ರಾನಿ ರಿಲೀಸ್‌ಗೂ ಮುನ್ನವೇ ಶಾಕಿಂಗ್ ನ್ಯೂಸ್ ನೀಡಿದ ಕಿರಣ್ ರಾಜ್!
ಕಿರಣ್ ರಾಜ್ ನಟನೆಯ 'ರಾನಿ' ಸಿನಿಮಾ ಬಿಡುಗಡೆಗೆ ಮುನ್ನವೇ ದೃಢ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ. ಸಂದರ್ಶನವೊಂದರಲ್ಲಿ ಕಿರಣ್ ರಾಜ್ ಧಾರಾವಾಹಿಯಿಂದ ಸಿನಿಮಾಗೆ ಬಂದ ದಾರಿಯ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರು: ಕನ್ನಡತಿ ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ನಟನೆಯ ಬಹುನಿರೀಕ್ಷಿತ ಸಿನಿಮಾ 'ರಾನಿ' ಸೆಪ್ಟೆಂಬರ್ 12ರಂದು ಬಿಡುಗಡೆಯಾಗಲಿದೆ. ಚಿತ್ರದ ಬಿಡುಗಡೆ ಮುನ್ನವೇ ಧಾರಾವಾಹಿ ಅಭಿಮಾನಿಗಳಿಗೆ ಕಿರಣ್ ರಾಜ್ ಆಘಾತಕಾರಿ ಸುದ್ದಿಯೊಂದನ್ನು ನೀಡಿದೆ. ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದ್ರೆ ಕಲಾವಿದರು ಕಿರುತೆರೆಯತ್ತ ಮುಖ ಮಾಡುತ್ತಾರೆ ಎಂಬ ಮಾತು ಬಣ್ಣದ ಲೋಕದಲ್ಲಿದೆ. ಕಿರುತೆರೆಯಿಂದ ಬೆಳ್ಳಿತೆರೆ ಪ್ರವೇಶಿಸಿದ ಕಲಾವಿದರು, ರಿಯಾಲಿಟಿ ಶೋಗಳಿಗೆ ತೀರ್ಪುಗಾರರಾಗಿ ಹಿಂದಿರುಗುತ್ತಿದ್ದಾರೆ. ಇದೀಗ ಕಿರಣ್ ರಾಜ್ ಕಿರುತೆರೆಯಿಂದ ಹಿರಿತೆರೆಗೆ ಪ್ರವೇಶ ಪಡೆದಿರುವ ನಟ. ಕಿರಣ್ ರಾಜ್ ನಟನೆ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ.
ರಾನಿ ದಿ ರೂಲರ್ ಚಿತ್ರದಲ್ಲಿ ಕಿರಣ್ ರಾಜ್ ಮೊದಲ ಬಾರಿಗೆ ಮಾಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾದ ಟ್ರೈಲರ್ ಗಾಂಧಿನಗರದಲ್ಲಿ ಭರವಸೆ ಮೂಡಿಸಿದೆ. ಕಿರಣ್ ರಾಜ್ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ರಾನಿ ಕುರಿತು ಮಾತನಾಡಿದ್ದಾರೆ. ನಾವು ಯೋಚಿಸುವದಕ್ಕಿಂತ ಪ್ರೇಕ್ಷಕರು ಬುದ್ಧಿವಂತರು. ಪ್ರತಿಯೊಂದು ವಿಷಯವನ್ನು ಪ್ರೇಕ್ಷಕರು ಸೂಕ್ಷ್ಮವಾಗಿ ಗಮನಿಸುತ್ತಾರೆ. ಸಾಹಸ ದೃಶ್ಯಗಳ ಚಿತ್ರೀಕರಣದಲ್ಲಿ ನಾವು ಪರ್ಫೆಕ್ಟ್ ಆಗಿ ಎಲ್ಲವನ್ನು ಕಲಿತು ಮಾಡಬೇಕಾಗುತ್ತದೆ ಎಂದು ಕಿರಣ್ ರಾಜ್ ಹೇಳುತ್ತಾರೆ.
