ನನ್ನ ಯೋಗ್ಯತೆ ಇವಾಗ ಗೊತ್ತಾಗಲಿ; ರಂಗಿತರಂಗ ಚಿತ್ರಕ್ಕೆ ಬಂದ ಸಂಭಾವನೆ ಹಿಂದಿನ ಸತ್ಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ!
ಕೇವಲ ಎರಡು ದಿನಕ್ಕೆ 20 ಸಾವಿರಿ ಡಿಮ್ಯಾಂಡ್ ಮಾಡಿದ ಪ್ರಮೋದ್ ಶೆಟ್ಟಿ. ರಂಗಿತರಂಗದಲ್ಲಿ ಪ್ರಕಾಶ್ ರೈ ಸ್ಥಾನ ತುಂಬಿಸಿದ ಪ್ರಮೋದ್....
ಸ್ಯಾಂಡಲ್‌ವುಡ್‌ನ ರೂಲಿಂಗ್ ಸ್ಟಾರ್‌ಗಳು ಅಂದ್ರೆ ಶೆಟ್ಟಿ ಗ್ಯಾಂಗ್. ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ...ಈ ಶೆಟ್ಟಿ ಗ್ಯಾಂಗ್ ಯಾವ ಸಿನಿಮಾ ಮಾಡಿದ್ದರೂ ಸೂಪರ್ ಹಿಟ್ ಅಷ್ಟೇ ಯಾಕೆ ಮತ್ತೊಬ್ಬರ ಚಿತ್ರದಲ್ಲಿ ಸಣ್ಣ ಪುಟ್ಟ ಪಾತ್ರ ಮಾಡಿದ್ದರೂ ಸೂಪರ್ ಹಿಟ್ ಅನ್ನೋ ಮಾತುಗಳು ಇದೆ. 2015ರಲ್ಲಿ ತೆರೆಕಂಡ ರಂಗಿತರಂಗ ಚಿತ್ರದಲ್ಲಿ ಪ್ರಮೋದ್ ನಟಿಸಿದ್ದಾರೆ...ಕಥೆ ಮತ್ತು ಹಾಡು ಸೂಪರ್ ಹಿಟ್ ಆಗಿ ಸಿನಿಮಾ 1 ಕೋಟಿಗೂ ಹೆಚ್ಚು ಗಳಿಸಿತ್ತು. ಈ ಚಿತ್ರದಲ್ಲಿ ಪ್ರಮೋದ್ ಮರೆಯಲಾಗದ ಘಟನೆಯನ್ನು ಹಂಚಿಕೊಂಡಿದ್ದಾರೆ.
'ರಂಗಿತರಂಗ ಸಿನಿಮಾದ ಆಫರ್ ಬಂದಾಗ ಆದ ಘಟನೆ ಹೇಳಲು ಇಷ್ಟ ಪಡುತ್ತೀನಿ. ರಂಗಿತರಂಗ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿತ್ತು ಆದರೆ ಒಂದು ಸಾಂಗ್ ಮತ್ತು ಒಂದು ಸೀನ್ ಚಿತ್ರೀಕರಣ ಉಳಿಸಿಕೊಂಡಿದ್ದರು. ಆ ಸೀನ್‌ನಲ್ಲಿ ನಾನು ಆಕ್ಟ್ ಮಾಡಬೇಕಿತ್ತು. ಯಾಕೆ ಆ ಸೀನ್ ಉಳಿಸಿಕೊಂಡಿದ್ದರು ಅಂದ್ರೆ ನಟ ಪ್ರಕಾಶ್ ರೈ ಆ ಪಾತ್ರ ಮಾಡಬೇಕಿತ್ತು ಆದರೆ ನನ್ನನ್ನು ಕರೆದು ಆಫರ್ ಕೊಟ್ಟರು. ಆಗ ನಾನು ಮಾಡಿದಿದ್ದು ಕೇವಲ ಉಳಿದವರು ಕಂಡಂತೆ ಸಿನಿಮಾ ಅಷ್ಟೇ. ಚಿತ್ರದ ಕಥೆ ಕೇಳಿದೆ ಆಮೇಲೆ ನನ್ನ ಪಾತ್ರದ ಬಗ್ಗೆ ಕೇಳಿದೆ ಅದಾದ ಮೇಲೆ ಸಂಭಾವನೆಯ ವಿಚಾರ ಬಂತು..ದಿನಕ್ಕೆ 10 ಸಾವಿರ ಬೇಕು ಎಂದು ಕೇಳಿದೆ ...ಆಗಲ್ಲ ಆಗಲ್ಲ ಜಾಸ್ತಿ ಆಯ್ತು ಅಂತ ಹೇಳಿದರು. ಒಂದು ನಿಮಿಷ ಕೊಡಿ ಸರ್ ನಾನು ನಿರೂಪ್ ಅವರ ತಂದೆ ಪ್ರೊಡಕ್ಷನ್ ಹ್ಯಾಂಡಲ್ ಮಾಡುತ್ತಿದ್ದರು ಅವರೊಟ್ಟಿಗೆ ಮಾತನಾಡಿ ಬರುತ್ತೀನಿ ಎಂದು ಹೇಳಿದೆ. ಚಿತ್ರಕ್ಕೆ ಬಜೆಟ್ ಸಮಸ್ಯೆ ಇದೆ ಅಲ್ಲದೆ ಪ್ರಕಾಶ್ ಮತ್ತು ನಿರೂಪ್ ತಂದೆ ಬಹಳ ಒಳ್ಳೆಯ ಸ್ನೇಹಿತರು ಆಗಿದ್ದ ಕಾರಣ ಫ್ರೀ ಆಗಿ ಸಿನಿಮಾ ಮಾಡಲು ಒಪ್ಪಿಕೊಂಡರು ಆದರೆ ಪ್ರಕಾಶ್ ಸರ್ ಜೊತೆಗಿರುವ ಸ್ಟಾಫ್‌ಗಳಿಗೆ ಆದರೂ ಸಂಭಾವನೆ ಕೊಡಬೇಕು ಹೀಗಾಗಿ ಕರೆಸಲು ಆಗಲಿಲ್ಲ ಅಂದ್ರು' ಎಂದು ರ್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಮೋದ್ ಶೆಟ್ಟಿ ಮಾತನಾಡಿದ್ದಾರೆ.
