ಸ್ವಾತಂತ್ರ್ಯ ಸಿಕ್ಕಿದ್ದೇ 2014ರಲ್ಲಿ, ತಾಳ್ಮೆಯಿರಲಿ ಎಂದ ಪ್ರಕಾಶ್ ರಾಜ್: ಇಷ್ಟೆಲ್ಲಾ ಹತಾಶೆ ಒಳ್ಳೆದಲ್ಲ ಎಂದ ಕಂಗನಾ ಫ್ಯಾನ್ಸ್
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು 2014ರಲ್ಲಿ, ಸ್ವಲ್ಪ ತಾಳ್ಮೆಯಿರಲಿ ಎಂದು ಕಂಗನಾಗೆ ಪ್ರಕಾಶ್ ರಾಜ್ ಟಾಂಗ್. ನಟನ ವಿರುದ್ಧ ತಿರುಗಿಬಿದ್ದ ಕಂಗನಾ ಫ್ಯಾನ್ಸ್ ಹೇಳಿದ್ದೇನು?
ಇತ್ತೀಚೆಗೆ ಕಾಂಟ್ರವರ್ಸಿ ವಿಷಯಗಳಿಂದಲೇ ಬಹಳ ಚರ್ಚೆಯಲ್ಲಿರುವ ನಟರ ಪೈಕಿ ಬಾಲಿವುಡ್ನ ಕಂಗನಾ ರಣಾವತ್ ಒಬ್ಬರಾದರೆ, ಸ್ಯಾಂಡಲ್ವುಡ್ ನಟ ಪ್ರಕಾಶ್ ರಾಜ್ ಇನ್ನೊಬ್ಬರು. ಇವರಿಬ್ಬರು ಸದ್ಯ ಏನೇ ಮಾತನಾಡಿದರೂ ಅದು ಸುದ್ದಿಯಾಗುತ್ತಿದೆ. ಬಿಜೆಪಿ, ಪ್ರಧಾನಿ ಪರವಾಗಿ ಏನೇ ಮಾತನಾಡಿದರೂ ಪ್ರಕಾಶ್ ರಾಜ್ ಕಾಲು ಕೆರೆದು ಜಗಳಕ್ಕೆ ಬಂದರೆ, ಕಂಗನಾ ಬಿಜೆಪಿ ಜೊತೆಗೆ ಗುರುತಿಸಿಕೊಂಡವರು. ಇದೀಗ ನಟಿ ಮಾಡಿಕೊಂಡ ಮನವಿಯೊಂದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯದ ರೂಪದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ ಪ್ರಕಾಶ್ ರಾಜ್. ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿಯೇ ಹೋಗಿ ನೋಡುವಂತೆ ನಟಿ ಕಂಗನಾ ಪ್ರೇಕ್ಷಕರಿಗೆ ಮನವಿ ಮಾಡಿಕೊಂಡಿದ್ದರೆ, ಅದರಲ್ಲಿಯೂ ರಾಜಕೀಯ ಎಳೆದು ತಂದು ನಟಿಗೆ ಟಾಂಗ್ ಕೊಟ್ಟಿದ್ದಾರೆ ಪ್ರಕಾಶ್ ರಾಜ್. ಇದರಿಂದ ಕಂಗನಾ ಫ್ಯಾನ್ಸ್ ಗರಂ ಆಗಿದ್ದು, ನಿಮಗೆ ಸಂಬಂಧ ಇಲ್ದೇ ಇರೋ ವಿಷ್ಯಗಳಿಗೂ ಮೂಗು ತೂರಿಸೋದು ಏಕೆ ಎಂದು ಪ್ರಶ್ನಿಸುತ್ತಿದ್ದಾರೆ. ನಿಮ್ಮ ಹತಾಶಾ ಮನೋಭಾವ ಎಷ್ಟಿದೆ ಎನ್ನುವುದು ಇದರಿಂದಲೇ ತಿಳಿಯುತ್ತದೆ. 2024ರಲ್ಲಿ ಉತ್ತರ ಸಿಗಲಿದೆ ಎಂದಿದ್ದಾರೆ.
