Asianet Suvarna News Asianet Suvarna News

Golden Gang ವೇದಿಕೆ ಮೇಲೆ ನಿರ್ದೇಶಕ Tarun Sudhirಗೆ ವಧು ಹುಡುಕಾಟ!

ಗೋಲ್ಡನ್ ಸ್ಟಾರ್ ಹೊಸ ಕಾರ್ಯಕ್ರಮ. ತರುಣ್‌ಗೆ ತುತ್ತು ಕೊಟ್ಟ ನಟ ಶರಣ್..

Zee Kannada Ganesh Tarun Sudhir Sharan Prem in Golden gang first episode vcs
Author
Bangalore, First Published Jan 7, 2022, 11:33 AM IST

ಜೀ ಕನ್ನಡ (Zee Kannada) ವಾಹಿನಿಯಲ್ಲಿ ಹೊಸ ಕಾರ್ಯಕ್ರಮ ಶುರುವಾಗುತ್ತಿದೆ, ಅದುವೇ ಗೋಲ್ಡನ್‌ ಗ್ಯಾಂಗ್ (Golden Gang). ಕನ್ನಡ ಚಿತ್ರರಂಗದ (Sandalwood) ಗೋಲ್ಡನ್ ಸ್ಟಾರ್ ಗಣೇಶ್ (Ganesh) ನಡೆಸಿಕೊಡುವ ಈ ಕಾರ್ಯಕ್ರಮ ಜನವರಿ 8ರಿಂದ ಆರಂಭವಾಗಲಿದೆ. ವಾಹಿನಿ ರಿಲೀಸ್ ಮಾಡಿರುವ ಪ್ರೋಮೋ ಸಖತ್ ಮಜವಾಗಿದ್ದು, ತರುಣ್ ಮತ್ತು ಶರಣ್ ಸಂಬಂಧ ಹೇಗಿದೆ ಎಂಬುದನ್ನು ಹಂಚಿಕೊಂಡಿದ್ದಾರೆ. 

ಹೌದು!  ಗಣೇಶ್‌ ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‍ವುಡ್‍ನ ತಾರೆಯರ ಜೊತೆಗೆ ಕಿರುತೆರೆಯಲ್ಲಿ (Kannada Small Screen) ಮೋಡಿ ಮಾಡಿದ ಹಿಂದಿನ ಧಾರವಾಹಿ ಗ್ಯಾಂಗ್, ಹಾಸ್ಯಕ್ಕೆ ಮೆರಗು ತಂದಂತ ಹರಟೆ ಗ್ಯಾಂಗ್, ಟ್ರೆಂಡ್ ಸೆಟ್ ಮಾಡಿದಂತಹ ಸಿನಿಮಾಗಳು, ಜೊತೆಗೆ ಕರ್ನಾಟಕದ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಸಾಧನೆ ತೋರಿರುವ ರಾಜಕೀಯ ದಿಗ್ಗಜರು, ಕ್ರೀಡಾ ತಾರೆಗಳು, ಪತ್ರಿಕೋದ್ಯಮದ ಪತ್ರಕರ್ತರು ಕೂಡ ಭಾಗವಹಿಸುವ ಎಲ್ಲಾ ನಿರೀಕ್ಷೆಗಳಿವೆ. ಮೊದಲ ವಾರ ಮೂವರು ಸ್ಟಾರ್‌ಗಳು ಕಾಣಿಸಿಕೊಂಡಿದ್ದಾರೆ.

Ganesh Golden Gang: ಜೀ ಕನ್ನಡದಲ್ಲಿ ಚಂದನವನದ ಗೆಳೆಯ-ಗೆಳತಿಯರಿಗೋಸ್ಕರ ಹೊಸ ರಿಯಾಲಿಟಿ ಶೋ

ನಟ ಶರಣ್ (Sharan), ನಟ ನೆನಪಿರಲಿ ಪ್ರೇಮ್ (Prem Nenapirali) ಮತ್ತು ನಿರ್ದೇಶಕ ತರುಣ್ ಸುಧೀರ್‌ (Tarun Sudhir) ಒಟ್ಟಾಗಿ ಆಗಮಿಸಿದ್ದಾರೆ. 'ತರುಣ್‌ ನಾನು ಚಿನ್ನು ಎಂದು ಕರೆಯುತ್ತಿದ್ದೆ. ಈಗಲೂ ಹಾಗೇ ಕರೆಯುವುದು. ನನ್ನ ತೊಡೆ ಮೇಲೆ ಕೂರಿಸಿಕೊಂಡು ಆಟ ಆಡಿಸಿದ್ದೀನಿ ತರುಣ್‌‌ನನ್ನು. ಕ್ಯಾರಿಯರ್‌ನಲ್ಲಿ ಊಟ (Lunch Box) ಎಲ್ಲಾ ತೆಗೆದುಕೊಂಡು ಹೋಗಿ ಕೊಟ್ಟಿದ್ದೀನಿ,' ಎಂದು ಹೇಳಿದ ಶರಣ್ ರಿಯಲ್ ಆಗಿ ಕ್ಯಾರಿಯರ್ ಬ್ಯಾಗ್ ಹಿಡಿದುಕೊಂಡು ಬಂದು ತರುಣ್‌ಗೆ ಕೊಟ್ಟಿದ್ದಾರೆ. ಸ್ಕೂಲ್‌ (School) ಹುಡುಗನ ರೀತಿ ನೀರು ಕುಡಿಯುವ ಬಾಟಲ್‌ ಸಹ ಕೊಟ್ಟಿದ್ದಾರೆ. 

