ಚೆಸ್ ಪಂದ್ಯದಲ್ಲಿ ಸೆಲೆಬ್ರೆಟಿಗಳ ಮೋಡಿ; ಸುದೀಪ್ ಆಟಕ್ಕೆ ದಿಗ್ಗಜ ವಿಶ್ವನಾಥನ್ ಆನಂದ್ ಮೆಚ್ಚುಗೆ!
- ಕೊರೋನಾ ಸಂಕಷ್ಟಕ್ಕೆ ನೆರವಾಗಲು ಚೆಸ್ ಪ್ರದರ್ಶನ ಪಂದ್ಯ
- 5ಬಾರಿ ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಜೊತೆ ಸೆಲೆಬ್ರೆಟಿಗಳ ಚೆಸ್
- ಸುದೀಪ ಆಟಕ್ಕೆ ಮನಸೋತ ಚೆಸ್ ದಿಗ್ಗಜ
ನವದೆಹಲಿ(ಜೂ.13): ಬಹುನಿರೀಕ್ಷಿತ ಸೆಲೆಬ್ರೆಟಿಗಳು ಹಾಗೂ ಚೆಸ್ ದಿಗ್ಗಜ ವಿಶ್ವನಾಥನ್ ಆನಂದ್ ಜೊತೆಗಿನ ಪ್ರದರ್ಶನ ಚೆಸ್ ಪಂದ್ಯ ಅತ್ಯಂತ ರೋಚವಾಗಿ ಅಂತ್ಯಗೊಂಡಿದೆ. ಕಿಚ್ಚ ಸುದೀಪ್, ಅಮೀರ್ ಖಾನ್, ರಿತೇಶ್ ದೇಶ್‌ಮುಖ, ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸೇರಿದಂತೆ ಸೆಲೆಬ್ರೆಟಿಗಳ ದಂಡೇ ಈ ಚೆಸ್ ಟೂರ್ನಿಯಲ್ಲಿ ಪಾಲ್ಗೊಂಡಿತ್ತು. ನಿರೀಕ್ಷೆಯಂತೆ ವಿಶ್ವನಾಥನ್ ಆನಂದ್ ಮೇಲುಗೈ ಸಾದಿಸಿದ್ದಾರೆ. ಆದರೆ ಈ ಹೋರಾಟದಲ್ಲಿ ಕಿಚ್ಚ ಸುದೀಪ್ ಆಟವನ್ನು ಆನಂದ್ ಮೆಚ್ಚಿಕೊಂಡಿದ್ದಾರೆ.
ಸಂಚಾರಿ ವಿಜಯ್‌ಗೆ ನೆರವಾದ ಕಿಚ್ಚ ಸುದೀಪ್, ಆಪರೇಶನ್‌ಗೆ ವ್ಯವಸ್ಥೆ
ಅಕ್ಷಯ ಪಾತ್ರ ಅಭಿಯಾನದಡಿ ಕೋವಿಡ್ ಸಂಕಷ್ಟಕ್ಕೆ ನರೆವಾಗಲು ಈ ಚೆಸ್ ಟೂರ್ನಿ ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಕೊರೋನಾ ಸಂಕಷ್ಟದಲ್ಲಿದ್ದವರಿಗೆ ಆರ್ಥಿಕ ನೆರವು ನೀಡುವ ಮಹತ್ ಕಾರ್ಯ ಈ ಚೆಸ್ ಟೂರ್ನಿಯ ಹಿಂದಿನ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಕಿಚ್ಚ ಸುದೀಪ್, ರಿತೇಶ್ ದೇಶ್‌ಮುಖ್, ಕ್ರಿಕೆಟಿಗ ಯಜುವೇಂದ್ರ ಚಹಾಲ್, ಉದ್ಯಮಿ ನಿಖಿಲ್ ಹಾಗೂ ವಿಶ್ವನಾಥನ್ ಆನಂದ್ ಚೆಸ್ ಹೋರಾಟ ನಡೆಸಿದರು.