ಅಷ್ಟಕ್ಕೂ ಆಗಿರುವುದು ಏನೆಂದರೆ, ನಟಿ ಕಂಗನಾ ಅವರ ತೇಜಸ್ ಚಿತ್ರ ಮೊನ್ನೆ ಶುಕ್ರವಾರ ರಿಲೀಸ್ ಆಗಿದೆ. ಈ ಚಿತ್ರ ಬಿಡುಗಡೆಯಾಗುತ್ತಿದ್ದಂತೆಯೇ ನಟಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿದ್ದು, ಕೋವಿಡ್ ನಂತರ ಚಿತ್ರರಂಗದ ಸ್ಥಿತಿ ಕೂಡ ಚೆನ್ನಾಗಿಲ್ಲ. ಆದ್ದರಿಂದ ಎಲ್ಲರೂ ಥಿಯೇಟರ್ಗೇ ಹೋಗಿ ಚಿತ್ರಗಳನ್ನು ನೋಡುವಂತೆ ಮನವಿ ಮಾಡಿದ್ದಾರೆ. ಆದರೆ ನಟಿಯ ಈ ಮನವಿಗೆ ರಾಜಕೀಯ ಎಳೆದು ತಂದಿರುವ ನಟ ಪ್ರಕಾಶ್ ರಾಜ್, ಭಾರತಕ್ಕೆ ಸ್ವಾತಂತ್ರ್ಯ ಬಂದಿರುವುದು 2014ರಲ್ಲಿ, ಸ್ವಲ್ಪ ತಾಳ್ಮೆಯಿರಲಿ. ಚಿತ್ರರಂಗ ಪಿಕಪ್ ಆಗುತ್ತದೆ ಎಂದು ಟಾಂಗ್ ನೀಡಿದ್ದಾರೆ. ಅಷ್ಟಕ್ಕೂ ಅವರು ಹೀಗೆ ಹೇಳಲು ಕಾರಣವೇನೆಂದರೆ, ಕಾಂಗ್ರೆಸ್ ಸೋತು ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿಯವರು ಪ್ರಧಾನಿಯಾದ ವರ್ಷ 2014 ಅನ್ನು ಗಮನದಲ್ಲಿ ಇಟ್ಟುಕೊಂಡು ನಟಿ ಕಂಗನಾ ಹಿಂದೊಮ್ಮೆ, ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು 2014ರಲ್ಲಿ. 1947ರಲ್ಲಿ ಸ್ವಾತಂತ್ರ್ಯ ಸಿಕ್ಕಿದ್ದು ಭಿಕ್ಷೆ ಎಂದು ಹೇಳಿದ್ದರು. ಇದರಿಂದ ಈಕೆಯ ವಿರುದ್ಧ ದೂರು ಕೂಡ ದಾಖಲಾಗಿತ್ತು. ಒಂದು ವರ್ಷ ಕಂಗನಾ ವಿರುದ್ಧ ಕಿಡಿ ಕಾರಿದ್ದರೆ, ಮತ್ತೊಂದಿಷ್ಟು ಮಂದಿ ನಟಿ ಪರವಾಗಿ ನಿಂತಿದ್ದರು.
ಕಂಗನಾ ದೀದಿ ಕೈಮುಗಿತೇನೆ, ನಿಮ್ಮ ಚಿತ್ರಗಳನ್ನು ಥಿಯೇಟರ್ನಲ್ಲಿ ಬಿಡುಗಡೆ ಮಾಡ್ಬೇಡಿ ಎಂದ ಕೆಆರ್ಕೆ!