Zee Kannada Ganesh Tarun Sudhir Sharan Prem in Golden gang first episode vcs

'ನನ್ನ ಸ್ಕೂಲ್‌ಗೆ ಯಾವತ್ತೂ ನನ್ನ ಅಪ್ಪನೂ ಬಂದಿಲ್ಲ, ನನ್ನ ಅಮ್ಮನೂ ಬಂದಿಲ್ಲ, ನಮ್ಮ ಅಣ್ಣ ನಂದಾ ಅಂತೂ ಬಂದೇ ಇಲ್ಲ. ನನ್ನ ಕೂರಿಸಿಕೊಂಡು ತುತ್ತು ನೀಡಿ, ತಿನ್ನಿಸಿರುವುದು ಶರಣ್‌. ನನಗೆ ಜೀವನದಲ್ಲಿ ಬಂದು ಈ ತರ ಪ್ರೀತಿ ತೋರಿಸಿರುವುದು ಶರಣ್‌ ಒಬ್ಬರೇ,' ಎಂದು ತರುಣ್ ಸುಧೀರ್ ಹೇಳಿದ್ದಾರೆ. 

ಸ್ಪರ್ಧಿಗಳಿಗೆ scholarships ಕೊಟ್ಟು ನನ್ನ ತಂಡಕ್ಕೆ ಕರೆದುಕೊಂಡಿರುವೆ: ಡ್ಯಾನ್ಸರ್ Mayuri

ನಾಲ್ವರು ಸ್ಟಾರ್ ನಟರು ಕಾರ್ಯಕ್ರಮದಲ್ಲಿ ಕೈಮಾ ಉಂಡೆ (Mutton Balls) ಸಾರು ತಿಂದಿದ್ದಾರೆ. 'ನಮ್ಮ ಇಂಡಸ್ಟ್ರಿಯಲ್ಲಿ ಈ ರೀತಿ ಕೈಮಾ ಉಂಡೆ ಮಾಡುವುದಕ್ಕೆ ನಮ್ಮ ಅಮ್ಮ ಫೇಮಸ್‌,' ಎಂದು ತರುಣ್ ಹೇಳುತ್ತಿದ್ದಂತೆ, ಹಿಂದೆಯಿಂದ ಅವರ ತಾಯಿ ಬಂದು ಸರ್ಪ್ರೈಸ್ ಕೊಟ್ಟಿದ್ದಾರೆ. 'ಇವನಿಗೆ ಊಟ ಮಾಡಿದ್ಯಾ ಅಂತ ಹೇಳೋರೇ ಇಲ್ಲ. ಇವನಿಗೆ ಒಂದು ಸಂಗಾತಿ ಅಂತ ಬಂದ್ರೆ ಒಳ್ಳೆಯದು ಅಲ್ವಾ?' ಎಂದು ತರುಣ್ ತಾಯಿ ಹೇಳಿದ್ದಾರೆ. 'ಅಮ್ಮ ನೀವು ಒಂದು ಸಲ ಹ್ಞೂ ಅಂತ ಹೇಳಿದ್ದರೆ, ನಾನು ಇಲ್ಲಿಯೇ ಹುಡುಗಿ ಹುಡುಕುವ ಪ್ಲ್ಯಾನ್ ಮಾಡ್ತೀನಿ,' ಎಂದು ಗಣೇಶ್ ಹೇಳಿದ್ದಾರೆ. ಅದಿಕ್ಕೆ ತರುಣ್ ಅವರ ತಾಯಿ ಮೂರು ಸಲ ಹ್ಞೂ ಹ್ಞೂ ಹ್ಞೂ ಎಂದು ಹೇಳಿದ್ದಾರೆ. ತಕ್ಷಣವೇ ತರುಣ್‌ಗೆ ಮದು ವಗನ ರೀತಿ ವಸ್ತ್ರ ಬದಲಾಯಿಸಿ ಕರೆದುಕೊಂಡು ಬರುತ್ತಾರೆ ಗಣೇಶ್. ಎರಡು ಪ್ರೋಮೋಗಳು ಹಾಸ್ಯಮಯವಾಗಿದ್ದು, ತಪ್ಪದೇ ಕಾರ್ಯಕ್ರಮ ನೋಡಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. 

ಪೂರ್ವ ಸ್ನೇಹಿತರ ಅನನ್ಯ ಸ್ನೇಹವನ್ನು ಸಂಭ್ರಮಿಸಲೆಂದೇ ಸಿದ್ಧಗೊಂಡಿರುವ ಈ ಶೋ ವೀಕ್ಷಕರ ಮನದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಬಹುದು ಎಂಬುವುದು ಕಿರುತೆರೆ ವೀಕ್ಷಕರ ನಿರೀಕ್ಷೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Follow Us:
Download App:
  • android
  • ios