ಸ್ಯಾಂಡಲ್‌ವುಡ್ ನಟ ದಿಗಂತ್ (Diganth) ಗೋವಾದಲ್ಲಿ (Goa) ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಿಂಗತ್ ಸ್ಪೈನಲ್ ಕಾರ್ಡ್‌ಗೆ ಬಲವಾದ ಏಟು ಬಿದ್ದಿದ್ದು ಅಪರೇಷನ್ ಮಾಡಬೇಕೆಂದು ವೈದ್ಯರ ತಿಳಿಸಿದ್ದಾರೆ. 

ಸ್ಯಾಂಡಲ್‌ವುಡ್ ನಟ ದಿಗಂತ್ (Diganth) ಗೋವಾದಲ್ಲಿ (Goa) ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕುತ್ತಿಗೆ ಮತ್ತು ಬೆನ್ನಿಗೆ ತೀವ್ರ ಪೆಟ್ಟು ಮಾಡಿಕೊಂಡಿದ್ದು ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿನ್ನೆ ಮಧ್ಯಾಹ್ನ ಈ ಘಟನೆ ಸಂಭಿವಿಸಿದೆ. ತಕ್ಷಣ ಅವರನ್ನು ಗೋವಾ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಇಂದು (ಜೂನ್ 21) ಹೆಚ್ಚಿನ ಚಿಕಿತ್ಸೆಗಾಗಿ ದಿಗಂತ್ ಅವರನ್ನು ಏರ್ ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆತಂದಿದ್ದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಸದ್ಯ ಕೇಳಿಬಂದಿರುವ ಮಾಹಿತಿ ಪ್ರಕಾರ ದಿಂಗತ್ ಸ್ಪೈನಲ್ ಕಾರ್ಡ್‌ಗೆ ಬಲವಾದ ಏಟು ಬಿದ್ದಿದ್ದು ಅಪರೇಷನ್ ಮಾಡಬೇಕೆಂದು ವೈದ್ಯರ ತಿಳಿಸಿದ್ದಾರೆ. ಗೋವಾ ಆಸ್ಪತ್ರೆಯ ವೈದ್ಯರು ಆಪರೇಷನ್ ಮಾಡಬೇಕೆಂದು ಸೂಚಿಸಿದ್ದರು. ಆದರೆ ಅಲ್ಲಿ ಬೇಕಾದ ಸೌಲಭ್ಯ ಇಲ್ಲದ ಕಾರಣ ಬೆಂಗಳೂರಿಗೆ ಕರೆತರಲಾಗಿದೆ. ಇಂದು ಸಂಜೆ ದಿಗಂತ್ ಅವರಿಗೆ ಮಣಿಪಾಲ್ ಆಸ್ಪತ್ರೆಯ ವೈದ್ಯರು ಆಪರೇಷನ್ ಮಾಡುತ್ತಿದ್ದಾರೆ. ಈಗಾಗಲೇ ಆಪರೇಷನ್‌ಗೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿದ್ಯಾಧರ್ ವೈದ್ಯರ ತಂಡದಿಂದ ದಿಗಂತ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. 

ದಿಂಗತ್ ಜೊತೆ ಆಸ್ಪತ್ರೆಯಲ್ಲಿ ಕುಟುಂಬದವರು ಇದ್ದಾರೆ. ಪತ್ನಿ ಐಂದ್ರಿತಾ ರೇ ಹಾಗೂ ಅವರ ತಂದೆ-ತಾಯಿ ಮತ್ತು ದಿಂಗತ್ ತಂದೆ ತಾಯಿ ಆಸ್ಪತ್ರೆಯಲ್ಲಿದ್ದಾರೆ. ಇನ್ನು ನಿರ್ದೇಶಕ ಯೋಗರಾಜ್ ಭಟ್ ಆಸ್ಪತ್ರೆಗೆ ಭೇಟಿ ನೀಡಿ ದಿಗಂತ್ ಆರೋಗ್ಯ ವಿಚಾರಿಸಿದ್ದಾರೆ. 

 ಗೋವಾ ಸಮುದ್ರ ತೀರದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗೆ ದಿಗಂತ್ ಆಯತಪ್ಪಿ ಬಿದ್ದು ಕುತ್ತಿಗೆ ಮತ್ತು ಬೆನ್ನಿಗೆ ಬಲವಾಗಿ ಪೆಟ್ಟು ಬಿದ್ದಿದೆ. ದಿಂಗತ್ ಪತ್ನಿ ಐಂದ್ರಿತಾ (Aindrita ray) ಜೊತೆ ಇತ್ತೀಚಿಗಷ್ಟೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಸದಾ ಟ್ರಿಪ್, ಸೈಕ್ಲಿಂಗ್ ಅಂತ ದಿಂಗತ್ ದಂಪತಿ ಓಡಾಡುತ್ತಿದ್ದರು. ಈ ಬಾರಿ ಗೋವಾಗೆ ವೀಕೆಂಡ್ ಟ್ರಿಪ್ ಹೋಗಿದ್ದರು. ಈ ವೇಳೆ ದಿಗಂತ್ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ. 

