Asianet Suvarna News Asianet Suvarna News

ಅಪ್ಪು ಸರ್​ ಸಾಯೋ ಎರಡು ದಿನ ಮುಂಚೆ ನನಗೆ ಮೆಸೇಜ್​ ಕಳಿಸಿದ್ರು... ನಟ ಪ್ರಥಮ್ ಹೇಳಿದ್ದೇನು?

ಪುನೀತ್​ ರಾಜ್​ಕುಮಾರ್​ ಅವರು ನಿಧನರಾದ ಎರಡು ದಿನಗಳ ಹಿಂದೆ ನಡೆದಿದ್ದೇನು? ಸಂದರ್ಶನದಲ್ಲಿ ನಟ ಪ್ರಥಮ್ ಮಾಹಿತಿ... ​
 

Actor Pratham about Puneeth Rajkumars voice message before his death to him suc
Author
First Published Aug 21, 2024, 11:11 AM IST | Last Updated Aug 21, 2024, 11:11 AM IST

ಪುನೀತ್‌ ರಾಜ್‌ಕುಮಾರ್‌ ಅವರು ಎಲ್ಲರನ್ನೂ ಅಗಲಿ ಎರಡೂವರೆ ವರ್ಷಗಳಾಗುತ್ತಾ ಬಂದರೂ ಅವರ ನೆನಪು ಸದಾ ಹಸಿರು. ಹಲವಾರು ನಟರು ಮಾತ್ರವಲ್ಲದೇ ಗಾಯಕರು, ನಿರ್ದೇಶಕರು ಸೇರಿದಂತೆ ಸಾಮಾನ್ಯ ಜನರನ್ನೂ ಅವರು ಹುರಿದುಂಬಿಸುತ್ತಿದ್ದ ರೀತಿಯೇ ಚೆಂದ. ಇದೇ ಕಾರಣಕ್ಕೆ ಅವರು ಎಲ್ಲರನ್ನೂ ಅಗಲಿದರೂ ಅವರ ನೆನಪನ್ನು ಸಿನಿ ಕ್ಷೇತ್ರದವರು ಸೇರಿದಂತೆ ಎಲ್ಲರೂ ಮಾಡುತ್ತಲೇ ಇರುತ್ತಾರೆ. ಇದೀಗ ಒಳ್ಳೆಹುಡುಗ ಎನ್ನುವ ಖ್ಯಾತಿ ಪಡೆದಿರುವ ಪ್ರಥಮ್​ ಅವರು ಅಪ್ಪು ಅವರ ನೆನಪು ಮಾಡಿಕೊಂಡಿದ್ದಾರೆ. ವಿನಯ್​ ಸನಾತನಿ ಷೋನಲ್ಲಿ (Vinaysanathanishow) ಪ್ರಥಮ್​ ಮಾತನಾಡಿದ್ದು, ಅಪ್ಪು ಅವರ ಕೊನೆ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 

ಅಂದು ಅಕ್ಟೋಬರ್​ 29. ರಾಘಣ್ಣ ಚಿತ್ರದ ವಿಷಯಕ್ಕೆ ಮಾತನಾಡಲು ನನ್ನನ್ನುಕರೆದಿದ್ದರು. ಪಕ್ಕದ ಕೋಣೆಯಲ್ಲಿಯೇ ಅಪ್ಪು ಸರ್​ ಇದ್ದರು. ರಾಘಣ್ಣ ಜೊತೆ ಮಾತನಾಡಿಕೊಂಡು ಹೊರಕ್ಕೆ ಬಂದಾಗ ಸೆಕ್ಯುರಿಟಿಯನ್ನು ಕೇಳಿದೆ. ಆಗ ಅವರು ಅಪ್ಪು ಸರ್​ ಶೂಟಿಂಗ್​ಗೆ ಹೋಗಿದ್ದಾರೆ ಎಂದರು. ಆದರೆ ಅವರು ಅಷ್ಟು ಬೇಗ ಶೂಟಿಂಗ್​ಗೆ ಹೋಗಲ್ಲ ಎಂದು ತಿಳಿದಿತ್ತು. ಎಲ್ಲೋ ಹೋಗಿಬೇಕು ಎಂದುಕೊಂಡೆ. ಇತ್ತ ಬರುತ್ತಿದ್ದಂತೆಯೇ ಟಿವಿಯಲ್ಲಿ ಬ್ರೇಕಿಂಗ್​ ನ್ಯೂಸ್​ ಬಂತು. ಪುನೀತ್​ ರಾಜ್​ಕುಮಾರ್​ ತೀವ್ರ ಅಸ್ವಸ್ಥ ಎಂದು. ಅದನ್ನು ನೋಡಿ ನನಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಇದು ಸುಳ್ಳು ಸುದ್ದಿ ಎಂದುಕೊಂಡೆ ಎಂದು ಆ ದಿನವನ್ನು ನೆನೆದಿದ್ದಾರೆ ಪ್ರಥಮ್​.

