Asianet Suvarna News Asianet Suvarna News

ಸುದೀಪ್- ವಿಶ್ವನಾಥನ್ ಆನಂದ್ ಚೆಸ್ ಆಟದಿಂದ ರು.10 ಲಕ್ಷ ಸಂಗ್ರಹ!

ವಿಶ್ವ ಚಾಂಪಿಯನ್ ವಿಶ್ವನಾಥ್ ಆನಂದ್ ಮತ್ತು ಸುದೀಪ್ ಚೆಸ್ ಆಡಿದ್ದಾರೆ. ಚೆಸ್.ಕಾಂ ಸಂಸ್ಥೆ ಈ ಸೆಲೆಬ್ರಿಟಿ ಚೆಸ್ ಪಂದ್ಯ ಆಯೋಜಿಸಿತ್ತು. ಇದರಿಂದ 10 ಲಕ್ಷ ರೂ. ಸಂಗ್ರಹವಾಗಿದೆ.

Actor Kiccha Sudeep and Viswanathan Anand Chess match collects 10 Lakhs for covid19 relief work vcs
Author
Bangalore, First Published Jun 15, 2021, 3:35 PM IST

ಚೆಸ್ ಆಟಕ್ಕೆ ಸಂಬಂಧಿಸಿದ ಸಮುದಾಯಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಆಯೋಜಿಸಿದ್ದ ಚೆಕ್‌ಮೆಟ್ ಕೋವಿಡ್ ಎಂಬ ವಿಶೇಷ ಕಾರ್ಯಕ್ರಮದಲ್ಲಿ ದಕ್ಷಿಣದ ಸ್ಟಾರ್ ಸೆಲೆಬ್ರಿಟಿಯಾಗಿ ನಟ ಸುದೀಪ್ ಅವರು ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರ ಜತೆಗೆ ಆನ್‌ಲೈನ್‌ನಲ್ಲಿ ಚೆಸ್ ಆಡಿದರು. ಈ ಸೆಲೆಬ್ರಿಟಿ ಚೆಸ್‌ನಿಂದ 10 ಲಕ್ಷ ರುಪಾಯಿ ದೇಣಿಗೆ ಸಂಗ್ರಹವಾಗಿದೆ.

ಚೆಸ್ ಪಂದ್ಯದಲ್ಲಿ ಸೆಲೆಬ್ರೆಟಿಗಳ ಮೋಡಿ; ಸುದೀಪ್ ಆಟಕ್ಕೆ ದಿಗ್ಗಜ ವಿಶ್ವನಾಥನ್ ಆನಂದ್ ಮೆಚ್ಚುಗೆ! 

ಈ ಆಟದ ಕುರಿತು ಸುದೀಪ್, ಇದು ಒಳ್ಳೆಯ ಉದ್ದೇಶಕ್ಕೆ ಆಯೋಜಿಸಿದ್ದ ಗೇಮ್. ಆ ಕಾರಣಕ್ಕೆ ನಾನೂ ಕೂಡ ಇದರ ಭಾಗಿ ಆಗಿದ್ದೆ. ಚೆಸ್ ಮಾಸ್ಟರ್ ವಿಶ್ವನಾಥ್ ಆನಂದ್ ಜತೆಗೆ ಆಡುವ ಅವಕಾಶ ಸಿಕ್ಕಿದ್ದೇ ಒಂದು ಖುಷಿ. ಅವರು ಚೆಸ್ ಅಖಾಡದ ದಿಗ್ಗಜ. ನನಗೆ ಆನ್‌ಲೈನ್ ಚೆಸ್ ಆಟದ ಬಗ್ಗೆ ಮಾಹಿತಿ ಇರಲಿಲ್ಲ. ಹೀಗಾಗಿ ಸೋಲಿನ ಭಯವೂ ಇರಲಿಲ್ಲ. ಯಾಕೆಂದರೆ ನಾನು ಆಡಿದ್ದು ಚೆಸ್ ಮಾಸ್ಟರ್ ಜತೆಗೆ. ಈ ಅನುಭವ ಜೀವನ ಪೂರ್ತಿ ನೆನಪಿನಲ್ಲಿ ಇರುತ್ತದೆ ಎಂದಿದ್ದಾರೆ.

Actor Kiccha Sudeep and Viswanathan Anand Chess match collects 10 Lakhs for covid19 relief work vcs

ಇದೇ ರೀತಿ ಅಮೀರ್ ಖಾನ್, ರಿತೇಶ್ ದೇಶ್‌ಮುಖ್, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಮುಂತಾದವರ ಜತೆಗೆ 30 ನಿಮಿಷಗಳ ಕಾಲ ಟೈಮ್ ಔಟ್‌ನಲ್ಲಿ ಏಕಕಾಲದಲ್ಲಿ ವಿಶ್ವನಾಥ್ ಆನಂದ್ ಚೆಸ್ ಆಡಿದರು.

Follow Us:
Download App:
  • android
  • ios