Asianet Suvarna News Asianet Suvarna News

'ಮೋದಿ ಮನುಷ್ಯನಾಗಿರಲೇ ಅಯೋಗ್ಯ..' ಪ್ರಧಾನಿ ವಿರುದ್ಧ ಕಿಡಿಕಾರಿದ ನಟ ಕಿಶೋರ್‌!

ಲೋಕಸಭೆ ಚುನಾವಣೆ ಹೊತ್ತಿನಲ್ಲಿ ನಟ ಕಿಶೋರ್‌ ಮತ್ತೆ ತಮ್ಮ ಮೋದಿ ದ್ವೇಷವನ್ನು ಹೊರಹಾಕಿದ್ದಾರೆ. ಇತ್ತೀಚೆಗೆ ತಮ್ಮ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿರುವ ಅವರ ಮೋದಿ ಮನುಷ್ಯನಾಗಿರಲು ಅಯೋಗ್ಯ ಎಂದು ಹೇಳಿದ್ದಾರೆ.

Actor Kishore says PM modi unfit to be human san
Author
First Published May 17, 2024, 3:53 PM IST

ಬೆಂಗಳೂರು (ಮೇ.17): ಸದಾಕಾಲ ಮೋದಿ ದ್ವೇಷದ ಕಾರಣದಿಂದಾಗಿಯೇ ಸೋಶಿಯಲ್‌ ಮೀಡಿಯಾದಲ್ಲಿ ಪರ ಹಾಗೂ ವಿರೋಧ ವ್ಯಕ್ತಿಗಳನ್ನು ಪಡೆದುಕೊಂಡಿರುವ ನಟ ಕಿಶೋರ್‌ ಮತ್ತೊಮ್ಮೆ ತಮ್ಮ ಪೋಸ್ಟ್‌ ಮೂಲಕ ಸುದ್ದಿಯಾಗಿದ್ದಾರೆ. ಪ್ರಧಾನಿ ಮೋದಿ ಸಮಾವೇಶ ಹಾಗೂ ಸಂದರ್ಶನದಲ್ಲಿ ಆಡಿದ ಮಾತುಗಳ ಕೊಲಾಜ್‌ಅನ್ನು ತಮ್ಮ ಪೋಸ್ಟ್‌ನಲ್ಲಿ ಹಂಚಿಕೊಂಡಿರುವ ಅವರು, ಮೋದಿ ಮನುಷ್ಯನಾಗಿರಲು ಅಯೋಗ್ಯ ಎಂದು ಬರೆದುಕೊಂಡಿದ್ದಾರೆ.  ಒಂದು ದಿನದ ಹಿಂದೆ ಅವರು ಈ ಪೋಸ್ಟ್‌ ಮಾಡಿದ್ದು, ಇದಕ್ಕೆ ಸಾಕಷ್ಟು ಕಾಮೆಂಟ್‌ಗಳೂ ಬಂದಿವೆ. ಐದು ದಿನಗಳ ಹಿಂದೆ ಮೋದಿಯವರ ಚುನಾವಣಾ ಭಾಷಣದ ಕ್ಲಿಪ್ಪಿಂಗ್‌ಅನ್ನು ಹಂಚಿಕೊಂಡಿದ್ದ ಕಿಶೋರ್‌ ಅದಕ್ಕೆ, 'ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು - ಪುರಂದರ ದಾಸರು (15ನೇ ಶತಮಾನ). ಗೋಸುಂಬೆಯೂ ನಾಚಬೇಕು. ಯಾವ ಘನತೆ ಗೌರವ ಮಾನ ಮರ್ಯಾದೆಯಿಲ್ಲದ ಮನುಷ್ಯ ಕೂಡ ಪದವಿಗಾಗಿ ಹೀಗೆ ಬಣ್ಣ ಬದಲಿಸಲಾರ …ಸುಳ್ಳು ಹೇಳಲಾರ …ದ್ವೇಷ ಕಕ್ಕಲಾರ' ಎಂದು ಬರೆದುಕೊಂಡಿದ್ದರು.

