವಾಹ ನಂತರದ ಜೀವನದ ಮೇಲೆ ಪ್ರಭಾವವನ್ನು ಬೀರುತ್ತದೆ. ಜ್ಯೋತಿಷ್ಯದ ಪ್ರಕಾರ ವರ ಮತ್ತು ವಧುವಿನ ರಾಶಿಯು ಒಂದೇ ಆಗಿದ್ದಲ್ಲಿ, ಪರಸ್ಪರ ಸಂಬಂಧ ಮಧುರವಾಗಿರುತ್ತದೆ. ಇಬ್ಬರ ರಾಶಿಯು ಒಬ್ಬರಿಂದ ಇನ್ನೊಬ್ಬರಿಗೆ ನಾಲ್ಕನೇ ಮತ್ತು ಹತ್ತನೆಯದಾಗಿದ್ದರೆ ಇಂಥವರ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಮೂರನೇ ಮತ್ತು ಹನ್ನೊಂದನೇ ರಾಶಿಯಾಗಿದ್ದರೆ ವೈವಾಹಿಕ ಜೀವನದಲ್ಲಿ ಹಣದ ಕೊರತೆ ಎಂದೂ ಬರುವುದಿಲ್ಲ.
ಇದನ್ನೂ ಓದಿ: ವಿಷ್ಣುವನ್ನು ಪ್ರಸನ್ನಗೊಳಿಸುವ ಪವಿತ್ರ ವೈಶಾಖ ಮಾಸ
ವಧುವರರ ಜಾತಕದಲ್ಲಿ ಆರು, ಎಂಟು ಮತ್ತು ಹನ್ನೆರಡನೇ ಮನೆಯಲ್ಲಿ ಒಂದೇ ರಾಶಿಯಾಗಿರಬಾರದು ಎಂಬುದರ ಬಗ್ಗೆ ಗಮನವಿಡಬೇಕಾಗುತ್ತದೆ. ವಧುವರರ ರಾಶಿ ಮತ್ತು ಲಗ್ನ ಒಂದೇ ಆಗಿದ್ದರೆ ದಾಪಂತ್ಯ ಜೀವನ ಸುಖವಾಗಿರುತ್ತದೆ ಎನ್ನುವ ಮಾತು ನಿಜವೇ ಆಗಿದ್ದರೂ ಇದರಲ್ಲೂ ಅನ್ಯ ಕೆಲವು ಅಂಶಗಳನ್ನು ತೆಗೆದುಹಾಕುವಂತಿಲ್ಲ. ಅದೇನೆಂದರೆ ರಾಶಿ ಒಂದೇ ಆಗಿದ್ದರೆ ನಕ್ಷತ್ರ ಬೇರೆ ಬೇರೆ ಆಗಿರಬೇಕು. ನಕ್ಷತ್ರವೂ ಒಂದೇ ಆಗಿದ್ದಲ್ಲಿ ಕೊನೆ ಪಕ್ಷ ಪಾದ ಭೇದ ಇರಲೇಬೇಕು. ಇಲ್ಲವಾದಲ್ಲಿ ವಿವಾಹ ನಂತರದ ಜೀವನದಲ್ಲಿ ಸಮಸ್ಯೆಗಳು ಬರಬಹುದು.
ಜಾತಕದಲ್ಲಿರುವ ದೋಷದ ವಿಚಾರ
ವಧುವರರ ಜಾತಕ ಹೊಂದಾಣಿಕೆ ಸಮಯದಲ್ಲಿ ಅದರಲ್ಲಿರುವ ದೋಷಗಳ ಬಗ್ಗೆಯೂ ಅರಿಯಬೇಕಾಗುತ್ತದೆ. ವಧುವಿನ ಜಾತಕದಲ್ಲಿ ವೈಧವ್ಯ ಯೋಗ, ವ್ಯಭಿಚಾರ ಯೋಗ, ನಿಸ್ಸಂತಾನ ಯೋಗ, ಮೃತ್ಯು ಯೋಗ ಮತ್ತು ದರಿದ್ರ ಯೋಗವಿದ್ದಲ್ಲಿ ಜ್ಯೋತಿಷ್ಯದ ಪ್ರಕಾರ ವೈವಾಹಿಕ ಜೀವನಕ್ಕೆ ಇದು ಶುಭವಲ್ಲವೆಂದೇ ಪರಿಗಣಿಸಲಾಗುತ್ತದೆ. ವರನ ಜಾತಕದಲ್ಲಿ ಅಲ್ಪಾಯು ಯೋಗ, ನಪುಂಸಕ ಯೋಗ, ವ್ಯಭಿಚಾರ ಯೋಗ, ಬುದ್ಧಿಭ್ರಮಣೆ ಯೋಗ ಮತ್ತು ಪತ್ನಿ ನಾಶದಂತ ಯೋಗಗಳಿದ್ದರೆ ಗೃಹಸ್ಥ ಜೀವನಕ್ಕೆ ಇದು ಅಶುಭವೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ಬ್ರಹ್ಮಚಾರಿ ಹನುಮಂತನ ಮಡದಿ ಬಗ್ಗೆ ನಿಮಗೆಷ್ಟು ಗೊತ್ತು?
ಜ್ಯೋತಿಷ್ಯದಲ್ಲಿ ವಧುವಿನ ಜಾತಕದಲ್ಲಿ ವಿಷ ಕನ್ಯೆಯ ಯೋಗವಿದ್ದಲ್ಲಿ ದಾಂಪತ್ಯ ಜೀವನವು ಸುಖವಾಗಿರುವಿದಿಲ್ಲವೆಂಬ ನಂಬಿಕೆ ಇದೆ. ಆದರೆ ಕೆಲವು ಬಾರಿ ಜಾತಕದಲ್ಲಿ ದೋಷಗಳಿದ್ದರೂ ಅದರ ಪ್ರಭಾವ ತೀರಾ ಕಡಿಮೆ ಇದ್ದಲ್ಲಿ ಅಥವಾ ಜನ್ಮ ಕುಂಡಲಿಯನ್ನು ಬಿಟ್ಟು ನವಮಾಂಶ ಕುಂಡಲಿ ಮತ್ತು ಚಂದ್ರ ಕುಂಡಲಿಯನ್ನು ನೋಡಿ ಮದುವೆ ಮಾಡಬಹುದಾಗಿದೆ.