ಅಭಿಮಾನಿಗಳು ತೋರಿಸಿರುವ ಪ್ರೀತಿಗೆ ಎಂದೆಂದಿಗೂ ಋಣಿ ಎಂದು. ಸಿನಿ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡ ನಟ ಪ್ರೇಮ್.
2005ರಲ್ಲಿ 'ನೆನಪಿರಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದ ನಟ ಪ್ರೇಮ್ (Prem Nenapirali) ನಟಿಸಿದ ಅಷ್ಟೂ ಸಿನಿಮಾಗಳು ಬ್ಲಾಕ್ ಬಸ್ಟರ್, ಹಾಡುಗಳು ಸೂಪರ್ ಹಿಟ್. ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳು ಕಳೆದಿದೆ, 25 ಸಿನಿಮಾಗಳನ್ನು ಮಾಡಿರುವೆ, ನಾನು ಇಷ್ಟೊಂದು ಮಾಡಿದೆ ಎನ್ನುವ ಖುಷಿ ಇದೆ ಇನ್ನೂ ಮಾಡಬೇಕು ಎನ್ನುವ ಕನಸಿದೆ ಎಂದು ಪ್ರೇಮ್ ನೆನಪಿರಲಿ ಸಂದರ್ಶನಲ್ಲಿ ಮಾತನಾಡಿದ್ದಾರೆ.
ಪ್ರೇಮ್ ಮಾತು:
'ನಾನು ಯೋಚನೆ ಮಾಡುವೆ ಇಷ್ಟೆಲ್ಲಾ ನಾನೇ ಮಾಡಿರುವುದಾ ಎಂದು. ಅದೇ ಸಮಯಕ್ಕೆ ನಾನು ಮಾಡಿರುವುದು ಕಡಿಮೆ ಮಾಡುವುದು ಸಾಕಷ್ಟಿದೆ. ನನ್ನ ಹಿನ್ನಲೆ, ನಾನು ಬಂದಿರುವ ರೀತಿ ನೋಡಿದರೆ 20 ವರ್ಷ ಪೂರೈಸುವುದು ಸಕ್ಸಸ್ (Succes),ಫೆಲ್ಯೂರ್, ಫ್ಯಾನ್‌ಫೇರ್ (Fanfare) ಎಲ್ಲವೂ ನೋಡಿದರೆ ನನಗೆ ಖುಷಿ ಆಗುತ್ತದೆ. ಋಣಿಯಾಗಿರುವೆ. ನನ್ನ ಜರ್ನಿ ಬಗ್ಗೆ ನನಗೆ ಹೆಮ್ಮೆ ಇದೆ' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ್ದಾರೆ.
![]()
ಪ್ರೇಮ್ 25ನೇ ಚಿತ್ರಕ್ಕೆ ಅವರ ಹೆಸರನ್ನೇ ಶೀರ್ಷಿಕೆಯಾಗಿ ಇಡಲಾಗಿತ್ತು. 'ನನ್ನ 25ನೇ ಸಿನಿಮಾ ತುಂಬಾನೇ ಸ್ಪೆಷಲ್ ಕಾರಣ ಟೈಟಲ್‌ನಲ್ಲಿ ನನ್ನ ಹೆಸರಿತ್ತು. ಸಿನಿಮಾ ಅದ್ಭುತ ಪ್ರದರ್ಶನ ಕಂಡಿತ್ತು ಈಗ ಅದರದ್ದೇ ಎರಡನೇ ಭಾಗ ಮಾಡಲಾಗುತ್ತಿದೆ. ಅದು ಮತ್ತೊಂದು ಸಾಧನೆ. ಎರಡನೇ ಭಾಗ ಶುರು ಮಾಡುವ ಮುನ್ನ ನಾನು ಬೇರೆ ಸಿನಿಮಾ ಕೆಲಸಗಳನ್ನು ಮುಗಿಸಬೇಕು' ಎಂದು ಪ್ರೇಮ್ ಹೇಳಿದ್ದಾರೆ.
