Asianet Suvarna News Asianet Suvarna News

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್

ನೇಹಾಗೆ ಏನಾಗಿದೆಯೋ ಅದು ಮರೆಯಲಾಗದ ಅಪರಾಧವೇ ಸರಿ. ಬಾಳಿ ಬದುಕಬೇಕಾದ ಹುಡುಗಿಯೊಬ್ಬಳು ತನ್ನದಲ್ಲದ ತಪ್ಪಿಗೆ ದುರಂತ ಸಾವು ಕಂಡಿರುವುದು ನಿಜಕ್ಕೂ ದುಃಖಕರ. ನಾಗರಿಕ ಸಮಾಜದಲ್ಲಿರುವ ನಾವೆಲ್ಲರೂ ಇದಕ್ಕೆ ಹೊಣೆಗಾರರೇ ಆಗಿದ್ದೇವೆ.. 

Sandalwood actor Kishore social media post on Neha Hiremath murder case gets viral srb
Author
First Published Apr 20, 2024, 10:26 PM IST

ನೇಹಾ ಹಿರೇಮಠ್ ಕೊಲೆ ಪ್ರಕರಣ ರಾಜ್ಯದಲ್ಲಿ ತೀವ್ರ ಆಕ್ರೋಶದ ಸ್ವರೂಪ ಪಡೆದಿದ್ದು ಅಪರಾಧಿಗೆ ಗಲ್ಲುಶಿಕ್ಷೆ ಆಗಲೇಬೇಕೆಂಬ ಕೂಗು ಬಹಳಷ್ಟು ಕಡೆಗಳಿಂದ ಕೇಳಿ ಬರುತ್ತಿದೆ. ಕೊಲೆ ಆರೋಪಿಯಾಗಿರುವ ಫಯಾಜ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕೊಲೆಯಾಗಿರುವ ನೇಹಾ ಹುಬ್ಬಳ್ಳಿಯ 'ಎಂಸಿಎ' 1ನೇ ಸೆಮೆಸ್ಟ್ರಿ ವಿದ್ಯಾರ್ಥಿನಿ ಆಗಿದ್ದರು.

ನೇಹಾಗೆ ಏನಾಗಿದೆಯೋ ಅದು ಮರೆಯಲಾಗದ ಅಪರಾಧವೇ ಸರಿ. ಬಾಳಿ ಬದುಕಬೇಕಾದ ಹುಡುಗಿಯೊಬ್ಬಳು ತನ್ನದಲ್ಲದ ತಪ್ಪಿಗೆ ದುರಂತ ಸಾವು ಕಂಡಿರುವುದು ನಿಜಕ್ಕೂ ದುಃಖಕರ. ನಾಗರಿಕ ಸಮಾಜದಲ್ಲಿರುವ ನಾವೆಲ್ಲರೂ ಇದಕ್ಕೆ ಹೊಣೆಗಾರರೇ ಆಗಿದ್ದೇವೆ.. 

'ರಿಲೇಶನ್‌ಶಿಪ್‌'ನಲ್ಲಿ ಇದೀನಿ, ಒಪ್ಪಿಕೊಂಡ ನಟ ವಿಜಯ್ ದೇವರಕೊಂಡ; ಫ್ಯಾನ್ಸ್ ಫುಲ್ ಶಾಕ್!

ಇಂಥ ಘೋರ ಅಪರಾಧ ಎಸಗಿದ ಅಪರಾಧಿಯನ್ನು ಸಾಕ್ಷಿ ಸಮೇತ ಬಂಧಿಸಿ ಜೈಲಿಗಟ್ಟಿದ್ದು, ಮತ್ಯಾರೂ ಇಂಥ ಅಮಾನವೀಯ ಕೃತ್ಯ ಮಾಡದಂತೆ, ಅವನಿಗೆ ಅಪರಾಧಕ್ಕೆ ತಕ್ಕ ಕಠಿಣ ಶಿಕ್ಷೆ ಆಗಲೇಬೇಕು. ಜೊತೆಗೆ, ನಾವು ಅಂದರೆ ಸಮಾಜ ಹಾಗು ಸರ್ಕಾರ ಎರಡೂ ಮಹಿಳೆಯ ವಿರುದ್ಧ ನಡೆಯುವ ಅಪರಾಧದ ಬಗ್ಗೆ ಸಾಕಷ್ಟು ಅರಿವು ನೀಡುವುದರ ಜತೆಗೆ, ಅದನ್ನು ಬೇರು ಸಹಿತ ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. 

ಪ್ರೇಕ್ಷಕರಿಗೆ ಮೋಸ ಮಾಡ್ಬಿಟ್ಟೆ, 'ಆಫ್ರಿಕಾದಲ್ಲಿ ಶೀಲಾ'ನ ಬಂಡೀಪುರಕ್ಕೂ ತಂದ್ಬಿಟ್ಟೆ ಅಂದಿದ್ಯಾಕೆ ದ್ವಾರಕೀಶ್!

ದುರಂತವೆಂದರೆ, ಅಪರಾಧಿಗೆ ಕೊಡುವ ಯಾವುದೇ ಶಿಕ್ಷೆ ನೇಹಾಳನ್ನು ತಿರುಗಿ ತರಲಾರದು. ಆದರೆ, ನಾವು ಕೊಡಲಿರುವ ಶಿಕ್ಷೆಯಿಂದ ಮುಂದೆ ಯಾವುದೇ ವ್ಯಕ್ತಿ ಇಂಥ ಘೋರ ಅಪರಾಧದಲ್ಲಿ ತೊಡಗಬಾರದಂಥ ಸುಶೀಕ್ಷಿತ ಸಮಾಜದ ನಿರ್ಮಾಣಕ್ಕೆ ಅದು ಸಹಕಾರಿಯಾಗಬೇಕು, ನೇಹಾಳಂತೆ ಇನ್ನೊಬ್ಬರು ಮುಂದೆ ಬಲಿಪಶು ಆಗಬಾರದು. ಆದರೆ ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ ಅಥವಾ ಮುಸ್ಲಿಂಮನೋ ಎಂದು ವಿಭಾಗ ಮಾಡಿ ನೋಡುವುದು ಎಷ್ಟು ಸರಿ? ಒಬ್ಬ ವ್ಯಕ್ತಿಯ ಕೃತ್ಯಕ್ಕೆ ಇಡೀ ಸಮುದಾಯವನ್ನು ದೂಷಿಸುವುದು ಎಷ್ಟರಮಟ್ಟಿಗೆ ಸರಿ?

'ಉತ್ತರಕಾಂಡ' ಸೇರಿಕೊಂಡ ಚೈತ್ರ ಆಚಾರ್, ದಿಗಂತ್ & ಯೋಗರಾಜ್ ಭಟ್; ರಮ್ಯಾ ಜಾಗಕ್ಕೆ ಈ ಲಚ್ಚಿ?

ಈ ದೇಶದಲ್ಲಿ ದಿನವೊಂದಕ್ಕೆ 78 ಕೊಲೆಗಳು ಮತ್ತು ಮಹಿಳೆಯರ ವಿರುದ್ಧ 1224 ಅಪರಾಧಗಳು ದಾಖಲಾಗುತ್ತಿವೆ. ಆ ಅಪರಾಧಿಗಳಲ್ಲಿ ಎಷ್ಟು ಮಂದಿ ಹಿಂದೂಗಳು ಮತ್ತು ಎಷ್ಟು ಮಂದಿ ಕ್ರಿಶ್ಚಿಯನ್ನರು ಇದ್ದಾರೆ? ಅಂದರೆ, ಅದೇ ಕಮ್ಯುನಿಟಿಯವರಾಗಿದ್ದರೆ ನಾವೆಲ್ಲರೂ ಅದಕ್ಕೆ ಹೊಣೆಗಾರರಾಗಿ ಅಪರಾಧಿ ಭಾವದಿಂದ ಬಳಲಬೇಕೇ? ಎಷ್ಟೋ ಮಂದಿ ಅಂತರ್ಧಮೀಯ ಜೋಡಿಗಳು ಸಾಮರಸ್ಯದಿಂದ ಬಾಳುವುದನ್ನು ನಾವು ನೋಡುತ್ತಿದ್ದೇವಲ್ಲವೇ? ಹಾಗುದ್ದರೆ ಆ ಮತಗಳು ಹಾಗು ಅದರ ಜನರು ಇದಕ್ಕೆ ಹೊಣೆಗಾರರೇ? ಹೇಗೆ?

ಪ್ರೀತಿಯ ಪತ್ನಿ ಫೋಟೋ ಶೇರ್‌ ಮಾಡಿ ಸವಿನೆನಪು ಹಂಚಿಕೊಂಡ ವಿಜಯರಾಘವೇಂದ್ರ; ನೆಟ್ಟಿಗರಿಂದ ಕಂಬನಿ 

ಇಂಥ ಘಟನೆಗಳಾದಾಗ ಅಪರಾಧಗಳನ್ನು ಖಂಡಿಸಿ ಬಲಿಪಶುಗಳ ಪರವಾಗಿ ನಿಲ್ಲುವವರು ವಿರೋಧ ಪಕ್ಷದವರಾಗಿದ್ದರೂ ಅವರನ್ನು ನಾವು ಒಪ್ಪಿಕೊಳ್ಳಲೇಬೇಕು. ಇದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಜನರನ್ನು ಒಡೆದು ಆಳುವ ಈ ದ್ವಂದ ಮನಸ್ಥಿತಿಯ ಜನರು ಈ ನೇಹಾಳ ಸಾವಿನಲ್ಲೂ ಘಟನೆಗೆ ಕೋಮು ಬಣ್ಣ ಬಳಿದು, ದ್ವೇಷ ಹರಡುತ್ತ ಇದನ್ನು ರಾಜಕೀಯ ಲಾಭಕ್ಕಾಗಿ ಬಳಿಸಿಕೊಳ್ಳುತ್ತಿದ್ದಾರೆ. ಇದು ಕೊಲೆಯಷ್ಟೇ ಹೀನವಾದ ಅಪರಾಧ' ಎಂದು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ ನಟ ಕಿಶೋರ್.

ವಿಷ್ಣುವರ್ಧನ್‌ಗೆ ಟಾಂಗ್ ಕೊಡಲು 'ದ್ರೋಹಿ' ಮಾಡಿದ್ರು ದ್ವಾರಕೀಶ್; ಯಾಕೆ ಮೂಡಿತ್ತು ವೈಮನಸ್ಯ?

 

 

Follow Us:
Download App:
  • android
  • ios