ಹೈದರಾಬಾದ್ ಥಿಯೇಟರ್‌ನಲ್ಲಿ ಕಿರುತೆರೆ ನಟನಿಗೆ ಕಪ್ಪಾಳಮೋಕ್ಷ; ನಿಜಕ್ಕೂ ಆಗಿದ್ದು ಏನೆಂದು ವಿವರಿಸಿದಿ ರಾಮಸ್ವಾಮಿ!
ಮಹಿಳಾ ಅಭಿಮಾನಿಯ ವರ್ತನೆಗೆ ಶಾಕ್ ಆದ ಎನ್‌ಟಿ ರಾಮಸ್ವಾಮಿ.....ಕೊನೆ ದೃಷ್ಯ ನೋಡಿ ಎಲ್ಲರೂ ಶಾಕ್....
ತೆಲುಗು ಮತ್ತು ಕನ್ನಡ ಭಾಷೆಯಲ್ಲಿ ಲವ್ ರೆಡ್ಡಿ ಸಿನಿಮಾ ಬಿಡುಗಡೆಯಾಗಿದೆ. ನೈಜ ಘಟನೆಯನ್ನು ಪ್ರೇಕ್ಷಕರ ಮುಂದೆ ತಂದಿಡುವ ಪ್ರಯತ್ನವನ್ನು ನಿರ್ಮಾಪಕರು ಮತ್ತು ನಿರ್ದೇಶಕರು ಅದ್ಭುತವಾಗಿ ಮಾಡಿದ್ದಾರೆ. ಈ ಚಿತ್ರದಲ್ಲಿ ಕನ್ನಡ ಕಿರುತೆರೆ ನಟ ಎನ್‌ಟಿ ರಾಮಸ್ವಾಮಿ ಅಭಿನಯಿಸಿದ್ದಾರೆ. ತಂದೆ ಪಾತ್ರದಲ್ಲಿ ಮಿಂಚಿರುವ ರಾಮಸ್ವಾಮಿ ಕೊನೆ ಕೊನೆಯಲ್ಲಿ ಖಡಕ್ ವಿಲನ್ ಆಗಿಬಿಟ್ಟಿದ್ದರೆ. ಈ ಕ್ಲೈಮ್ಯಾಕ್ಸ್ ದೃಶ್ಯವನ್ನು ನೋಡಿ ಮಹಿಳೆ ಆಕ್ರೋಶ ವ್ಯಕ್ತ ಪಡಿಸಿದ್ದಾಳೆ.
'ಲವ್ ರೆಡ್ಡಿ ಅನ್ನೋ ಸಿನಿಮಾ ತೆಲುಗು ಮತ್ತು ತಮಿಳು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ಆಂಧ್ರ ಮತ್ತು ಕರ್ನಾಟಕ ಬಾರ್ಡರ್‌ನಲ್ಲಿ ನಡೆದಿರುವ ಘಟನೆ ಇದಾಗಿತ್ತು ನನ್ನ ಪಾತ್ರ ಹೇಗಿರಲಿದೆ ಎಂದು ನಿರ್ದೇಶಕರು ಮೊದಲೇ ಹೇಳಿದ್ದರು. ಚಿತ್ರದ ಕೊನೆಯಲ್ಲಿ ನಿಮ್ಮ ಪಾತ್ರ ಸಿಕ್ಕಾಪಟ್ಟೆ ವೈಲೆಂಟ್ ಆಗುತ್ತದೆ ಏನೇ ಆಗಲಿ ಮಗಳನೇ ಬಿಡುವುದಿಲ್ಲ ಅನ್ನೋ ಮಟ್ಟಕ್ಕೆ ನಿಮ್ಮ ಕೋಪ ಹೋಗುತ್ತದೆ ಎಂದು ಹೇಳಿದ್ದರು. ಕೊನೆ ಭಾಗ ಚಿತ್ರೀಕರಣ ಆರಂಭ ಮಾಡಿದಾಗಲೇ ಗೊತ್ತಾಗಿತ್ತು ಎಷ್ಟು ತಾರಕ್ಕೆ ಹೊಗಲಿದೆ ಎಂದು. ಚಿತ್ರಕಥೆ ಅದ್ಭುತವಾಗಿ ಮೂಡಿ ಬಂದಿದೆ ಹಾಡುಗಳು ಸೂಪರ್ ಆಗಿದೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ರಾಮಸ್ವಾಮಿ ಮಾತನಾಡಿದ್ದಾರೆ.