ಇತ್ತೀಚಿನ ಪೋಸ್ಟ್‌ನಲ್ಲಿ ಕಿಶೋರ್ ಹೇಳಿರುವ ಮಾತುಗಳು
'ನಿಜ ನೀವು ಸಾರ್ವಜನಿಕ ಜೀವನಕ್ಕೇ ಅಲ್ಲ , ಮನುಷ್ಯನಾಗಿರಲೇ ಅಯೋಗ್ಯ . ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರೂ ಮಹಾಪಾಪ. ಚಿಲ್ಲರೆ ಕಳ್ಳನನ್ನೂ ನಾಚಿಸುವ, ಸತ್ಯ ಸಿದ್ಧಾಂತ ನೈತಿಕತೆ ವ್ಯಕ್ತಿತ್ವ ಅದಾವುದೂ ಇಲ್ಲದ ವಿಶ್ವ ಕಂಡ ಅತೀ ಸುಳ್ಳುಗಾರ, ಅತೀ ಪುಕ್ಕಲು, ಅತೀ ನಿಕೃಷ್ಠ, ಅತೀ ದುರಹಂಕಾರಿ, ಅತೀ ಕ್ರೂರ, ಅತೀ ಮೂರ್ಖ, ಅತೀ ಸಂವೇದನಾಹೀನ, ಅತೀ ಘನತೆಹೀನ, ಅತೀ ಆತ್ಮರತಿಲೋಲ, ಅತೀ ಜನವಿರೋಧಿ, ಅತೀ ಹೊಲಸು ನಾಲಿಗೆಯ, ಅತೀ ಸಂಕುಚಿತ ದೃಷ್ಟಿಯ ಅತೀ ಅಪಾಯಕಾರಿ ' ಎಂದು ಮೋದಿ ಅವರನ್ನು ಟೀಕಿಸಿದ್ದಾರೆ. 

ಅತೀ ಭ್ರಷ್ಟ ನಿರಂಕುಶ ಪ್ರಭುತ್ವವಾದಿ ಎಂದು ಆಧಾರಸಹಿತ ಆ ಮನುಷ್ಯನೇ (?) ಹೇಳಿಬಿಡುತ್ತಾನೆ ಬೇಕಿದ್ದರೆ ಅವನ ನಡೆ ನುಡಿಯನ್ನು ನೋಡಿ. 10 ವರ್ಷ ಅಧಿಕಾರವಿದ್ದೂ ಮಾಡಿದ ಕೆಲಸದ ಬಗ್ಗೆ, ರೈತರ, ಸೈನಿಕರ, ಮಹಿಳೆಯರ, ಮಕ್ಕಳ, ಆಸ್ಪತ್ರೆ ಕಾಲೇಜುಗಳ ಅಭಿವೃದ್ಧಿಯ ಬಗ್ಗೆ ಮಾತಾಡಲು ಯೋಗ್ಯತೆಯಿಲ್ಲದೇ.. ಬರೀ ಸುಳ್ಳು, ದ್ವೇಷ ಕಾರುವುದು.. ಮುಸ್ಲಿಂ ತೆರಿಗೆಯಂತೆ , ನುಸುಳುಕೋರರಂತೆ, ಪಾಕೀಸ್ಥಾನವಂತೆ, ರೂಮು ಕಿತ್ಕೊತಾರಂತೆ, ಎಮ್ಮೆ ಕಿತ್ಕೊತಾರಂತೆ, ಸೈಕಲ್ ಕಿತ್ಕೊತಾರಂತೆ, ವೋಟು ಜಿಹಾದ್ ಅಂತೆ ಮಂದಿರಕ್ಕೆ ಬೀಗವಂತೆ … ಬರೀ ತಲೆಬುಡವಿಲ್ಲದ ಮಾತುಗಳು, ಮುಸ್ಲಿಂ ಭಯೋತ್ಪಾದಕರು ಇಸ್ಲಾಂನ ಮಾನ ಕಳೆದಂತೆ ಅಧಿಕಾರಕ್ಕಾಗಿ ಹಿಂದೂ ಬಣ್ಣ ಬಳಿದುಕೊಂಡ ಈ ಢೋಂಗಿ ಮನುಷ್ಯ ಹಿಂದೂ ಧರ್ಮದ ಮಾನ ವಿಶ್ವದಾದ್ಯಂತ ಮೂರು ಕಾಸಿಗೆ ಹರಾಜು ಹಾಕಿಬಿಟ್ಟ..' ಎಂದು ಕಿಶೋರ್‌ ಜರಿದಿದ್ದಾರೆ.

