Actor Darshan Thoogudeepa: ನಟ ದರ್ಶನ್‌ ತೂಗುದೀಪ ಜನ್ಮದಿನದ ಪ್ರಯುಕ್ತ ಅವರ ಮನೆ ಮುಂದೆ ಅಭಿಮಾನಿಗಳು ಸೇರಿದ್ದಾರೆ. ಅಷ್ಟೇ ಅಲ್ಲದೆ ಆಂಟಿಯೋರ್ವರು ಬಾಯಿಗೆ ಬಂದ ಹಾಗೆ ಬೈದು, ಪೊಲೀಸರಿಗೆ ಅವಾಜ್‌ ಹಾಕಿ ಹೋಗಿದ್ದಾರೆ. 

ನಟ ದರ್ಶನ್‌ ಅವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಅವರು ಪರಪ್ಪನ ಅಗ್ರಹಾರದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಆದರೆ ಅವರ ಮನೆಯ ಮುಂದೆ ಅಭಿಮಾನಿಗಳು ಬಂದು ಕೂಗಾಟ ಕೂಡ ಮಾಡಿದರು.

Add Asianetnews Kannada as a Preferred SourcegooglePreferred

ಅದ್ದೂರಿ ಹಬ್ಬ ಆಚರಣೆ

ಪ್ರತಿ ವರ್ಷ ಅವರ ಮನೆಯ ಮುಂದೆ ಅಭಿಮಾನಿ ಬಳಗ ಸೇರುವುದು, ಮಧ್ಯರಾತ್ರಿಯಿಂದ ಹಬ್ಬ ಮುಗಿಯೋವರೆಗೂ ದರ್ಶನ್‌ ಅವರು ಅಭಿಮಾನಿಗಳನ್ನು ಭೇಟಿ ಮಾಡುತ್ತಿದ್ದರು, ಪಕ್ಕದಲ್ಲೇ ಊಟದ ವ್ಯವಸ್ಥೆ ಕೂಡ ಇರುತ್ತಿತ್ತು.ಪ್ರತಿ ವರ್ಷ ಮನೆಯ ಮುಂದೆ ಕಮ್ಮಿ ಅಂದ್ರೂ ಸಾವಿರಾರು ಅಭಿಮಾನಿಗಳು ಬರುತ್ತಿದ್ದರು, ಅವರ ಮಧ್ಯೆ ದರ್ಶನ್‌ ಅವರು ಅದ್ಧೂರಿಯಾಗಿ ಹಬ್ಬ ಆಚರಿಸಿಕೊಳ್ಳುತ್ತಿದ್ದರು. ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಕ್ರೇಜ್‌ ಇರುವ ನಟ ಅಂದ್ರೆ ಅದು ಮಾತ್ರ.

ಯಾರೂ ಮನೆ ಬಳಿ ಬರಬೇಡಿ ಅಂದ್ರು

ಆರ್‌ ಆರ್‌ ನಗರದಲ್ಲಿ ದರ್ಶನ್‌ ಮನೆಯಿದೆ. ಅಲ್ಲಿ ಯಾರೂ ಕೂಡ ವಾಸ ಮಾಡೋದಿಲ್ಲ. ದರ್ಶನ್‌ ಪತ್ನಿ ಅವರು ಹೊಸಕೆರೆಹಳ್ಳಿಯಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ವಾಸ ಮಾಡುತ್ತಾರೆ. ಇನ್ನು ಆರ್‌ ಆರ್‌ ನಗರದ ಮನೆಗೆ ಯಾರೂ ಬರಬೇಡಿ ಅಂದ್ರೂ ಕೇಳದೆ, ಕೆಲವರು ಬಂದು ಗಲಾಟೆ ಮಾಡಿದ್ದಾರೆ. ಪೊಲೀಸರು ಹಾಗೂ ಅಭಿಮಾನಿಗಳ ಮಧ್ಯೆ ಜಟಾಪಟಿ ಕೂಡ ನಡೆದಿದೆ.

ಆಂಟಿ ಅವಾಚ್ಯ ಶಬ್ದ ಬೈದ್ರು

ಅಂದಹಾಗೆ ಆಂಟಿಯೊಬ್ಬರು ದರ್ಶನ್‌ ಮನೆಯ ಪ್ಲೇಟ್‌ಬೋರ್ಡ್‌ಗೆ ನಮಿಸಿದ್ದಾರೆ. ಅಷ್ಟೇ ಅಲ್ಲದೆ ಪೊಲೀಸರಿಗೆ ಅವಾಜ್‌ ಹಾಕಿ ಹೋಗಿದ್ದಾರೆ. ಇವರ ಮನೆಯ ಅನ್ನ ತಿಂದೋರು ಹೀಗೆ ಮಾಡಿದ್ರೆ ಯಕ್ಕುಟ್ಟೋಗ್ತೀರಾ, ಹಾಳಾಗಿ ಹೋಗ್ತೀರಾ ಎಂದು ಅವಾಚ್ಯ ಶಬ್ದಗಳನ್ನು ಬಳಸಿ ಬೈದಿದ್ದಾರೆ. ಪೊಲೀಸರು ಹೋಗಿ ಎಂದಾಗ ಅವರಿಗೂ ಕೂಡ ನಿಂದಿಸಿ ಹೋಗಿದ್ದಾರೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಅಭಿಮಾನಿ ಮೇಲೆ ಹಲ್ಲೆ

ಇನ್ನು ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್‌, ಸಹೋದರ ದಿನಕರ್, ಸ್ನೇಹಿತರಾದ ನಟ ಧನ್ವೀರ್‌ ಗೌಡ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಕೂಡ ಅವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿ, ಅಲ್ಲಿಯೇ ಹಬ್ಬವನ್ನು ಆಚರಿಸಿದ್ದಾರೆ. ದರ್ಶನ್ ಜನ್ಮದಿನದ ಪ್ರಯುಕ್ತ, ಅವರ ಮನೆ ಬಳಿ ಬಂದಿದ್ದ ಅಭಿಮಾನಿಯೊಬ್ಬನಿಗೆ ರಾಜರಾಜೇಶ್ವರಿ ನಗರ ಠಾಣೆ ಎಎಸ್‌ಐ ಕಪಾಳ ಮೋಕ್ಷ ಮಾಡಿದರು. ಈ ಹಲ್ಲೆ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ನಟ ದರ್ಶನ್‌ ನಿವಾಸ ಮುಂದೆ ಕೆಲ ಅಭಿಮಾನಿಗಳು ಬಂದಿದ್ದರು. ಈ ವೇಳೆ ತಮ್ಮ ನೆಚ್ಚಿನ ಹೀರೋ ಮನೆಯ ಬಾಗಿಲಿಗೆ ಹಾರ ಹಾಕಲು ನೋಡಿದ್ದಾರೆ. ಆಗ ಪೊಲೀಸರು ತಡೆಹಿಡಿದಿದ್ದಾರೆ. ಈ ವೇಳೆ ಪೊಲೀಸರ ಜತೆ ದರ್ಶನ್‌ ಫ್ಯಾನ್ ನಡುವೆ ಮಾತಿನ ಚಕಮಕಿ ಆಗಿದೆ.ಆಗ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌, ಆ ಫ್ಯಾನ್ ಕಪಾಳಕ್ಕೆ ಹೊಡೆದಿದ್ದಾರೆ‌ ಎನ್ನಲಾಗಿದೆ.

View post on Instagram