ನಖಲಿ ಮುಖವಿದ್ದರೆ ಹೆದರಬೇಕು ಎಂದು ರಚಿತಾ ರಾಮ್ ತಿರುಗೇಟು; ಇದು ರಮ್ಯಾಗಾ ದರ್ಶನ್‌ಗಾ ಎಂದು ನೆಟ್ಟಿಗರು ಕನ್ಫ್ಯೂಸ್!
'ಪ್ರಕಾಶ್ ರೈ ರೀತಿ ಸಾಮರ್ಥ್ಯ ಹೊಂದಿರುವ ಕಾರಣ ನಿಮ್ಮನ್ನು ಕರೆಸಿದ್ದೀನಿ ಎಂದು ಹೇಳಿಬಿಟ್ಟರು ಆಗ ತುಂಬಾ ಖುಷಿ ಆಯ್ತು ಅಯ್ಯೋ ಪ್ರಕಾಶ್ ರೈಗೆ ನನ್ನನ್ನು ಹೊಲಿಸುತ್ತಿದ್ದೀನಿ ಎನ್ನುವ ಖುಷಿಯಲ್ಲಿ ನಾನು ಇದ್ದೆ. ಅವರ ತಂದೆ ಅಡ್ವಾನ್ಸ್ ಕೊಡಲು ಬಂದರು..ಪ್ರಮೋದ್ ಕೊಂಚ ಬಜೆಟ್ ಸಮಸ್ಯೆ ಇದೆ ನೀವು ಇಷ್ಟಕ್ಕೆ ಒಪ್ಪಿಕೊಳ್ಳಿ ಅಂದರು....ಆಗ ನಾನು ಎರಡು ದಿನ ಶೂಟಿಂಗ್ ಮಾಡಿ ಮುಗಿಸುತ್ತೀನಿ ನಿಮಗೆ ನನ್ನ ಆಕ್ಟಿಂಗ್ ಇಷ್ಟ ಆದ್ರೆ ಸಂಭಾವನೆ ಕೊಡಿ ಎಂದು ಹೇಳಿದೆ. ಎರಡು ದಿನ ಚಿತ್ರೀಕರಣ ಮುಗಿಸಿದ ಮೇಲೆ ಕೈಗೆ ಒಂದು ಕವರ್ ಕೊಟ್ಟರು....ನಾನು ಕೇಳಿದ್ದು 20 ಸಾವಿರ ರೂಪಾಯಿ ಆದರೆ ಬಜೆಟ್ ಸಮಸ್ಯೆ ಇದ್ದ ಕಾರಣ 10 ಸಾವಿರ ಕೊಟ್ಟಿರುತ್ತಾರೆ ಅಂದುಕೊಂಡು ಸುಮ್ಮನಾದೆ ಅಲ್ಲಿ ಓಪನ್ ಮಾಡಲಿಲ್ಲ. ಮನೆಗೆ ಹೋಗಿ ಓಪನ್ ಮಾಡಿ ನೋಡಿದರೆ 20 ಸಾವಿರ ರೂಪಾಯಿ ಇತ್ತು. ಆಗ ಕವರ್ ಓಪನ್ ಮಾಡಿ ನೋಡುವಾಗ ಮನಸ್ಸಿನಲ್ಲಿ ಅನಿಸಿತ್ತು.....ನಾನು ಆಕ್ಟಿಂಗ್ ಚೆನ್ನಾಗಿ ಮಾಡಿದ್ದರೆ ನನ್ನ ಯೋಗ್ಯತೆಗೆ ತಕ್ಕ ಹಾಗೆ ಕೊಡುತ್ತಾರೆ ಎಂದು ಖುಷಿ ಪಟ್ಟೆ' ಎಂದು ಪ್ರಮೋದ್ ಶೆಟ್ಟಿ ಹೇಳಿದ್ದಾರೆ.
ರಸ್ತೆ ಅಪಘಾತದಲ್ಲಿ 'ಕನ್ನಡತಿ' ನಟ ಕಿರಣ್ ರಾಜ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು