Asianet Suvarna News Asianet Suvarna News

ನಖಲಿ ಮುಖವಿದ್ದರೆ ಹೆದರಬೇಕು ಎಂದು ರಚಿತಾ ರಾಮ್‌ ತಿರುಗೇಟು; ಇದು ರಮ್ಯಾಗಾ ದರ್ಶನ್‌ಗಾ ಎಂದು ನೆಟ್ಟಿಗರು ಕನ್ಫ್ಯೂಸ್!

ಗೊಂದಲ ಸೃಷ್ಟಿಸಿದೆ ನಟಿ ರಚಿತಾ ರಾಮ್‌ ಇನ್‌ಸ್ಟಾಗ್ರಾಂ ಸ್ಟೋರಿ. ಇದು ಯಾರು ಯಾರಿಗೆ ಯಾವುದಕ್ಕೆ ಹೇಳುತ್ತಿದ್ದಾರೆ ಅನ್ನೋದು ನೆಟ್ಟಿಗರ ಗೊಂದಲ.....
 

Real people just dont care says rachitha ram on her instagram post vcs
Author
First Published Sep 11, 2024, 9:35 AM IST | Last Updated Sep 11, 2024, 9:35 AM IST

ಕನ್ನಡ ಚಿತ್ರರಂಗದ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿನಿಮಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು. ಹೀಗಾಗಿ ಅಭಿಮಾನಿಗಳನ್ನು ಭೇಟಿ ಮಾಡುವುದು ಅಪರೂಪವಾಗಿತ್ತು ಅಷ್ಟೇ ಅಲ್ಲ ಸೋಷಿಯಲ್ ಮೀಡಿಯಾದಿಂದ ದೂರ ಉಳಿದುಬಿಟ್ಟರು. ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೋಸ್ಟ್‌ ಹಾಕಿದ ಮೇಲೆ ರಚಿತಾ ರಾಮ್ ಯಾವ ಅಪ್ಡೇಟ್‌ ಕೂಡ ನೀಡಿಲ್ಲ. ಇದೀಗ ಹಾಕಿರುವ ಸ್ಟೋರಿ ಗೊಂದ ಸೃಷ್ಟಿಸಿದೆ.

'Fake people have an image to maintain. Real people just dont care' ಎಂದು ರಚಿತಾ ರಾಮ್ ಪೋಸ್ಟ್ ಹಾಕಿದ್ದಾರೆ. ಇದರ ಅರ್ಥ ಏನೆಂದರೆ ನಖಲಿ ಮುಖ ಇದ್ದವರು ಮಾತ್ರ ಬಣ್ಣ ಬಯಲಾಗದಂತೆ ನೋಡಿಕೊಳ್ಳಬೇಕು ಆದರೆ ಅಸಲಿ ಮುಖ ಹೊತ್ತು ಜೀವನ ಮಾಡುತ್ತಿರುವವರು ಯಾವುದಕ್ಕೂ ಕೇರ್ ಮಾಡುವುದಿಲ್ಲ ಎಂದಿದ್ದಾರೆ ರಚಿತಾ ರಾಮ್. ಇದರ ಕೆಳಗೆ ಪೀಸ್‌ ಸಿಂಬರ್ ಪ್ರತಿನಿಧಿಸುವ ಎಮೋಜಿಯನ್ನು ರಚ್ಚು ಹಾಕಿದ್ದಾರೆ. ಈ ಪೋಸ್ಟ್‌ ನಾನಾ ರೀತಿಯಲ್ಲಿ ಅರ್ಥ ಕೊಡುತ್ತದೆ ಹೀಗಾಗಿ ಜನರಲ್ಲಿ ಗೊಂದಲ ಸೃಷ್ಟಿಯಾಗಿದೆ.

ರಸ್ತೆ ಅಪಘಾತದಲ್ಲಿ 'ಕನ್ನಡತಿ' ನಟ ಕಿರಣ್ ರಾಜ್‌ಗೆ ಗಂಭೀರ ಗಾಯ; ಆಸ್ಪತ್ರೆಗೆ ದಾಖಲು

ರಚ್ಚು ತಿರುಗೇಟು:

