Kichcha Sudeep: ಅಭಿಮಾನಿಗಳಿಗೆ ಡಬಲ್ ಗುಡ್​ನ್ಯೂಸ್ ನೀಡಿದ 'ವಿಕ್ರಾಂತ್ ರೋಣ'

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌  'ವಿಕ್ರಾಂತ್ ರೋಣ' ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ ಗುಡ್​ನ್ಯೂಸ್ ನೀಡಿದ್ದಾರೆ.

Kichcha Sudeep will do another Film with Vikrant Rona Director Anup Bhandari gvd

'ರಂಗಿತರಂಗ' ಖ್ಯಾತಿಯ ಅನೂಪ್ ಭಂಡಾರಿ (Anup Bhandari) ನಿರ್ದೇಶನದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kichcha Sudeep) ಅವರ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಬಿಗ್‌ಬಜೆಟ್‌  'ವಿಕ್ರಾಂತ್ ರೋಣ' (Vikranth Rona) ಚಿತ್ರದ ಟೀಸರ್, ​ ಪೋಸ್ಟರ್ ಲುಕ್‌ಗಳು ಈಗಾಗಲೇ ಬಿಡುಗಡೆಯಾಗಿ ಸಿನಿರಸಿಕರ ಗಮನ ಸೆಳೆದಿದೆ. ಈ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದೀಗ ಬಾದ್‌ಷಾ, ಮಾಣಿಕ್ಯ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಿಗೆ (Fans) ಗುಡ್​ನ್ಯೂಸ್ ನೀಡಿದ್ದಾರೆ. ಅದು ಒಂದಲ್ಲ, ಡಬಲ್ ಅಪ್​ಡೇಟ್​ ಕೊಡ್ತೀನಿ ಅಂತ ಅನೌನ್ಸ್ ಮಾಡಿ ಮತ್ತಷ್ಟು ಕುತೂಹಲವನ್ನು ಹುಟ್ಟುಹಾಕಿದ್ದಾರೆ. 

ಹೌದು! ಭಾರತದ ಸಿನಿ ಜಗತ್ತಿನ ಮೋಸ್ಟ್ ಎಕ್ಸ್​​ಪೆಕ್ಟೆಡ್ ಚಿತ್ರಗಳಲ್ಲಿ ಒಂದು 'ವಿಕ್ರಾಂತ್ ರೋಣ' ಚಿತ್ರವೂ ಇಂದು. ಪ್ಯಾನ್ ಇಂಡಿಯಾ ಈ ಸಿನಿಮಾ ರಿಲೀಸ್ ಆಗಲಿದ್ದು, ಮೊದಲ ಬಾರಿಗೆ ಫ್ಯಾಂಟಸಿ ಶೈಲಿಯಲ್ಲಿ ಕಿಚ್ಚ ಸುದೀಪ್ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಬೆಳ್ಳಿಪರದೆ ಮೇಲೆ 'ವಿಕ್ರಾಂತ್ ರೋಣ' ಅಬ್ಬರಿಸಬೇಕಿತ್ತು. ಆದರೆ, ಕೋವಿಡ್, ಇನ್ನಿತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಕಾರಣಗಳಿಂದ ಮುಂದೂಡಲ್ಪಟ್ಟಿತ್ತು. 'ವಿಕ್ರಾಂತ್ ರೋಣ' ಈ ಮೊದಲು ನಿರ್ಧರಿಸಿದ್ದಂತೆ ಫೆಬ್ರವರಿಯಲ್ಲಿ ತೆರೆಗೆ ಬರಬೇಕಿತ್ತು. ಆದರೆ ಆಗಲಿಲ್ಲ. ಈಗ ಬಾಕಿ ಉಳಿದಿರುವ ಕೆಲಸವನ್ನು ಚಿತ್ರತಂಡ ಮುಗಿಸುತ್ತಿದ್ದು, ಬಿಗ್ ಸ್ಕ್ರೀನ್​​ ಮೇಲೆ ಬರೋದಕ್ಕೆ ಸಜ್ಜಾಗುತ್ತಿದೆ. 

