- ಇದು ದರ್ಶನ್‌ ಖಡಕ್‌ ಮಾತು. ಈ ವರ್ಷ ‘ಯಜಮಾನ’ ಹಿಟ್‌ ಆಯಿತು. ‘ಕುರುಕ್ಷೇತ್ರ’ ಚಿತ್ರವೂ ಕೂಡ ಶತ ದಿನೋತ್ಸವ ಕಂಡಿತು. ಈಗ ‘ಒಡೆಯ’ ಮೂಲಕ ಹ್ಯಾಟ್ರಿಕ್‌ ಬಾರಿಸಬಹುದಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ದರ್ಶನ್‌ ಕೊಟ್ಟಪ್ರತಿಕ್ರಿಯೆ ಹೀಗಿತ್ತು.

ಶಿವಣ್ಣ ಲಾಂಗ್ ಹಿಡಿದ್ರೆ ಬೆನ್ನಿಗೆ ನಿಲ್ತೇನೆ, ದರ್ಶನ್-ಶಿವಣ್ಣ ಜೋಡಿಯಾಗಿ ಹೊಸ ಚಿತ್ರ!

‘ನನಗೆ ಗೊತ್ತಿರುವಂತೆ ಕನ್ನಡ ಚಿತ್ರರಂಗಕ್ಕೆ ಶಿವಣ್ಣ ಒಬ್ಬರೇ ಹ್ಯಾಟ್ರಿಕ್‌ ಹೀರೋ. ಅವರಿಗೆ ನನ್ನ ಕಂಪೇರ್‌ ಮಾಡಬೇಡಿ. ‘ಒಡೆಯ’ ಸಿನಿಮಾದ ಬಗ್ಗೆ ನನಗೂ ಕುತೂಹಲವಿದೆ. ಹ್ಯಾಟ್ರಿಕ್‌- ಗೀಟ್ರಿಕ್‌ ಎಲ್ಲವೂ ಪ್ರೇಕ್ಷಕರಿಗೆ ಬಿಟ್ಟಿದ್ದು. ಅವರಿಗೆ ಮನರಂಜನೆ ನೀಡುವಂತಹ ಸಿನಿಮಾ ಕೊಡಬೇಕೆನ್ನುವುದಷ್ಟೇ ನಮ್ಮ ಕೆಲಸ’ ಎನ್ನುವುದು ದರ್ಶನ್‌ ಕೊಟ್ಟಉತ್ತರ.

ಪ್ರೊಡಕ್ಷನ್ ಬಾಯ್ ಮದುವೆಯಲ್ಲಿ ಡಿ-ಬಾಸ್ ಕಂಡಿದ್ದು ಹೀಗೆ!

ಡಿಸೆಂಬರ್‌ 12ಕ್ಕೆ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಒಡೆಯ’ ತೆರೆ ಕಾಣುತ್ತಿದೆ. ಅಲ್ಲಿಗೆ 2019ಕ್ಕೆ ದರ್ಶನ್‌ ಅಭಿನಯದ ಮೂರು ಚಿತ್ರಗಳು ತೆರೆಕಂಡಂತಾಗುತ್ತಿದೆ. ಭಾನುವಾರ ನಗರದಲ್ಲಿ ನಡೆದ ಒಡೆಯ ಚಿತ್ರದ ಟ್ರೇಲರ್‌ ಲಾಂಚ್‌ ಸಂದರ್ಭ ಮಾತಿಗೆ ಸಿಕ್ಕಾಗ ಮಾಧ್ಯಮದವರ ಪ್ರಶ್ನೆಗೆ ದರ್ಶನ್‌ ಎಂದಿನಂತೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು.