Asianet Suvarna News Asianet Suvarna News

ಅಭಿಮಾನಿ ಹಿಡಿದಿದ್ದ ದರ್ಶನ್ ಫೋಟೋ ನೋಡಿ ಓಡೋಡಿ ಬಂದ ಹಂಗರಳ್ಳಿ ಪವಾಡ ಬಸವ; ವಿಡಿಯೋ ವೈರಲ್!

ದರ್ಶನ್ ಫೋಟೋ ನೋಡಿ ಓಡಿ ಬಂದ ಬಸವ. ಕಾಮೆಂಟ್ಸ್‌ ಸೆಕ್ಷನ್ ತುಂಬಾ ದರ್ಶನ್‌ ಮಹಾ ಕೆಲಸಗಳನ್ನು ಹೊಗಳುತ್ತಿರುವ ಅಭಿಮಾನಿಗಳು.....
 

Actor Darshan photo held by fan in temple Basava comes to kiss photo vcs
Author
First Published Aug 14, 2024, 4:49 PM IST | Last Updated Aug 14, 2024, 4:49 PM IST

ಚಿತ್ರದುರ್ಗದ ರೇಣುಕಾಸ್ವಾಮಿ ಇನ್‌ಸ್ಟಾಗ್ರಾಂ ಮತ್ತು ವಾಟ್ಸಪ್‌ನಲ್ಲಿ ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದರು ಎನ್ನುವ ಕಾರಣಕ್ಕೆ ಬುದ್ಧಿ ಹೇಳಲು ನಟ ದರ್ಸನ್ ಆಂಡ್ ಗ್ಯಾಂಗ್, ಬೆಂಗಳೂರಿನ ಪಟ್ಟೆಣಗೆರೆಯಲ್ಲಿ ಇರುವ ಶೆಡ್‌ಗೆ ಕರೆಸಿ ದೊಡ್ಡ ಅವಾಂತರದಲ್ಲಿ ಸಿಲುಕಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಮೇಲೆ ಪವಿತ್ರಾ ಗೌಡ, ನಟ ದರ್ಶನ್‌ ಸೇರಿದಂತೆ 17 ಮಂದಿ ಜೈಲು ವಾಸ ಅನುಭವಿಸುತ್ತಿದ್ದಾರೆ. ಜಾಮೀನು ಪಡೆದು ಈಗ ಬರುತ್ತಾರೆ ಆ ಬರುತ್ತಾರೆ ಎಂದು ಅಭಿಮಾನಿಗಳು ಲೆಕ್ಕಾಚಾರ ಮಾಡುತ್ತಿದ್ದರೆ, ಒಂದೊಂದರೆ ಬಿಗ್ ಟ್ವಿಸ್ಟ್‌ ಪಡೆದು ಕೇಸ್ ಗಟ್ಟಿಯಾಗುತ್ತಿದೆ. 

ಇನ್ನು ನೆಚ್ಚಿನ ನಟ ಹೊರ ಬರಬೇಕು ಎಂದು ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ಪವಾಡ ನಡೆಯುವ ಗುಡಿಗಳಲ್ಲಿ ದರ್ಶನ್ ಭವಿಷ್ಯ ಕೇಳಿದ್ದಾರೆ. ದರ್ಶನ್ ಹೊರ ಬರುತ್ತಾರಾ ಇಲ್ವಾ ಅನ್ನೋ ಪ್ರಶ್ನೆ ಇಟ್ಟಿದ್ದಾರೆ. ಕೆಲವೊಂದು ಕಡೆ ಪಾಸಿಟಿವ್ ಉತ್ತರ ಸಿಕ್ಕಿದೆ ಕೆಲವೊಂದು ಕಡೆ ಗೊಂದಲ ಸೃಷ್ಟಿ ಮಾಡಿದೆ. ಹೀಗೆ ಅಭಿಮಾನಿಯೊಬ್ಬ ದೇವಸ್ಥಾನಕ್ಕೆ ಹೋದಾಗ ದರ್ಶನ್ ಫೋಟೋ ಹಿಡಿದು ಕುಳಿತಿದ್ದಾಗ ಆಮೇಲೆ ನಡೆದ ಘಟನೆ ದೊಡ್ಡ ಪವಾಡ ಎನ್ನಬಹುದು.

