ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ  ಜನ್ಮದಿನವನ್ನು ಆಚರಿಸಿ ಪತ್ನಿಯನ್ನು ಚಿನ್ನಾ ಎಂದು ಕರೆದಿದ್ದರು. ಇದೀಗ ಪತ್ನಿಯೊಂದಿಗೆ ಫುಲ್ ವರ್ಕ್ ಔಟ್ ಮಾಡುತ್ತಿರುವ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಪತ್ನಿ ಜತೆ ಅಪ್ಲೋಡ್‌ ಮಾಡೋ ಫೋಟೋಸ್ ವೈರಲ್ ಆಗೋದೇಕೆ?

'ಜಾಗ್ವಾರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ ನಿಖಿಲ್ ಕುಮಾರ್ ಏಪ್ರಿಲ್ 16ರಂದು ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಲಾಕ್‌ಡೌನ್‌ ಇದ್ದ ಕಾರಣ ನಿಖಿಲ್ ಹಾಗೂ ರೇವತಿ ಯಾವುದೇ ಪ್ರವಾಸಕ್ಕೆ ತರಳದೆ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುತ್ತ ಸಮಯ ಕಳೆದಿದಿದ್ದರು.

ನಿಖಿಲ್‌ -ರೇವತಿ ಐಷಾರಾಮಿ ಟ್ರಿಪ್‌; ಅಲ್ಲೋಗೋದು ಬಿಟ್ಟು ಇಲ್ಲಿದ್ದಾರೆ? 

ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ಜೋಡಿ ತಮ್ಮ ಪ್ರತಿದಿನದ ನಡಾವಳಿಗಳನ್ನು ಅಪ್ ಡೇಟ್ ಮಾಡುತ್ತಲೇ ಇರುತ್ತದೆ. ಯಾವಾಗಲೂ ಜಿಮ್ ಟ್ರೇನರ್ ಬೇಕೆಂದು ಇಲ್ಲ, ಆದರೆ ಜಿಮ್ ಮಾಡಲು ಒಂದು ಮೋಟಿವೇಶನ್ ಬೇಕಾಗುತ್ತದೆ. ನಿಸರ್ಗದ ಮಡಿಲಲ್ಲಿ ನನ್ನ ಬಾಳಸ ಸಂಗಾತಿಯೊಂದಿಗೆ ವ್ಯಾಯಾಮದದಲ್ಲಿ ತೊಡಗಿಕೊಂಡಿದ್ದು ಖುಷಿ ನೀಡಿದೆ ಎಂದು ನಿಖಿಲ್ ಬರೆದು ತಿಳಿಸಿದ್ದಾರೆ.