ಚಹಾಲ್, ರಿತೇಶ್, ನಿಖಿಲ್ ಆಟಕ್ಕಿಂತ ಕಿಚ್ಚ ಸುದೀಪ್, ವಿಶ್ವನಾಥನ್ ಆನಂದ್‌ಗೆ ಪ್ರಬಲ ಪೈಪೋಟಿ ನೀಡಿದರು. ಸುದೀಪ್ ಆಟದ ಕುರಿತು ಆನಂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಉತ್ತಮ ಆಟವಾಡಿದ್ದಾರೆ. ಎಂಡಿಂಗ್ ವರೆಗೆ ಸುದೀಪ್ ಅತ್ಯುತ್ತಮ ಆಟವಾಡಿದ್ದಾರೆ. ಎ6 ಪಾನ್ ತೆಗೆದಿದ್ದಾರೆ. ಇಂದು ನನಗೆ ಪ್ರಬಲ ಪೈಪೋಟಿ ಎದುರಾಗಿತ್ತು. ಸುದೀಪ್ ಸೇರಿದಂತೆ ಎಲ್ಲರೂ ಉತ್ತಮ ಆಟವಾಡಿದ್ದಾರೆ ಎಂದು ವಿಶ್ವನಾಥನ್ ಆನಂದ್ ಹೇಳಿದ್ದಾರೆ.
ವಿಶ್ವನಾಥ್ ಆನಂದ್‌ಗೆ ಪ್ರಬಲ ಪೈಪೋಟಿ ನೀಡಿದ ಸುದೀಪ್‌ಗೆ ನಿರೂಪಕ ಪ್ರಶ್ನೆಯೊಂದನ್ನು ಕೇಳಿದ್ದಾರೆ.ದಿಗ್ಗಜನಿಗೆ ಪೈಪೋಟಿ ನೀಡಲು ಹೇಗೆ ಸಾಧ್ಯವಾಯಿತು. ನೀವು ಅತ್ಯುತ್ತಮ ಚೆಸ್ ಆಟಗಾರ, ಗೇಮ್ ಪ್ಲಾನ್ ಏನು? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಸುದೀಪ್, ಚೆಸ್ ಟೆಕ್ನಿಕಲ್ ಬಗ್ಗೆ ನನಗೆ ತಿಳಿದಿಲ್ಲ. ನಾನು ಕ್ರಿಕೆಟ್ ಆಡುತ್ತೇನೆ. ಕ್ರಿಕೆಟ್ ಆಟಕ್ಕೂ ಮೊದಲು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ, ಟಾಸ್ ಗೆದ್ದರೆ ಬ್ಯಾಟ್ ಆಯ್ಕೆ ಉತ್ತಮ. ಕಾರಣ ಪಿಚ್ ಬ್ಯಾಟಿಂಗ್‌ಗೆ ಸಹಕರಿಸುತ್ತೆ. ಬಳಿಕ ಹಮಾಮಾನ ಬೌಲಿಂಗ್‌ಗೆ ಸಹಕರಿಸುತ್ತೆ ಎಂದು ತಜ್ಞರು ಹೇಳುತ್ತಾರೆ. ಆದರೆ ನನಗೆ ಇವೆಲ್ಲ ತಿಳಿದಿಲ್ಲ. ಕ್ರಿಕೆಟ್ ಆಡಬೇಕು ಅಷ್ಟೆ, ಇಲ್ಲೂ ಕೂಡ ಹಾಗೆ, ಎ6, ಎ3 ಟೆಕ್ನಿಕಲ್ ಅರ್ಥವಾಗೋದಿಲ್ಲ ಎಂದಿದ್ದಾರೆ.
ದಿಗ್ಗಜ ಆನಂದ್ ಜತೆ ಕಿಚ್ಚ ಸುದೀಪ್, ಚಹಲ್ ಚೆಸ್ ಸ್ಪರ್ಧೆ..!.
ದಿಗ್ಗಜನ ಮುಂದೆ ಆಡುವಾಗ ನಮ್ಮ ಆಟವೂ ಸುಧಾರಣೆಯಾಗುತ್ತದೆ. ನನ್ನ ಮೊದಲೆರಡು ನಡೆ ಆನಂದ್ ಅವರ ನಡೆಯನ್ನು ಅನಸರಿಸಿತ್ತು. ಜೊತೆಗೆ ದಿಗ್ಗಜನ ಮುಂದೆ ಆಡುತ್ತಿರುವ ಕಾರಣ ಯಾವುದೇ ಆತಂಕವಿಲ್ಲ. ಸೋಲುತ್ತೇನೆ ಎಂಬ ಒತ್ತಡವಿಲ್ಲ. ದಿಗ್ಗಜನ ಜೊತೆ ಆಡಿದ ಹೆಮ್ಮೆ ಇದೆ. ಅತ್ಯಂತ ಸ್ಮರಣೀಯ ನೆನಪು ಸದಾ ಇರುತ್ತೆ ಎಂದು ಸುದೀಪ್ ಹೇಳಿದ್ದಾರೆ.