ಈ ಸಿನಿಮಾದಲ್ಲಿ ನಾನು ರಾಘವ್ ಮತ್ತು ರಾನಿ ಎಂಬ ಎರಡು ಪಾತ್ರಗಳಲ್ಲಿ ನಟಿಸುತ್ತಿದ್ದೇನೆ. ರಾನಿ ಮತ್ತು ರಾಘವ್ ನಡುವೆ ಎಂಟು ವರ್ಷ ಅಂತರ ಇರೋ ಕಾರಣ ಎರಡು ಲುಕ್‌ನಲ್ಲಿ ಕಾಣಿಸಿಕೊಳ್ಳಲು ದೇಹವನ್ನು ದಂಡಿಸಿದ್ದೇವೆ. ಯಂಗ್ ಮತ್ತು ಹೆವಿ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಶ್ರಮ ಹಾಕಲಾಗಿದೆ. ಈ ಪಾತ್ರಕ್ಕಾಗಿ ತೂಕ ಇಳಿಸುವ ಮತ್ತು ಏರಿಕೆಗಾಗಿ ವಿಶೇಷ ತರಬೇತಿ ಪಡೆದುಕೊಂಡಿದ್ದೇನೆ ಎಂದು ಹೇಳುತ್ತಾರೆ ಕಿರಣ್ ರಾಜ್.
ವಿಜಯಲಕ್ಷ್ಮಿಗೆ ಇನ್ನೊಂದು ಮುಖವಿದೆಯಾ? ಹೀಗಂತ ಇಷ್ಟೊಂದು ಚರ್ಚೆ ಈಗ್ಯಾಕೆ ಆಗ್ತಿದೆ?
ಸಿನಿಮಾದಿಂದಲೇ ಎಲ್ಲಾ ಸಂದೇಶ ರವಾನೆಯಾಗುತ್ತೆ ಎಂದು ನಾನು ನಂಬಲ್ಲ. ವೀಕ್ಷಕನ್ನು ಮನರಂಜಿಸೋದು ಸಿನಿಮಾದ ಕೆಲಸವಾಗಿದೆ. ಪ್ರತಿಯೊಬ್ಬರು ತಾವು ಬದುಕುತ್ತಿರುವ ಸಮಾಜದಿಂದ ಒಂದಿಲ್ಲಾ ಒಂದು ಪಾಠಗಳನ್ನು ಕಲಿತಿರುತ್ತಾರೆ. ಜನರಿಗೆ ಮನರಂಜನೆ ಬೇಕಾಗವಿದ್ದು, ನಾನು ಅದನ್ನು ನೀಡುವ ಕೆಲಸ ಮಾಡುತ್ತೇವೆ ಎಂದು ಕಿರಣ್ ರಾಜ್ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ನಮ್ಮ ಚಿತ್ರ ಯಾವ ರೀತಿ ಪರಿಣಾಮ ಬೀರುತ್ತೆ ಅನ್ನೋದು ಪ್ರೇಕ್ಷಕರ ದೃಷ್ಠಿಕೋನಕ್ಕೆ ಬಿಟ್ಟಿದ್ದು, ಸಕಾರಾತ್ಮಕ-ನಕಾರಾತ್ಮಕ ವಿಮರ್ಶೆಗಳನ್ನು ಸ್ವೀಕರಿಸುತ್ತೇವೆ ಎಂದು ಕಿರಣ್ ರಾಜ್ ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ ಮತ್ತೆ ಧಾರಾವಾಹಿಯಲ್ಲಿ ನಟಿಸುತ್ತೀರಾ ಪ್ರಶ್ನೆಗೆ ಉತ್ತರಿಸಿದ ನಟ ಕಿರಣ್ ರಾಜ್, ಸದ್ಯಕ್ಕೆ ಆ ಬಗ್ಗೆ ಯಾವುದೇ ಯೋಚನೆ ಇಲ್ಲ ಎಂದು ಹೇಳುವ ಮೂಲಕ ಸೀರಿಯಲ್ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೇ ಬಂದವನು. ಹಾಗಾಗಿ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪ್ರವೇಶಿಸಿದೆ. ಧಾರಾವಾಹಿಯಿಂದಲೇ ನನಗೆ ಅಭಿಮಾನಿಗಳು ಸಿಕ್ಕಿದ್ದಾರೆ. ನನ್ನ ಎಲ್ಲಾ ಅಭಿಮಾನಿಗಳನ್ನು ಸಿನಿಮಾ ಮುಖಾಂತರ ಮುಂದುವರಿಸಿಕೊಂಡು ಹೋಗಲು ಬಯಸುತ್ತೇನೆ ಎಂದು ಹೇಳುವ ಮೂಲಕ ಕಿರುತೆರೆಗೆ ಹಿಂದಿರುಗಲ್ಲ ಎಂಬ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.
ಕನ್ನಡತಿ ಖ್ಯಾತಿಯ ಕಿರಣ್ ರಾಜ್ ಕಾರ್ ಅಪಘಾತ; ಎದೆ ಭಾಗಕ್ಕೆ ಪೆಟ್ಟು