ಪುನೀತ್ ಅವರ ಹಳೆಯ ಒಂದು ಟ್ವೀಟ್ ಈಗ ವೈರಲ್ ಆಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಇದೇ ದಿನ ಅಂದರೆ ಜೂನ್ 7, 2018 ರಲ್ಲಿ ಅಪ್ಪು ಒಂದು ಟ್ವೀಟ್ ಮಾಡಿದ್ದರು. ಆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ 2018, ಜೂನ್ 7ರಂದು ಪುನೀತ್ ಮಾಡಿದ್ದ ಟ್ವೀಟ್ ಏನು ಅಂತೀರಾ? 'ಆರಾಮಾಗಿ ಇದ್ದೀನಿ. ಯಾರು ಚಿಂತಿಸಬೇಡಿ. ನಿಮ್ಮ ಕಾಳಜಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Puneeth Rajkumar) ನಿಧನ ಹೊಂದಿ 7 ತಿಂಗಳು ಕಳೆದಿದೆ. ಆದರೆ ಇಂದಿಗೂ ಅಪ್ಪು ಅಗಲಿಕೆಯ ನೋವು ಮಾಸಿಲ್ಲ. ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದ ಕರ್ನಾಟಕ ರತ್ನ ಈಗ ನೆನಪು ಮಾತ್ರ. ಆದರೆ ಅವರ ಸಿನಿಮಾಗಳು, ಸಮಾಜಮುಖಿ ಕೆಲಸಗಳು ಎಂದಿಗೂ ಜೀವಂತ. ಪವರ್ ಸ್ಟಾರ್ ಅವರನ್ನು ಅಭಿಮಾನಿಗಳು ದೇವರಹಾಗೆ ಪೂಜಿಸುತ್ತಿದ್ದಾರೆ. ಪುನೀತ್ ಫೋಟೋ ಇಟ್ಟು ಪ್ರತಿನಿತ್ಯ ಆರಾಧಿಸುತ್ತಿದ್ದಾರೆ. ದೇವಸ್ಥಾನಗಳಲ್ಲಿಯೂ ಅಪ್ಪು ಫೋಟೋ ರಾರಾಜಿಸುತ್ತಿದೆ. ಈಗಲೂ ಅಭಿಮಾನಿಗಳು ಅಪ್ಪು ಹೆಸರಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಅಭಿಮಾನಿಗಳು ಹೊಸಪೇಟೆಯಲ್ಲಿ ಪುನೀತ್ ಪುತ್ಥಳಿಯನ್ನು ಅನಾವರಣ ಮಾಡಿದ್ದಾರೆ. ಯಾವ್ಯಾವ ರೀತಿಯಲ್ಲಿ ಪ್ರೀತಿಯ ಅಪ್ಪುವನ್ನು ಸ್ಮರಿಸಲು ಸಾಧ್ಯವೋ ಹಾಗೆಲ್ಲ ಸ್ಮರಿಸುತ್ತಿದ್ದಾರೆ.

ಇದೀಗ ಪುನೀತ್ ಅವರ ಹಳೆಯ ಒಂದು ಟ್ವೀಟ್ ಈಗ ವೈರಲ್ ಆಗುತ್ತಿದೆ. ನಾಲ್ಕು ವರ್ಷಗಳ ಹಿಂದೆ ಇದೇ ದಿನ ಅಂದರೆ ಜೂನ್ 7, 2018 ರಲ್ಲಿ ಅಪ್ಪು ಒಂದು ಟ್ವೀಟ್ ಮಾಡಿದ್ದರು. ಆ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ 2018, ಜೂನ್ 7ರಂದು ಪುನೀತ್ ಮಾಡಿದ್ದ ಟ್ವೀಟ್ ಏನು ಅಂತೀರಾ? 'ಆರಾಮಾಗಿ ಇದ್ದೀನಿ. ಯಾರು ಚಿಂತಿಸಬೇಡಿ. ನಿಮ್ಮ ಕಾಳಜಿಗೆ ಧನ್ಯವಾದಗಳು' ಎಂದು ಹೇಳಿದ್ದಾರೆ.