ಜೀ ಕನ್ನಡ ಬೆಸ್ಟ್ ಫೈಂಡ್ ಅವಾರ್ಡ್ ಪಡೆದ ಗಗನಾ; ಗಿಲ್ಲಿ ನಟನಿಗೆ ಅನ್ಯಾಯ ಎಂದು ಕಾಮೆಂಟ್ ಮಾಡಿದ ನೆಟ್ಟಿಗರು!
'ಸಿನಿಮಾ ರಿಲೀಸ್ ಆಗಿ ಒಂದು ವಾರ ಆಗಿತ್ತು ಆದರೆ ಪ್ರಚಾರದಲ್ಲಿ ಭಾಗಿಯಾಗಲು ಆಗುತ್ತಿರಲಿಲ್ಲ ಹೀಗಾಗಿ ಒಂದು ದಿನ ಹೋಗೋಣ ಎಂದು ಹೈದರಾಬಾದ್‌ಗೆ ಭೇಟಿ ನೀಡಿದೆ. ಒಂದೆರಡು ಥಿಯೇಟರ್‌ನಲ್ಲಿ ಜನರಿಗೆ ಮುಖ ತೋರಿಸದೇ ಅವರ ಪ್ರತಿಕ್ರಿಯೆಯನ್ನು ನೋಡಿಕೊಂಡು ಬಂದ್ವಿ ಆದರೆ ಒಂದು ಥಿಯೇಟರ್‌ನಲ್ಲಿ ಕ್ಲೈಮ್ಯಾಕ್ಸ್ ಹಂತದಲ್ಲಿ ಇದ್ದಾಗ ಎಂಟ್ರಿ ಕೊಟ್ಟರು ಸಿನಿಮಾ ಮುಗಿದ ಮೇಲೆ ಇಡೀ ತಂದೆ ಜನರೊಟ್ಟಿಗೆ ಮಾತನಾಡಿದ್ದರು. ಜನರ ಜೊತೆ ಮಾತನಾಡಿದ ಮೇಲೆ ನಿಮಗೆ ಸರ್ಪ್ರೈಸ್ ಇದೆ ಎಂದ ನನ್ನನ್ನು ಪರಿಚಯ ಮಾಡಿಕೊಟ್ಟರು, ಆಗ ಏಕಾಏಕಿ ಮಹಿಳೆಯೊಬ್ಬರು ನೇರವಾಗಿ ಓಡಿ ಬಂದು ನನಗೆ ಹೊಡೆಯಲು ಶುರು ಮಾಡಿದ್ದರು ಅಷ್ಟರಲ್ಲಿ ನಮ್ಮ ತಂಡದವರು ನಮ್ಮನ್ನು ತಡೆಯಲು ಮುಂದಾದರು. ಸಣ್ಣ ಪುಟ್ಟ ಪೆಟ್ಟುಗಳು ಆಯ್ತು ಆ ಮೇಲೆ ಆಕೆಗೆ ಇದು ಪಾತ್ರ ಅಂತ ವಿವರಿಸಿಲು ಹೋದರೂ ಕೇಳುವ ಮನಸ್ಥಿತಿಯಲ್ಲಿ ಇರಲಿಲ್ಲ. ಅಲ್ಲಿಂದ ಆ ಮಹಿಳೆಯನ್ನು ಕರೆದುಕೊಂಡು ಹೋಗಿಬಿಟ್ಟರು ಅದಾದ ಮೇಲೆ ಅಲ್ಲಿದ್ದ ಬೇರೆ ಪ್ರೇಕ್ಷಕರು ಬಂದು ನಿಮ್ಮ ಪಾತ್ರ ಅದ್ಭುತಾವಗಿದೆ ಎಂದು ಫೋಟೋ ಕ್ಲಿಕ್ ಮಾಡಿಕೊಂಡರು' ಎಂದು ರಾಮಸ್ವಾಮಿ ಹೇಳಿದ್ದಾರೆ.