'ಪೌಡರ್' ಸೇವಿಸಿದ್ರಾ ಅಣ್ಣಾವ್ರ ಮೊಮ್ಮಗಳು; ಹೊಕ್ಕಳು ಚುಚ್ಚಿಸಿಕೊಂಡ ಧನ್ಯಾ ರಾಮ್‌ಕುಮಾರ್ ಫೋಟೋ ವೈರಲ್!

ಹೌದು! ಅಭಿಮಾನಿಯೊಬ್ಬ ದೇವಸ್ಥಾನದಲ್ಲಿ ದರ್ಶನ್ ಫೋಟೋ ಹಿಡಿದು ಕುಳಿತುಕೊಂಡಿದ್ದರು. ಎಲ್ಲಿಂದಲೋ ಓಡೋಡಿ ಬಂದ ಬಸವ ದರ್ಶನ್ ಫೋಟೋಗೆ ಮುತ್ತಿಡಲು ಶುರು ಮಾಡಿದೆ. ಕೆಲವೊ ನಿಮಿಷಗಳ ಕಾಲ ಫೋಟೋವನ್ನು ದಿಟ್ಟಿಸಿ ನೋಡಿದೆ. ಬಸವ ಏನೋ ಸೂಚನೆ ಕೊಡುವ ಪ್ರಯತ್ನ ಪಟ್ಟಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಘಟನೆ ನಡೆದಿರುವುದು  ಹಂಗರಳ್ಳಿಯಲ್ಲಿ ಇರುವ ಪವಾಡ ಬಸವ. ಪ್ರಾಣಿ ಪಕ್ಷಿಗಳನ್ನು ಇಷ್ಟ ಪಡುವ ದರ್ಶನ್‌ಗೆ ಅವರ ಪ್ರೀತಿ ಮತ್ತು ಭಾವನೆ ಅರ್ಥವಾಗುತ್ತದೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ' ಹಾಡು ವೈರಲ್; ಭಾನುವಾರ ಮತ್ತೆ ಬಂದು ಹಾಡ್ತೀನಿ ಎಂದ ಅಭಿಮಾನಿಗೆ ಧ್ರುವ ಮನವಿ!

ಬಿಗ್ ಟ್ವಿಸ್ಟ್‌:

ಕೊಲೆಯಾದ ನಂತರ ಸಂಗ್ರಹಿಸಿದ್ದ ಟೆಕ್ನಿಕಲ್ ಸಾಕ್ಷಿಗಳ ಪೈಕಿ 70% ರಷ್ಟು ಎಫ್‌ಎಸ್‌ಎಲ್ ರಿಪೋರ್ಟ್ ಪೊಲೀಸರಿಗೆ ತಲುಪಿದ್ದು, ತನಿಖೆಗೆ ಮತ್ತಷ್ಟು ಸಹಕಾರಿಯಾಗಲಿದೆ. ರೇಣುಕಾಸ್ವಾಮಿ ತಲೆಗೆ ಗಂಭೀರ ಗಾಯವಾಗಿದ್ದು ಮೆದುಳಿನಲ್ಲಿ ತೀವ್ರವಾದ ರಕ್ತಸ್ರಾವವಾಗಿದೆ. ಸ್ಪೈನಲ್ ಕಾರ್ಡ್‌ ಮುರಿದಿದೆ, ಮೊಣಕಾಲು ಮುರಿತ, ವೃಷಣದ ಚೀಲದಲ್ಲಿ ರಕ್ತ ಸೋರಿಕೆ ಹಾಗೂ ಬಲಗಣ್ಣಿನ ಮೇಲೆ ತೀವ್ರವಾ ಪೆಟ್ಟು. ಪ್ರಕರಣದ 30% ಎಫ್ ಎಸ್ ಎಲ್ ವರದಿ ಅಂದ್ರೆ ಮೊಬೈಲ್, ಸಿಸಿಟಿವಿ ,ಆಡಿಯೋಗಳು ಸೇರಿದಂತೆ ಇನ್ನಷ್ಟು ಎಲೆಕ್ಟ್ರಾನಿಕ್ ಡಿವೈಸ್ ಗಳ ವರದಿಗಳು, ಆಡಿಯೋ ಸ್ಯಾಂಪಲ್ಸ್ ಹೈದರಾಬಾದ್  ಎಫ್ ಎಸ್ ಎಲ್ ನಿಂದ ಬರಬೇಕಿದೆ. 

 

Latest Videos
Follow Us:
Download App:
  • android
  • ios