ಇದಕ್ಕೆ ಕಾಮೆಂಟ್‌ ಮಾಡಿರುವ ವ್ಯಕ್ತಿಯೊಬ್ಬ, ' ಸುಳ್ಳುಬುರುಕ. ಗಟಾರದಲ್ಲಿ ಗ್ಯಾಸ್ ಉತ್ಪತ್ತಿ, ಯಾವುದೋ ಅಂಧಕಾಲದಲ್ಲಿ ಡಿಜಿಟಲ್ ಕ್ಯಾಮೆರಾ, ರೈಲ್ವೆ ಸ್ಟೇಷನ್ ನಲ್ಲಿ ಟೀ ಮಾರುವಿಕೆ , ಯಪ್ಪಾ ಒಂದಾ ಎರಡಾ, ಉದ್ಯೋಗ ಕೇಳಿದ್ರೆ ಪಕೋಡಾ ಮಾರಿ, ರೈತರ ಪರ ಅನ್ನೋದು ಅದೇ ರೈತರು ಬರಬಾರದು ಅಂತ ಮುಳ್ಳು ತಂತಿ ಹಾಕಿಸಿ, ಟಿಯರ್ ಗ್ಯಾಸ್ ಹಾಕೋದು, ಎಲ್ಲರೂ ಒಂದೇ ಅನ್ನೋದು ಅನ್ಯಕೋಮಿನ ಮೇಲೆ ದ್ವೇಷ ಭಾಷಣ ಮಾತಾಡೋದು' ಎಂದು ಕಾಮೆಂಟ್‌ ಮಾಡಿದ್ದಾರೆ.

ಮೋದಿ ಟೀಕಿಸೋ ಕಿಶೋರ್ ಸೇರಿ ಈ ನಟರು ಕೃಷಿಯಲ್ಲೂ ಎತ್ತಿದ ಕೈ, ಉಳುವಾ ನಟರ ನೋಡಿಲ್ಲಿ!

ಮೋದಿ ತುಂಬಾ ಕನ್‌ಫ್ಯೂಸ್‌ ಆಗಿದ್ದಾರೆ. ನಾನೆಂದೂ ಇವರಂಥ ಕೊಳಕು ವ್ಯಕ್ತಿಯನ್ನು ನೋಡಿಲ್ಲ. ಭಾರತಕ್ಕಾಗಿ ನೀವು ನಿಂತಿರೋದನ್ನು ನೋಡಿ ಖುಷಿಯಾಗುತ್ತಿದೆ. ಹೆಚ್ಚಿನ ಸೆಲೆಬ್ರಿಟಿಗಳು ಇದನ್ನು ಪ್ರಶ್ನೆ ಮಾಡುವ ಧೈರ್ಯ ಹೊಂದಿಲ್ಲ. ಲವ್‌ ಯು ಸರ್‌' ಎಂದು ಇನ್ನೊಬ್ಬರು ಬರೆದಿದ್ದಾರೆ.

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

 

Latest Videos
Follow Us:
Download App:
  • android
  • ios