'ಜೀವನದಲ್ಲಿ ಕಲಿತಿರುವ ಮೊದಲ ದೊಡ್ಡ ಪಾಠ ತಾಳ್ಮೆ (Patience). ನಮಗೆ ಬಂದದ್ದನ್ನು ಒಪ್ಪಿಕೊಳ್ಳಬೇಕು. ರಿಯಾಲಿಟಿಯನ್ನು ಒಪ್ಪಿಕೊಳ್ಳಬೇಕು. ಯಶಸ್ಸಿನಲ್ಲಿ ಹಾರಿ ತೇಲುವುದಕ್ಕೆ ಆಗುವುದಿಲ್ಲ ಸೋಲುಗಳ ಬಗ್ಗೆ ಡಿಪ್ರೆಸ್ (Depress) ಮಾಡಿಕೊಳ್ಳುವುದಕ್ಕೆ ಆಗೋಲ್ಲ. ನಾನು ಸಮಯಕ್ಕೆ ತಕ್ಕಂತೆ ಪ್ರತಿಕ್ರಿಯೆ ನೀಡಿದ್ದರೆ ಇಲ್ಲಿವರೆಗೂ ಬರುವುದಕ್ಕೆ ಆಗುತ್ತಿರಲಿಲ್ಲ. ನಾನು ಎಲ್ಲವನ್ನೂ ತುಂಬಾನೇ ಕೂಲ್ (Cool) ಆಗಿ ಒಪ್ಪಿಕೊಳ್ಳುತ್ತಿರುವೆ. ಹೀಗಾಗಿ ನಾನು ಸಂತೋಷವಾಗಿರುವೆ ಹಾಗೂ ಆರೋಗ್ಯವಾಗಿರುವೆ' ಎಂದು ಪ್ರೇಮ್ ಹಂಚಿಕೊಂಡಿದ್ದಾರೆ.
Golden Gang ವೇದಿಕೆ ಮೇಲೆ ನಿರ್ದೇಶಕ Tarun Sudhirಗೆ ವಧು ಹುಡುಕಾಟ!
ಚಿತ್ರರಂಗದಲ್ಲಿ ಪ್ರೇಮ್‌ಗೆ ಅಪಾರ ಸಂಖ್ಯೆಯಲ್ಲಿ ಸ್ನೇಹಿತರಿದ್ದಾರೆ. 'ನಮ್ಮ ಸಿನಿಮಾ ಸಂಪೂರ್ಣವಾದ ನಂತರ ಅಥವಾ ಸಿನಿ ಜರ್ನಿ ಮುಗಿಸಿದ ನಂತರ ಸ್ನೇಹಿತರ ಸಂಪರ್ಕ ಕಳೆದುಕೊಳ್ಳುತ್ತೇವೆ ಆದರೆ ನಾನು ಹಾಗೆ ಮಾಡಲಿಲ್ಲ ಪ್ರತಿಯೊಬ್ಬರ ಸಂಪರ್ಕದಲ್ಲಿದ್ದೆ ನಟರು, ಟೆಕ್ನೀಷಿಯನ್, ನಿರ್ಮಾಪಕರು (Producers) ಎಲ್ಲರೂ...ನನ್ನ ಸರ್ಕಲ್ ನನ್ನ ಶಕ್ತಿಯಾಗಿದೆ' ಎಂದು ಸ್ನೇಹದ ಬಗ್ಗೆ ಹೇಳಿದ್ದಾರೆ.
'ನನಗೆ ಪ್ರತಿಯೊಂದು ಸಿನಿಮಾನೂ ತುಂಬಾನೇ ಕ್ಲೋಸ್. ನೆನಪಿರಲಿ (Nenapirali) ನನ್ನ ಎರಡನೇ ಸಿನಿಮಾ ಅದೇ ನನಗೆ ದೊಡ್ಡ ಯಶಸ್ಸು ತಂದುಕೊಟ್ಟಿತ್ತು. ನನ್ನ ಮೊದಲ ಯಶಸ್ಸು ನನ್ನ ಮನಸ್ಸಿನಲ್ಲಿ ಸ್ಪೆಷಲ್ ಜಾಗ ಪಡೆದುಕೊಳ್ಳುತ್ತದೆ. ಈ ಸಿನಿಮಾ ನನಗೆ ಅವಾರ್ಡ್ (Best actor Award) ತಂದುಕೊಟ್ಟಿತ್ತು. ನನ್ನ ಹೆಸರಿಗೆ ನೆನಪಿರಲಿ ಸೇರಿಕೊಂಡಿತ್ತು. ಸಿನಿ ವೀಕ್ಷಕರಲ್ಲಿ ನನ್ನ ಬಗ್ಗೆ ಒಂದು ಇಮೇಜ್ ಸೆಟ್ ಮಾಡಿತ್ತು. ರೊಮ್ಯಾನ್ಸ್ (Romance) ಹೊರತು ಪಡಿಸಿ ಬೇರೆ ಕಥೆಗಳನ್ನು ಒಪ್ಪಿಕೊಳ್ಳುವುದಕ್ಕೆ ನೋಡುತ್ತಿರುವೆ. ವಿಭಿನ್ನ ಮತ್ತು ವಿಶಿಷ್ಠ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವೆ. ಇದು ನನ್ನ ಹೊಸ ಜರ್ನಿ ಹೊಸ ಸೀಸನ್ ಆಗುತ್ತದೆ. ನೀವು ಹೊಸ ಪ್ರೇಮ್ ನೋಡಬಹುದು' ಎಂದಿದ್ದಾರೆ ಪ್ರೇಮ್.