ಇದೀಗ ಇದನ್ನೇ ತಲೆಯಲ್ಲಿಟ್ಟುಕೊಂಡಿರುವ ಪ್ರಕಾಶ್ ರಾಜ್ ಅವರು, ಬಾಲಿವುಡ್ ಇಂಡಸ್ಟ್ರಿ ಸುಧಾರಿಸಲು ಪ್ರೇಕ್ಷಕರನ್ನು ಮನವಿ ಮಾಡಿಕೊಂಡ ನಟಿಗೆ ಈ ರೀತಿ ಟಾಂಗ್ ನೀಡಿದ್ದಾರೆ. ಅದೇ ಇನ್ನೊಂದೆಡೆ ನಟಿಯ ಚಿತ್ರ ಮೊನ್ನೆ ಶುಕ್ರವಾರ ಬಿಡುಗಡೆಯಾಗಿದ್ದು, ಸಿನಿಮಾ ಬಿಡುಗಡೆಯಾದ ಮೊದಲ ದಿನ 1.25 ಕೋಟಿ ಕಲೆಕ್ಷನ್ ಮಾಡಿದೆ. ಎರಡನೇ ದಿನವೂ ಅಷ್ಟೇ ಕಲೆಕ್ಷನ್ ಮಾಡಿದ್ದು, ಒಟ್ಟು 2.5 ಕೋಟಿ ರೂಪಾಯಿ ಗಳಿಸಿದೆ. ಈ ಚಿತ್ರವನ್ನೂ ಗಮನದಲ್ಲಿಟ್ಟುಕೊಂಡ ನಟಿ ವಿಡಿಯೋ ಮೂಲಕ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನನ್ನ ತೇಜಸ್ ಚಿತ್ರ ನಿನ್ನೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದೆ. ಈ ಚಿತ್ರವನ್ನು ನೋಡಿದವರು ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಆಶೀರ್ವಾದಿಸಿದ್ದಾರೆ. ಆದರೆ ಸ್ನೇಹಿತರೇ, ಕೋವಿಡ್ 19 ರ ನಂತರ, ನಮ್ಮ ಹಿಂದಿ ಚಲನಚಿತ್ರೋದ್ಯಮವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಶೇಕಡಾ 99ರಷ್ಟು ಚಿತ್ರಗಳಿಗೆ ಪ್ರೇಕ್ಷಕರು ಆ ಅವಕಾಶವನ್ನೇ ನೀಡುವುದಿಲ್ಲ. ಇಂದಿನ ಯುಗದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಮೊಬೈಲ್, ಟಿವಿ ಇರುವುದು ನನಗೆ ಗೊತ್ತು. ಆದರೆ ಚಿತ್ರಮಂದಿರಗಳಲ್ಲಿ ಒಟ್ಟಿಗೆ ಸಿನಿಮಾ ವೀಕ್ಷಿಸುವುದು, ನೃತ್ಯ, ಜಾನಪದ ಕಲೆಗಳು, ಕುಣಿತ ಮೊದಲಿನಿಂದಲೂ ನಮ್ಮ ನಾಗರಿಕತೆಯ ಪ್ರಮುಖ ಭಾಗವಾಗಿರುವುದರಿಂದ ಇವೆಲ್ಲವೂ ಅತ್ಯಗತ್ಯ ಎಂದಿದ್ದಾರೆ.
ಹಾಗಾಗಿ, ಹಿಂದಿ ಚಿತ್ರ ಪ್ರೇಕ್ಷಕರಿಗೆ ಮತ್ತು ವಿಶೇಷವಾಗಿ ಮಲ್ಟಿಪ್ಲೆಕ್ಸ್‌ನವರಿಗೆ ನನ್ನ ವಿನಂತಿ ಏನಂದರೆ, ನಿಮಗೆ ಉರಿ, ಮೇರಿ ಕೋಮ್ ಮತ್ತು ನೀರ್ಜಾ ಸಿನಿಮಾಗಳು ಇಷ್ಟವಾಗಿದ್ದರೆ, ತೇಜಸ್ ಸಿನಿಮಾವನ್ನು ಸಹ ನೀವು ಇಷ್ಟಪಡುತ್ತೀರಿ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರು ಇದನ್ನುಹೇಗೆ ಸ್ವೀಕರಿಸುತ್ತಾರೋ ಕಾದು ನೋಡಬೇಕಿದೆ.
ಮದ್ವೆ ಕುರಿತು ಕೊನೆಗೂ ಮೌನ ಮುರಿದ ನಟಿ ಕಂಗನಾ- ಬ್ರೇಕಪ್ ಸ್ಟೋರಿಯನ್ನೂ ವಿವರಿಸಿದ ನಟಿ