‍ಅಪ್ಪುನೇ ದೇವ್ರು ಅನ್ನೋದು ಯಾಕೆ ಅಂತ ಅವತ್ತೇ ಗೊತ್ತಾಗೋಯ್ತು.. ಪವಾಡ ಬಿಚ್ಚಿಟ್ಟ ಫುಡ್‌ ವ್ಲಾಗರ್‌

ಸಾಮಾನ್ಯವಾಗಿ ನಟರು ಚಿಕ್ಕಪುಟ್ಟ ಸಮಸ್ಯೆ ಆದ್ರೆ ಆಸ್ಪತ್ರೆಗೆ ಹೋಗಲ್ಲ. ಅಪ್ಪು ಅವರಿಗೂ ಏನೋ ಶೂಟಿಂಗ್​ ಮಾಡುವಾಗ ಚಿಕ್ಕಪುಟ್ಟ ಟ್ವಿಸ್ಟ್​ ಆಗಿರಬೇಕು, ಆದರೆ ಅದನ್ನೇ ತೀವ್ರ ಅಸ್ವಸ್ಥ ಎಂದು ತೋರಿಸುತ್ತಿದ್ದಾರೆ ಎಂದು ಕೋಪ ಬಂತು. ಆದರೆ ಅಷ್ಟರಲ್ಲಿಯೇ ಇನ್ನೊಂದು ಬ್ರೇಕಿಂಗ್​ ಬಂತು. ಅಪ್ಪು ಅವರನ್ನು ಸೇರಿಸಿರುವ ಆಸ್ಪತ್ರೆಯ ಏರಿಯಾವನ್ನು ಡಿಸಿಪಿ ಕಂಟ್ರೋಲ್​ಗೆ ತೆಗೆದುಕೊಳ್ತಿದ್ದಾರೆ, ಟ್ರಾಫಿಕ್​ ಸರಿ ಮಾಡುತ್ತಿದ್ದಾರೆ ಎಂದು. ಇದನ್ನು ಕೇಳಿ ಶಾಕ್​ ಆಗಿಹೋಯ್ತು. ಏನಾಗ್ತಿದೆ ಎಂದು ತಿಳಿಯಲಿಲ್ಲ. ಅಷ್ಟೊತ್ತಿಗಾಗಲೇ ಇನ್ನು ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಗಳು ಅಧಿಕೃತ ಘೋಷಣೆ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿದಾಗ... ಎನ್ನುತ್ತಲೇ ಪ್ರಥಮ ಭಾವುಕರಾದರು.

ಇದೇ ವೇಳೆ, ತಮಗೆ ಎರಡು ದಿನ ಮುಂಚೆಯಷ್ಟೇ ಅಪ್ಪು ಸರ್​ ಒಂದು  ಆಡಿಯೋ ಮೆಸೇಜ್​ ಕಳಿಸಿದ್ದರು ಎಂದರು. ಅದರಲ್ಲಿ ಕಿವಿಮಾತು ಹೇಳಿದ್ದಾರೆ. ಹಾಗಂತ ನಾನು ಅದನ್ನು ಮಾರ್ಕೆಟಿಂಗ್​ ಮಾಡುವುದಿಲ್ಲ. ಅಪ್ಪು ಸರ್​ ನನ್ನ ಚಿತ್ರಗಳ ಬಗ್ಗೆ ಶ್ಲಾಘಿಸಿದ್ದರೆ ಬೇಕಿದ್ದರೆ ಅದನ್ನು ಜನರಿಗೆ ತೋರಿಸುತ್ತೇನೆ. ಅದರೆ ವೈಯಕ್ತಿಕವಾಗಿ ಕಳುಹಿಸಿದ ಮೆಸೇಜ್​ ಮಾರ್ಕೆಟಿಂಗ್​ ಮಾಡುವುದು ನನಗೆ ಸರಿಕಾಣಿಸುವುದಿಲ್ಲ. ಹೀಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಅವರು ಕಳುಹಿಸಿರುವ ಈ ಆಡಿಯೋ ಮೆಸೇಜ್​ ನನ್ನಲ್ಲೇ ಇರುತ್ತದೆ, ನನ್ನ ಜೊತೆಯೇ ಸಾಯುತ್ತದೆ. ಸಾವಿನ ಮಾರ್ಕೆಟ್​ ನಾನು ಮಾಡುವುದಿಲ್ಲ. ಸಾವನ್ನು ಬಿಜಿನೆಸ್​ ಮಾಡಿಕೊಳ್ಳುವುದು ಸರಿಯಲ್ಲ. ಇದೇ ಆಡಿಯೋ ಇಟ್ಟುಕೊಂಡು ಅಪ್ಪು ಸರ್​ ನನ್ನ ಆಪ್ತರು ಹಾಗೆ ಹೀಗೆ ಹೇಳಿ ಅದನ್ನು ಬಿಜಿನೆಸ್​ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.  

ಸುಧಾರಾಣಿ ಅಣ್ಣ ನಾಗರಹಾವು ಸಾಕಿದ್ರಂತೆ! ತೆಂಗಿನಚಿಪ್ಪಲ್ಲಿ ಹಾಲು ಕುಡೀತಿದ್ದ ಅಚ್ಚರಿ ವಿಷ್ಯ ರಿವೀಲ್​

 

Latest Videos
Follow Us:
Download App:
  • android
  • ios