- Home
- Entertainment
- Sandalwood
- ಲವ್ ಮಾಕ್ಟೇಲ್ ಸಿನಿಮಾದಿಂದ ನನಗೆ ಫೇಮ್ ಅಲ್ಲ, ಶೇಮ್ ಸಿಕ್ಕಿತು: ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್
ಲವ್ ಮಾಕ್ಟೇಲ್ ಸಿನಿಮಾದಿಂದ ನನಗೆ ಫೇಮ್ ಅಲ್ಲ, ಶೇಮ್ ಸಿಕ್ಕಿತು: ಬ್ರಹ್ಮಗಂಟು ನಟಿ ಗೀತಾ ಭಾರತಿ ಭಟ್
ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್ ಅವರು ನಟಿಸಿದ್ದರು. ಆ ಬಳಿಕ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಡೈಲಾಗ್ ಬಗ್ಗೆ ಗೀತಾ ಭಾರತಿ ಭಟ್ ಆರೋಪ ಮಾಡಿದ್ದು, ಡಾರ್ಲಿಂಗ್ ಕೃಷ್ಣ ದಂಪತಿ ಸ್ಪಷ್ಟನೆ ನೀಡಿದ್ದರು. ಈಗ ಗೀತಾ ಮತ್ತೆ ದನಿ ಎತ್ತಿದ್ದಾರೆ.

ಗೀತಾ ಭಾರತಿ ಭಟ್ ಹೇಳಿದ್ದೇನು?
ಈ ಸಿನಿಮಾದಲ್ಲಿ ಹೂಥರ ಇದ್ದವಳು, ಹೂಕೋಸು ಥರ ಆಗೋದಳು ಎಂಬ ಡೈಲಾಗ್ ಇತ್ತು. ನನಗೆ ಬಾಡಿ ಶೇಮಿಂಗ್ ಆಗಿದೆ, ಯಾಕಾದರೂ ನಾನು ಈ ಸಿನಿಮಾ ಒಪ್ಪಿಕೊಂಡೆನೋ ಏನೋ ಎಂದು ಗೀತಾ ಭಾರತೀ ಭಟ್ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಸ್ಕ್ರಿಪ್ಟ್ ಹೇಳಿಯೇ ಸಿನಿಮಾ ಮಾಡುತ್ತೇವೆ, ಮೊದಲೇ ತಿಳಿಸಲಾಗಿತ್ತು, ಬಾಡಿ ಶೇಮಿಂಗ್ ಮಾಡುವ ಆಲೋಚನೆ ಇಲ್ಲ ಎಂದು ಡಾರ್ಲಿಂಗ್ ಕೃಷ್ಣ ಹೇಳಿದ್ದರು.
ಸೀರಿಯಲ್‌ನಲ್ಲಿ ಹಾಸ್ಯ ಇರಲಿಲ್ಲ
ನಾನು ಮೊದಲು body shaming ಇರುವ ಸೀರಿಯಲ್‌ನಲ್ಲಿ ನಟಿಸಿದ್ದೆ ಎಂದು ಹೇಳುತ್ತಿರುವವರಿಗೆ ಒಂದು ಸ್ಪಷ್ಟನೆ ಕೊಡಬೇಕಿದೆ. ಆ ಸೀರಿಯಲ್ಲಿನ ಕಥೆ ಒಬ್ಬ ದಪ್ಪ ಹುಡುಗಿ ಸಮಾಜದಲ್ಲಿ ಎದುರಿಸುವ ನಿಜವಾದ ಸಮಸ್ಯೆಗಳ ಬಗ್ಗೆ ಇತ್ತು. ಉದ್ದೇಶ ಅವಳನ್ನು ಹಾಸ್ಯ ಮಾಡುವುದು ಅಲ್ಲ, ಸಮಾಜ ಅವಳನ್ನು ಹಾಸ್ಯದ ವಿಷಯವಾಗಿಸಿದರೂ ಕೂಡ ಅವಳ ಬಲ, ದಯೆ ಮತ್ತು ಮಾನವೀಯತೆಯನ್ನು ತೋರಿಸುವುದು.
ಆ ಡೈಲಾಗ್‌ನ್ನು ಜನರು ಕಾಮಿಡಿ ಮಾಡಿದ್ರು
ಆ ನೋವನ್ನು ತೋರಿಸುವುದು body shaming ಅನ್ನು ಹಾಸ್ಯದ ಹೆಸರಿನಲ್ಲಿ ಬೆಂಬಲಿಸುವುದು ಒಂದೇ ಅಲ್ಲ. ಆ ಒಂದು ಡೈಲಾಗ್ “famous” ಆಯಿತು ಅಂದ್ರೆ ಅದು ಕೇವಲ ಕಾಮಿಡಿ ಆಗಿದ್ದರಿಂದ ಮಾತ್ರ ಅಲ್ಲ, ಜನರು ಅದನ್ನು ಇನ್ನೊಬ್ಬರನ್ನು ಹಾಸ್ಯ ಮಾಡಲು ಬಳಸಿದ ಕಾರಣವೂ ಹೌದು.
ಬ್ಯಾಕ್ ಶಾಟ್ ತೆಗೆದಿದ್ದು ಗೊತ್ತಾಗಲಿಲ್ಲ
ಅದು fame ಅಲ್ಲ... ಅದು shame! ಇನ್ನೊಂದು ವಿಷಯ-ನಾನು ಆ ಅವಕಾಶಕ್ಕಾಗಿ ಹುಡುಕಿಕೊಂಡು ಹೋಗಲಿಲ್ಲ.ಆ ಪಾತ್ರಕ್ಕಾಗಿ audition ಕೂಡ ಕೊಡಲಿಲ್ಲ. ನಂತರ scene-ನಲ್ಲಿ ಸೇರಿಸಿದ back shot ಅಥವಾ sound effects ಬಗ್ಗೆ ಕೂಡ ನನಗೆ ತಿಳಿದಿರಲಿಲ್ಲ. ಅವುಗಳು body shaming ಅನ್ನು ಇನ್ನಷ್ಟು ಹೆಚ್ಚಾಗಿ ತೋರಿಸುವಂತೆ ಪರದೆಯ ಮೇಲೆ ಕಾಣಿಸಿಕೊಂಡವು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