Vikrant Rona: ಕಿಚ್ಚ ಸುದೀಪ್‌ ಚಿತ್ರಕ್ಕೆ ಭರ್ಜರಿ ಆಫರ್‌ ನೀಡಿದ ಓಟಿಟಿ

'ವಿಕ್ರಾಂತ್ ರೋಣ' ರಿಲೀಸ್ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ರೆಸ್ಪಾನ್ಸ್ ಮಾಡಿದ್ದು, ಡಬಲ್ ಧಮಾಕ ನೀಡಿದ್ದಾರೆ. ಈ ಬಗ್ಗೆ ಟ್ವೀಟರ್‌ನಲ್ಲಿ (Twitter) 'ವಿಕ್ರಾಂತ್ ರೋಣ ಫ್ಯಾಂಟಸಿ ಶೈಲಿಯಲ್ಲಿ ಮೂಡಿಬರಲಿದ್ದು, 3ಡಿಯಲ್ಲಿ ನೋಡಬಹುದು. 3ಡಿಯಲ್ಲಿ ವಿಕ್ರಾಂತ್ ರೋಣ ನೋಡುವುದಕ್ಕೆ ತುಂಬಾ ಚೆನ್ನಾಗಿದೆ' ಎಂದು ಸುದೀಪ್ ಟ್ವೀಟ್ (Tweet) ಮಾಡಿದ್ದಾರೆ. ಮಾತ್ರವಲ್ಲದೇ ರಿಲೀಸ್ ದಿನಾಂಕ ಇನ್ನು ಕೆಲವೇ ಕೆಲವು ದಿನದಲ್ಲಿ ಅನೌನ್ಸ್ ಮಾಡುತ್ತೇವೆ. ಸ್ವಲ್ಪ ಕಾಯಿರಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಜೊತೆಗೆ ತಮ್ಮ ಮುಂದಿನ ಚಿತ್ರವನ್ನು ಅನೌನ್ಸ್ ಮಾಡುವುದಾಗಿ ಹೇಳಿ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದಾರೆ ಕಿಚ್ಚ ಸುದೀಪ್.

Kichcha Sudeep will do another Film with Vikrant Rona Director Anup Bhandari gvd

ಸದ್ಯ 'ವಿಕ್ರಾಂತ್ ರೋಣ' ಕೊನೆಯ ಹಂತದ ಕೆಲಸ ಒಂದು ಕಡೆ ನಡೆಯುತ್ತಿದ್ದರೆ, ಚಿತ್ರದ ನಿರ್ಮಾಪಕ ಜಾಕ್ ಮಂಜು (Jack Manju) ರಿಲೀಸ್​ ವ್ಯವಹಾರವನ್ನು ಆರಂಭಿಸಿದ್ದಾರೆ. ಈಗಾಗಲೇ ವಿದೇಶಿ ಕಂಪನಿಗಳಿಂದ ಸುದೀಪ್ ಚಿತ್ರಕ್ಕೆ ಭಾರಿ ಬೇಡಿಕೆ ಬರುತ್ತಿದ್ದು, ದುಬಾರಿ ಬೆಲೆಗೆ ವಿದೇಶಿ ಡಿಸ್ಟ್ರಿಬ್ಯೂಶನ್ ರೈಟ್ ಮಾರಾಟವಾಗುವ ಸಾಧ್ಯತೆ ಇದೆಯಂತೆ. ಸದ್ಯದ ಮಾಹಿತಿ ಪ್ರಕಾರ 'ವಿಕ್ರಾಂತ್ ರೋಣ' ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಲೆಕ್ಕಾಚಾರದಲ್ಲಿದೆ. ವಿಶೇಷವಾಗಿ ಸುದೀಪ್ ತಮ್ಮ ಮುಂದಿನ ಚಿತ್ರವನ್ನು ನಿರ್ದೇಶಕ ಅನೂಪ್ ಭಂಡಾರಿ ಜೊತೆಯಲ್ಲೇ ಮಾಡುವುದಾಗಿ ಈ ಹಿಂದೆಯೇ ಹೇಳಿದ್ದರು. ಆ ಚಿತ್ರದ​​ ಕುರಿತು ಹೆಚ್ಚಿನ ಮಾಹಿತಿ​ ಶೀಘ್ರದಲ್ಲೇ ಸಿಗಲಿದೆಯಂತೆ.

Kichcha Sudeep: ಕಬ್ಜ ಚಿತ್ರದ ರೆಟ್ರೋ​ ಲುಕ್‌ ರಿವೀಲ್​ ಮಾಡಿದ ಅಭಿನಯ ಚಕ್ರವರ್ತಿ

ಇನ್ನು 'ವಿಕ್ರಾಂತ್ ರೋಣ' ಚಿತ್ರದಲ್ಲಿ ನಿರೂಪ್‌ ಭಂಡಾರಿ (Nirup Bhandari) ಹಾಗೂ ನೀತಾ ಅಶೋಕ್‌ (Neetha Ashok) ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್‌ನಲ್ಲಿ ಸ್ವತಃ ಸುದೀಪ್‌ ಅವರೇ ಡಬ್ಬಿಂಗ್‌ ಮಾಡಿದ್ದಾರೆ. ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ (Jacqueline Fernandez) 'ಗಡಂಗ್ ರಕ್ಕಮ್ಮ' ಪಾತ್ರದಲ್ಲಿ ಕಿಚ್ಚನ ಜೊತೆ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜೊತೆಗೆ ಲವ್ ಮಾಕ್ಟೇಲ್ (Love Mocktail) ಖ್ಯಾತಿಯ ನಟಿ ಮಿಲನಾ ನಾಗರಾಜ್ (Milana Nagaraj) ಅವರು ಚಿತ್ರದ ಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕ ಈ ಚಿತ್ರಕ್ಕಿದೆ.
 

Latest Videos
Follow Us:
Download App:
  • android
  • ios