ಈ ಬಗ್ಗೆ ದಿಗಂತ್ ತಾಯಿ ಮಲ್ಲಿಕಾ ಮಾತನಾಡಿ, 'ದಿಗಂತ್ ಪತ್ನಿ ಜೊತೆ ಗೋವಾಗೆ ತೆರಳಿದ್ದರು. ನಿನ್ನೆ ಈ ಘಟನೆ ಸಂಭವಿಸಿದೆ. ದಿಗಂತ್ ಜೊತೆ ಮಾತನಾಡಿದೆ. ಕುತ್ತಿಗೆಗೆ ಏಟಾಗಿದೆ ಏನು ಆಗಿಲ್ಲ ಗಾಬರಿ ಆಗಬೇಡ ಅಂತ ಹೇಳಿದ. ಇವತ್ತು ಗೋವಾದಿಂದ ಏರ್ ಲಿಫ್ಟ್ ಮಾಡುತ್ತಿದ್ದೇವೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗುತ್ತದೆ' ಎಂದು ಹೇಳಿದರು. 

ಸ್ಟಂಟ್ ಮಾಡಲು ಹೋಗಿ ದಿಗಂತ್ ಕುತ್ತಿಗೆಗೆ ಏಟು; ಬೆಂಗಳೂರಿಗೆ ಏರ್‌ಲಿಫ್ಟ್

ದಿಗಂತ್ ಸಿನಿಮಾ ವಿಚಾರಕ್ಕೆ ಬರುವುದಾರೆ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (kshamisi nimma katheyalli hanavilla) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ದಿಗಂತ್ ಬಳಿ ಮಾರಿಗೋಲ್ಡ್ (Marigold), ಎಡಗೈ ಅಪಘಾತಕ್ಕೆ ಕಾರಣ, ಗಾಲಿಪಟ-2 (Galipata 2) ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಿಸ್ ಕ್ಯಾಲಿಪೋರ್ನಿಯಾ (Miss California) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನದಿಗಂತ್ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೀರಾ ಮಾದವ ರಾಘವ, ಮಸ್ತ್ ಮಜಾ ಮಾಡಿ, ಮನಸಾರೆ, ಮಳೆಬಿಲ್ಲೆ, ಬಿಸಿಲೆ, ಪಂಚರಂಗಿ, ಬರ್ಫಿ, ಚೌಕ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತುಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಮಿಂಚಿದ್ದಾರೆ. ವೆಡ್ಡಿಂಗ್ ಪುಲಾವ್ ಸಿನಿಮಾ ಮೂಲಕ ದಿಗಂತ್ ಬಾಲಿವುಡ್‌ಗೆ ಹಾರಿದ್ದರು. ಆದರೆ ಅಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದರು. ಬಳಿಕ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಬ್ಯುಸಿಯಾದರು. 

Diganth In Murdeshwar : ನೇತ್ರಾಣಿ ಸಮುದ್ರದಾಳದಲ್ಲಿ ವಿಹರಿಸಿದ ದಿಗಂತ್!

ದಿಗಂತ್‌ಗೆ ಈಗಾಗಲೇ ಬಲಭಾಗದ ಕಣ್ಣಿಗೆ ಬಲವಾದ ಏಟು ಬಿದ್ದಿದ್ದು 30ರಷ್ಟು ಕಣ್ಣು ಕಾಣಿಸುವುದಿಲ್ಲ. ದಿಗಂತ್ ಹಿಂದಿಯ ವೆಡ್ಡಿಂಗ್ ಪುಲಾವ್ ಸಿನಿಮಾದ ಚಿತ್ರೀಕರಣ ವೇಳೆ ಕಣ್ಣಿಗೆ ಏಟು ಮಾಡಿಕೊಂಡಿದ್ದರು. ಈ ಸಿನಿಮಾ ಬಳಿಕ ದಿಗಂತ್ ಮತ್ತೆ ಬಾಲಿವುಡ್ ಕಡೆ ಮುಖಮಾಡಿಲ್ಲ. ಇದೀಗ ಸ್ಪೈನಲ್ ಕಾರ್ಡ್‌ಗೆ ಬಲವಾದ ಏಟು ಮಾಡಿಕೊಂಡಿದ್ದಾರೆ.