ಸ್ಯಾಂಡಲ್‌ವುಡ್ ಮಾಸ್ ಹೀರೋ ದರ್ಶನ್ ತನ್ನ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡುತ್ತಿರುವ ಹುಡುಗನ ಮದುವೆಯಲ್ಲಿ ಭಾಗಿಯಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದ್ರೆ ಟ್ರೆಂಡ್ ಕ್ರಿಯೇಟರ್ ಅಂತಾನೇ ಹೇಳಬಹುದು. ತನ್ನ ನಡವಳಿಕೆ, ಮಾತನಾಡುವ ಶೈಲಿ, ವಸ್ತ್ರ ವಿನ್ಯಾಸ ಎಲ್ಲವೂ ವಿಭಿನ್ನ ಅದರಲ್ಲೂ ಅಭಿಮಾನಿಗಳನ್ನು ದೇವರೆಂದೇ ನೋಡುವ ನಟ. ಯಾರಿಗಾದ್ರೂ ಸಹಾಯ ಮಾಡಬೇಕು ಅನ್ನುವ ಸಂದರ್ಭ ಬಂದರೆ ಮುಂದೆ ನಿಲ್ಲುತ್ತಾರೆ.
ಸ್ಯಾಂಡಲ್‌ವುಡ್‌ಗೆ ಸಿಡಿಲಾಗಿ ಬಂದ 'ಒಡೆಯ'ನಿಗೆ ದಾರಿಬಿಡಿ; ಟೈಟಲ್ ಟ್ರ್ಯಾಕ್ ಸೂಪರ್!
ಚಿತ್ರರಂಗಕ್ಕೆ ನಟನಾಗಿ ಕಾಲಿಡುವ ಮುನ್ನ ಟೆಕ್ನಿಕಲ್ ಬಾಯ್ ಆಗಿ ಬಂದವರು. ಯಾರ ಸಹಾಯವಿಲ್ಲದೇ ಈಗ ಆಲದ ಮರವಾಗಿ ಬೆಳೆದವರು. 'ಕರಿಯ'ನಾಗಿ 'ಕಲಾಸಿಪಾಳ್ಯ' ಶುರು ಮಾಡಿದ ಸಾರಥಿ ಇಂದು 'ಯಾಜಮಾನ'ನಾಗಿ 'ಒಡೆಯ' ಆಗಿದ್ದಾರೆ.
ಮಾರುಕಟ್ಟೆಯಲ್ಲಿ ದರ್ಶನ್ ಶರ್ಟ್; ಅಭಿಮಾನಿಯಾದ್ರೆ ಇಲ್ಲಿ ಕೊಳ್ಳಿ!
ಕೆಲ ದಿನಗಳ ಹಿಂದೆ ಪ್ರೊಡಕ್ಷನ್ ಹುಡುಗನೊಬ್ಬನ ಮದುವೆಯಲ್ಲಿ ಭಾಗಿಯಾಗಿದ್ದ ದರ್ಶನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಮಟ್ಟಕ್ಕೆ ಬೆಳೆದರೂ ತಾನು ಬೆಳೆದು ಬಂದ ಹಾದಿಯನ್ನು ಮರೆಯದೆ ಈಗಲೂ ತನ್ನ ಸ್ವಾಭಿಮಾನವನ್ನು ಕಾಪಾಡಿಕೊಳ್ಳುತ್ತಿರುವ ದರ್ಶನ್‌ಗೆ ಕೋಟ್ಯಾಂತರ ಅಭಿಮಾನಿಗಳು. ಕಾಲೇಜು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ, ಹೊಸಬರ ಚಿತ್ರಕ್ಕೆ ಆಡಿಯೋ, ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಾಥ್ ನೀಡುತ್ತಾರೆ. ಮನೆಯ ಬಾಗಿಲಿಗೆ ಕಷ್ಟ ಎಂದು ಬಂದವರಿಗೆ ಪ್ರತ್ಯಕ್ಷವಾಗಿ ಕಾಣುವ ದೇವರಂತೆ ಸಹಾಯ ಮಾಡುತ್ತಾರೆ.
