Asianet Suvarna News Asianet Suvarna News

'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ' ಹಾಡು ವೈರಲ್; ಭಾನುವಾರ ಮತ್ತೆ ಬಂದು ಹಾಡ್ತೀನಿ ಎಂದ ಅಭಿಮಾನಿಗೆ ಧ್ರುವ ಮನವಿ!

ಮನೆ ಬಳಿ ಬಂದು ಧ್ರುವ ಸರ್ಜಾ ಎದುರು ಹಾಡು ಹೇಳಿದ ಅಭಿಮಾನಿ. ವೈರಲ್ ಅಯ್ತು ಓಡ್ರೋ ಓಡ್ರೋ ಸರ್ಜಾ ಅಡ್ಡ ಹಾಡು....

KD actor Dhruva Sarja reaction to fan singing Odro odro idu sarja adda song vcs
Author
First Published Aug 14, 2024, 2:35 PM IST | Last Updated Aug 19, 2024, 1:31 PM IST

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುವಿನ ಸಮಯದಲ್ಲಿ ತಪ್ಪದೆ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಭಾನುವಾರ ಧ್ರುವ ಸರ್ಜಾ ನಿವಾಸದ ಬಳಿ ನೂರಾರು ಅಭಿಮಾನಿಗಳು ಆಗಮಿಸುತ್ತಾರೆ, ಪ್ರತಿಯೊಬ್ಬರಿಗೂ ಸಮಯ ಕೊಟ್ಟು ಸೆಲ್ಫಿ ಕ್ಲಿಕ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡುತ್ತಾರೆ. ಕಳೆದ ವೀಕೆಂಡ್‌ನಲ್ಲಿ ಧ್ರುವ ಸರ್ಜಾ ಎದುರು ಅಭಿಮಾನಿಯೊಬ್ಬ ತಾವು ರಚಿಸಿರುವ ಹಾಡನ್ನು ಹಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಹಾಡು ಪಾಸಿಟಿವ್ ಹಾಗೂ ನೆಗೆಟಿವ್ ಆಗಿ ಟ್ರೋಲ್ ಆಗಿದೆ. ಕೆಲವರು ಅಭಿಮಾನಿ ಶ್ರಮವನ್ನು ಮೆಚ್ಚಿಕೊಂಡಿದ್ದಾರೆ ಇನ್ನೂ ಕೆಲವರು ಪಾಪ ಧ್ರುವ ಸರ್ಜಾ ಈ ರೀತಿ ಅದೆಷ್ಟು ಅಭಿಮಾನಿಗಳನ್ನು ಎದುರಿಸಬೇಕು ಎಂದಿದ್ದಾರೆ.

'ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ.. ಅಕ್ಷನ್‌ ಪ್ರಿನ್ಸ್‌ ಸರ್ಜಾ ನಮ್ಮ ಬಾಸು ಹನುಮಾ' ಎಂದು ಅಭಿಮಾನಿಯೊಬ್ಬ ಸತತ 3 ನಿಮಿಷ ಈ ಹಾಡನ್ನು ಹಾಡಿದ್ದಾನೆ. ಹಾಡಿನ ಕೊನೆಯ ಸಾಲುಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಇದನ್ನು ಕೇಳಿಸಿಕೊಳ್ಳುವಾಗ ಧ್ರುವ ಸರ್ಜಾ ಬೇಸರದಲ್ಲಿದ್ದರು ಎನ್ನುವ ರೀತಿ ವೈರಲ್ ಆಗುತ್ತಿದೆ. ಯಾರು ಆ ಅಭಿಮಾನಿ ಅಂದು ಏನು ಆಯ್ತು ಯಾವ ಹಾಡು ಹೇಳಿದ ಎಂದು ಪ್ರತಿಯೊಂದನ್ನು ಆಕ್ಷನ್ ಪ್ರಿನ್ಸ್ ರಿವೀಲ್ ಮಾಡಿದ್ದಾರೆ.

ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ 'ಪೊರ್ಕಿ' ಸುಂದರಿ ಪ್ರಣೀತಾ ಮತ್ತೊಂದು ಫೋಟೋ ವೈರಲ್!

'ಆತ ನನ್ನ ಅಭಿಮಾನಿ ಬಂದು ಒಂದು ಹಾಡು ಹೇಳುತ್ತೀನಿ ಎಂದ ಅಲ್ಲಿ ಸಾಕಷ್ಟು ಜನರು ಇದ್ದ ಕಾರಣ ಹಾಡು ಬೇಡ ತುಂಬಾ ಸಮಯ ಬೇಕಾಗುತ್ತದೆ ಎಂದು ಹೇಳಿದೆ. ಹಾಡು ಹಾಡಲೇ ಬೇಕು ಎಂದು ಹೇಳಿಬಿಟ್ಟ. 2-3 ನಿಮಿಷ ಹಾಡು ಹಾಡಿದ್ದಾನೆ. ನಾನು ನಿಲ್ಲಿಸು ಎಂದಿಲ್ಲ. ಆ ಹಾಡು ಮುಗಿಸಿ ಮೂರು ನಾಲ್ಕು ಗಂಟೆ ಬಿಟ್ಟು ಮತ್ತೆ ಬಂದ. ಇನ್ನೊಂದು ಹಾಡು ಹೇಳಲಾ ಎಂದು ಕೇಳಿದ. ಹೇ ಬೇಡ ಬೇಡ ವಾರಕ್ಕೊಂದು ಅಂತ ಹಾಡು ಈ ವಾರಕ್ಕೆ ಸಾಲು ಮುಂದಿನ ಭಾನುವಾರ ಹಾಡುವಂತೆ ಎಂದು ಹೇಳಿದೆ. ಹೀಗಾಗಿ ಮುಂದಿನ ವಾರ ಹೊಸ ಹಾಡು ರಿಲೀಸ್ ಆಗಲಿದೆ' ಎಂದು ಧ್ರುವ ಸರ್ಜಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಅಣ್ಣನಿಗೆ SUV ಕಾರು ಗಿಫ್ಟ್‌ ಮಾಡಿದ ಯೂಟ್ಯೂಬರ್ ಮಧು ಗೌಡ; ಥಾರ್ ಬುಕ್‌ ಮಾಡಿ ಸರ್ಪ್ರೈಸ್‌ ಕೊಟ್ಟ ಭಾವಿ ಪತಿ ನಿಖಿಲ್!

ಡಿಫರೆಂಟ್ ಡೈರೆಕ್ಟರ್ ಪ್ರೇಮ್ ನಿರ್ದೇಶನ ಮಾಡಿರುವ ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾ ಅಭಿನಯಿಸಿದ್ದಾರೆ. ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಚಿತ್ರದ ಟ್ರೈಲ್ ಮತ್ತು ಹೊಸ ಲುಕ್ ರಿವೀಲ್ ಮಾಡಲಾಗಿತ್ತು. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಕೆಡಿ ಅಕ್ಟೋಬರ್ 11ರಂದು ತೆರೆ ಕಾಣುತ್ತಿದೆ. 

Latest Videos
Follow Us:
Download App:
  • android
  • ios