ನಟ ದರ್ಶನ್ ಮತ್ತು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೋಸ್ಟ್ ಹಾಕಿದ ನಂತರ ರಚಿತಾ ರಾಮ್ ಈ ಪೋಸ್ಟ್‌ ಹಾಕಿರುವುದು. ತಮ್ಮನ್ನು ಲಾಂಚ್ ಮಾಡಿದ ತೂಗುದೀಪ ಬ್ಯಾನರ್ ಮಾಲೀಕ ದರ್ಶನ್‌ ಅವರ ಪರಿಸ್ಥಿತಿ ಹೀಗಿದ್ದರೂ ರಚಿತಾ ರಾಮ್ ಹೊಸ ಚಿತ್ರದ ಮುಹೂರ್ತದಲ್ಲಿ ಕಾಣಿಸಿಕೊಂಡಿದ್ದಾರೆ, ಅದು ಜಮೀರ್ ಪುತ್ರ ಝೈದ್ ಖಾನ್‌ ಜೊತೆ ದೊಡ್ಡ ಬಜೆಟ್ ಸಿನಿಮಾ ಶುರು ಮಾಡುತ್ತಿರುವುದಕ್ಕೆ ಬೇಸರ ಆಗುತ್ತಿಲ್ಲವೇ? ದಾಸ ಕಷ್ಟದಲ್ಲಿ ಇದ್ದರೆ ನಿಮ್ಮ ದುಡಿಮೆ ನೋಡಿಕೊಳ್ಳುತ್ತಿದ್ದೀರಾ ಎಂದು ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ರಚ್ಚು ಉತ್ತರ ಕೊಟ್ಟಿದ್ದಾರೆ ಎನ್ನಬಹುದು. 

ಅಥವಾ ನಾಲ್ಕು ಸಾವಿರ ಪುಟಗಳ ಚಾರ್ಚ್‌ ಶೀಟ್ ಸಲ್ಲಿಗೆ ಆದ ಮೇಲೆ ದರ್ಶನ್ ಮತ್ತು ಕುಟುಂಬದ ಮೇಲೆ ಏನೇನೋ ಆರೋಪಗಳು ಕೇಳಿ ಬರುತ್ತಿದೆ. ಹೀಗಾಗಿ ದರ್ಶನ್ ಫೇಕ್ ಅಲ್ಲ ರಿಯಲ್ ಅನ್ನೋ ಅರ್ಥದಲ್ಲಿ ಪೋಸ್ಟ್ ಮಾಡಿರಬಹುದು ಅನ್ನೋ ಒಂದು ಗೆಸ್ ಮಾಡಿದ್ದಾರೆ ನೆಟ್ಟಿಗರು. 

ಕಿರುತೆರೆ ನಟಿ ಕವಿತಾ ಗೌಡ ಹೊಸ ಪೋಟೋಶೂಟ್; ಪುಟ್ಟ ಗಣೇಶ್ ಬರ್ತಿದ್ದಾನೆ ಅಂತ ಸೂಚನೆ ಕೊಟ್ರಾ?

ರಮ್ಯಾಗೆ ಟಾಂಗ್ ಯಾಕೆ?

ಮೋಹಕ ತಾರೆ ರಮ್ಯಾ ನಟನೆ ಮತ್ತು ಸಿನಿ ಜರ್ನಿಯನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳುವ ರಚಿತಾ ರಾಮ್ ಇತ್ತೀಚಿಗೆ ಹರಿದಾಡುತ್ತಿರುವ ಗಾಸಿಪ್‌ನಿಂದಾಗಿ ಈ ರೀತಿ ಪೋಸ್ಟ್ ಹಾಕಿದ್ರಾ? ಏಕೆಂದರೆ ದರ್ಶನ್ ಮಾಡಿದ್ದು ದೊಡ್ಡ ತಪ್ಪು ಎಂದು ಮೊದಲು ಧ್ವನಿ ಎತ್ತಿದ ನಟಿ ರಮ್ಯಾ ಆನಂತರ ಅನೇಕರು ತಮ್ಮ ಅಭಿಪ್ರಾಯವನ್ನು ನೀಡಿದ್ದರು. ಈಗ ರಮ್ಯಾ ನಿಶ್ಚಿತಾರ್ಥದ ವಿಚಾರ ದೊಡ್ಡ ಗಾಸಿಪ್ ಆಗಿಬಿಟ್ಟಿದೆ ಹೀಗಾಗಿ ಇದು ರಮ್ಯಾಗೆ ಕೊಟ್ಟ ಟಾಂಗ್ ಇರಬೇಕು ಎಂದು ನೆಟ್ಟಿಗರು ಎರಡು ಗೆಸ್ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios