ಕಿಚ್ಚ ಸುದೀಪ್ ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ 'ವಿಕ್ರಾಂತ್ ರೋಣ' ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ಅಭಿಮಾನಿಗಳ ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಡಿಫರೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ 'ವಿಕ್ರಾಂತ್ ರೋಣ' (Vikranth Rona) ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಅವರು ಅಭಿಮಾನಿಗಳ (Fans) ಜೊತೆಗೆ ಕೆಲವು ಸಮಯ ಕಳೆದು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹೌದು! ಅಭಿಮಾನಿಗಳ ಮಾಣಿಕ್ಯ ಸುದೀಪ್ ಕೊರೊನಾ (Coronavirus) ನಡುವೆ ಬಹಳ ದಿನಗಳಿಂದ ಅಭಿಮಾನಿಗಳನ್ನ ಭೇಟಿ ಮಾಡಿರಲಿಲ್ಲ. ಹೀಗಾಗಿ ಇಂದು ಬೆಳಗ್ಗೆ ಅವರ ಮನೆ ಬಳಿ ಅಭಿಮಾನಿಗಳು ಜಮಾಯಿಸಿದ್ದರಿಂದ ಸೂಪರ್ ಸಂಡೇಯನ್ನು ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆಗೆ ಕಳೆದಿದ್ದಾರೆ.
ಜೆ.ಪಿ ನಗರದ ಸುದೀಪ್ ಮನೆ ಮುಂದೆ 'ವಿಕ್ರಾಂತ್ ರೋಣ'ನ ಅಭಿಮಾನಿಗಳು ಸೇರಿದ್ದರು. ಇದೇ ವೇಳೆ ಸುದೀಪ್ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಆ ಸಮಯದಲ್ಲಿ ಅವರು ಅಭಿಮಾನಿಗಳ ಫೋಟೋ ಕ್ಲಿಕಿಸಿಕೊಂಡು ಆಟೋ ಗ್ರಾಫ್ ಕೊಟ್ಟಿದ್ದಾರೆ. ಸುಮಾರು 11 ಗಂಟೆಗೆ ಮನೆಯಿಂದ ಹೊರಗೆ ಬಂದ ಸುದೀಪ್ ಬಹಳ ಸಮಯ ಅಭಿಮಾನಿಗಳ ಜೊತೆ ಆತ್ಮೀಯವಾಗಿ ಕಾಲ ಕಳೆದು ಸಂಭ್ರಮಿಸಿದ್ದಾರೆ. ಇದೀಗ ಈ ಫೋಟೋ ಮತ್ತು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಹರಿದಾಡುತ್ತಿದ್ದು, ಸಖತ್ ವೈರಲ್ (Viral) ಆಗಿದೆ. ಸದ್ಯ ಸುದೀಪ್‌ಗೆ ದೇಶದೆಲ್ಲೆಡೆ ಅಭಿಮಾನಿ ಬಳಗವಿದ್ದು, ದೊಡ್ಡ ದೊಡ್ಡ ಸೆಲಿಬ್ರಿಟಿಗಳು ಸುದೀಪ್ ಅವರ ನಟನೆಗೆ, ಮ್ಯಾನರಿಸಂಗೆ ಮಾರು ಹೋಗಿದ್ದಾರೆ.
Kichcha Sudeep: ಕಬ್ಜ ಚಿತ್ರದ ರೆಟ್ರೋ ಲುಕ್ ರಿವೀಲ್ ಮಾಡಿದ ಅಭಿನಯ ಚಕ್ರವರ್ತಿ
ಅನೂಪ್ ಭಂಡಾರಿ (Anup Bhandari) ಸುದೀಪ್ ಕಾಂಬಿನೇಷನ್‍ನ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಬಿಗ್‌ಬಜೆಟ್ 'ವಿಕ್ರಾಂತ್ ರೋಣ' ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ರಿಲೀಸ್ ಆಗಬೇಕಿತ್ತು. ಕೋವಿಡ್ ಮತ್ತು ಸರ್ಕಾರದ ಕೆಲವು ನಿಯಮಗಳಿಂದಾಗಿ ಎರಡೆರಡು ಬಾರಿ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಮುಂದೂಡಿದ್ದರು. ಈ ಬಾರಿ ಪಕ್ಕಾ ದಿನಾಂಕವನ್ನು ಗೊತ್ತು ಮಾಡಿಕೊಂಡು ಅಖಾಡಕ್ಕೆ ಇಳಿಯಲಿದೆಯಂತೆ ಚಿತ್ರತಂಡ. ಈ ಚಿತ್ರದಲ್ಲಿ ಮೊದಲ ಬಾರಿಗೆ ಫ್ಯಾಂಟಸಿ ಶೈಲಿಯಲ್ಲಿ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. 
'ವಿಕ್ರಾಂತ್ ರೋಣ' ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಈ ಹಿಂದೆ ರೆಸ್ಪಾನ್ಸ್ ಮಾಡಿದ್ದು, ಡಬಲ್ ಧಮಾಕ ನೀಡಿದ್ದರು. ಈ ಬಗ್ಗೆ ಟ್ವೀಟರ್‌ನಲ್ಲಿ (Twitter) 'ವಿಕ್ರಾಂತ್ ರೋಣ ಫ್ಯಾಂಟಸಿ ಶೈಲಿಯಲ್ಲಿ ಮೂಡಿಬರಲಿದ್ದು, 3ಡಿಯಲ್ಲಿ ನೋಡಬಹುದು. 3ಡಿಯಲ್ಲಿ ವಿಕ್ರಾಂತ್ ರೋಣ ನೋಡುವುದಕ್ಕೆ ತುಂಬಾ ಚೆನ್ನಾಗಿದೆ' ಎಂದು ಸುದೀಪ್ ಟ್ವೀಟ್ (Tweet) ಮಾಡಿದ್ದರು. ಮಾತ್ರವಲ್ಲದೇ ರಿಲೀಸ್ ದಿನಾಂಕ ಇನ್ನು ಕೆಲವೇ ಕೆಲವು ದಿನದಲ್ಲಿ ಅನೌನ್ಸ್ ಮಾಡುತ್ತೇವೆ. ಸ್ವಲ್ಪ ಕಾಯಿರಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆಗೆ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಹೇಳಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದರು.
Kichcha Sudeep: ಅಭಿಮಾನಿಗಳಿಗೆ ಡಬಲ್ ಗುಡ್ನ್ಯೂಸ್ ನೀಡಿದ 'ವಿಕ್ರಾಂತ್ ರೋಣ'
ಸದ್ಯದ ಮಾಹಿತಿ ಪ್ರಕಾರ 'ವಿಕ್ರಾಂತ್ ರೋಣ' ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಲೆಕ್ಕಾಚಾರದಲ್ಲಿದೆ. ವಿಶೇಷವಾಗಿ ಸುದೀಪ್ ತಮ್ಮ ಮುಂದಿನ ಚಿತ್ರವನ್ನು ನಿರ್ದೇಶಕ ಅನೂಪ್ ಭಂಡಾರಿ ಜೊತೆಯಲ್ಲೇ ಮಾಡುವುದಾಗಿ ಈ ಹಿಂದೆಯೇ ಹೇಳಿದ್ದರು. ಆ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಸಿಗಲಿದೆಯಂತೆ. 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಿರೂಪ್ ಭಂಡಾರಿ (Nirup Bhandari) ಹಾಗೂ ನೀತಾ ಅಶೋಕ್ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸ್ವತಃ ಸುದೀಪ್ ಅವರೇ ಡಬ್ಬಿಂಗ್ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವಿಲಿಯಮ್ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.