ಅಪ್ಪು ಹೀಗೆ ಟ್ವೀಟ್ ಮಾಡಲು ಕಾರಣ ಅಪ್ಪು ಕಾರು ಅಪಘಾತವಾಗಿತ್ತು. ಚಿತ್ರೀಕರಣ ಮುಗಿಸಿ ಮನೆಗೆ ವಾಪಾಸ್ ಆಗುವಾಗ ಅಪ್ಪು ಕಾರು ಅಪಘಾತವಾಗಿದೆ ಎನ್ನುವ ಸುದ್ದಿ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ಅಪ್ಪುಗೆ ಏನ್ ಆಗಿದೆ ಎಂದು ಗಾಬರಿಯಲ್ಲಿದ್ದರು. ಆಗ ಪುನೀತ್ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳನ್ನು ಸಮಾಧಾನ ಪಡಿಸಿದ್ದರು. ಈ ಟ್ವೀಟ್ ಈಗ ವೈರಲ್ ಆಗಿದ್ದು ಅಭಿಮಾನಿಗಳು ಈ ಟ್ವೀಟ್ 2021 ಅಕ್ಟೋಬರ್‌ನಲ್ಲಿ ಬಂದಿದ್ದರೆ ಚನ್ನಾಗಿರುತ್ತಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಪುತ್ಥಳಿ ಅನಾವರಣ: ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾದ ರಾಘಣ್ಣ

ಅಕ್ಟೋಬರ್‌ನಲ್ಲಿ ಅಪ್ಪು ನಿಧನ 

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 2021, ಅಕ್ಟೋಬರ್ 29ರಂದು ಹೃದಯಾಘಾತದಿಂದ ಕೊನೆಯುಸಿರೆಳೆದರು. ಪುನೀತ್ ಹಠಾತ್ ನಿಧನ ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದು ಅಪ್ಪಳಿಸುತ್ತು. ನಿಜಕ್ಕೂ ತಾವು ಕೇಳುತ್ತಿರುವ ಸುದ್ದಿ ನಿಜನಾ ಎಂದು ಅಭಿಮಾನಿಗಳು ಪದೇ ಪದೇ ಖಚಿತಮಾಡಿಕೊಂಡಿದ್ದರು. ಆದರೂ ಪ್ರೀತಿಯ ಅಪ್ಪು ಇನ್ನಿಲ್ಲ ಎಂದು ಇಂದಿಗೂ ನಂಬಲು ಸಾಧ್ಯವಾಗುತ್ತಿಲ್ಲ. ಅಪ್ಪು ಅಗಲಿಕೆಯ ಬಳಿಕ ಪುನೀತ್ ನೋಡಲು ಜನಸಾಗರವೇ ಬಂದಿತ್ತು. ಲಕ್ಷಾಂತರ ಜನರು ಅಪ್ಪು ಅಂತಿಮ ದರ್ಶನ ಮಾಡಿ ಕಣ್ಣೀರಾಕಿದ್ದರು.

ಉಪ್ಪಿ UI ಚಿತ್ರದ ಟೈಟಲ್‌ಗೆ ಅಪ್ಪುನೇ ಸ್ಪೂರ್ತಿಯಂತೆ: ಹೇಗೆ ಗೊತ್ತಾ?

ಅಭಿಮಾನಿಗಳು, ಬೇರೆ ಬೇರೆ ಭಾಷೆಯ ಕಲಾವಿದರು ಸಹ ಅಂತಿಮ ದರ್ಶನ ಪಡೆದಿದ್ದರು. ಪುನೀತ್ ದೈಹಿಕವಾಗಿ ಇಲ್ಲವಾಗಿದ್ದರೂ ಅವರ ಸಮಾಜಮುಖಿ ಕೆಲಸಗಳು, ಸಿನಿಮಾಗಳು, ಅವರ ನೆನಪು ಮಾತ್ರ ಜೀವಂತ. ಅವರ ಸಿನಿಮಾಗಳನ್ನು, ಹಾಡುಗಳನ್ನು ನೋಡುತ್ತಾ, ಕೇಳುತ್ತಾ ಅಭಿಮಾನಿಗಳು ಸಂತಸ ಪಡುತ್ತಿದ್ದಾರೆ.