ನಟಿ ಸುಮಲತಾ ಅವರ ಗೆಲುವಿಗೆ ಕಾರಣರಾದ ನಟ ದರ್ಶನ್, ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಅವರ ವಿರುದ್ಧ ತಿರುಗಿದ್ದಾರೆ. ಜ್ಯೋತಿಷಿ ಪ್ರಶಾಂತ್ ಕಿಣಿ ಪ್ರಕಾರ, ದರ್ಶನ್ 2027ರಲ್ಲಿ ರಾಜಕೀಯ ಪ್ರವೇಶಿಸಲಿದ್ದು, ಮುಂದಿನ ಚುನಾವಣೆಯಲ್ಲಿ ಸುಮಲತಾ ವಿರುದ್ಧ ಸ್ಪರ್ಧಿಸುವ ಸಾಧ್ಯತೆಯಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಮಲತಾ ಸಹಾಯ ಮಾಡದ ಕಾರಣ ದರ್ಶನ್ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಬೆಂಗಳೂರು (ಮಾ.13): ನಟಿ ಸುಮಲತಾ ಅವರು ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಮಹತ್ವದ ಪಾತ್ರವಹಿಸಿದ್ದ ನಟ ದರ್ಶನ್ ಅವರು ಜೈಲಿನಿಂದ ಜಾಮೀನಿನ ಮೇಲೆ ಹೊರಗೆ ಬಂದ ನಂತರ ಸುಮಲತಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ದರ್ಶನ್ ಅವರು ಸುಮಲತಾ ವಿರುದ್ಧವೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂದು ಜ್ಯೋತಿಷಿ ಪ್ರಶಾಂತ್ ಕಿಣಿ ಭಯಾನಕ ಭವಿಷ್ಯ ನುಡಿದಿದ್ದಾರೆ.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಜೈಲಿನಲ್ಲಿದ್ದಾಗ ಸ್ಪೋಟಕ ಭವಿಷ್ಯ ನುಡಿದಿದ್ದ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ನಟ ದರ್ಶನ್ ಈಗಾಗಲೇ ಜೈಲು ಸೇರಿ ಎರಡು ತಿಂಗಳಾಗಿದೆ. ಮುಂದಿನ 3 ತಿಂಗಳಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬರುತ್ತಾರೆ. ನಂತರ ಸಿನಿಮಾದಲ್ಲಿ ಭಾಗಿಯಾಗುತ್ತಾರೆ ಎಂದು ನುಡಿದಿದ್ದ ಭವಿಷ್ಯ ನಿಜವಾಗಿದೆ. ಇದೇ ವೇಳೆ ದರ್ಶನ್ 2027 ರಲ್ಲಿ ರಾಜಕೀಯ ಪ್ರವೇಶಿಸುತ್ತಾರೆ. ಅವರು ರಾಜಕೀಯದಲ್ಲಿ ಯಶಸ್ವಿಯಾಗುತ್ತಾರೆ. ಅವರು ತಮ್ಮ ಖ್ಯಾತಿಯನ್ನು ಮರಳಿ ಪಡೆಯುತ್ತಾರೆ. ಒಬ್ಬ ವ್ಯಕ್ತಿಯನ್ನು ಪದೇ ಪದೇ ಗುರಿಯಾಗಿಸಿಕೊಂಡರೆ ಎಲ್ಲರಿಗೂ ತಿಳಿದಿರುವ ಒಂದು ವಿಷಯವೆಂದರೆ ಅನೇಕ ಜನರು ಅವರ ಯಶಸ್ಸಿನ ಬಗ್ಗೆ ಅಸೂಯೆ ಪಟ್ಟಿದ್ದಾರೆ ಎಂದು ಹೇಳಿದ್ದರು.
ಇದನ್ನೂ ಓದಿ: ಮದರ್ ಇಂಡಿಯಾಗೆ ಗೇಟ್‌ಪಾಸ್ ನೀಡಿದ ಕೊಲೆ ಆರೋಪಿ ದರ್ಶನ್, ಸುಮಲತಾ ಪೋಸ್ಟ್ ಹಿಂದಿನ ರಹಸ್ಯವೇನು?
ಇದೀಗ ದರ್ಶನ್ ಅವರು ನಟಿ ಸುಮಲತಾ, ಅಭಿಷೇಕ್ ಅಂಬರೀಶ್ ಸೇರಿದಂತೆ ಎಲ್ಲರನ್ನೂ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅನ್‌ಫಾಲೋ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಸುಮಲತಾ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ನಟ ದರ್ಶನ್ ಜೈಲಿನಲ್ಲಿದ್ದಾಗ ಒಮ್ಮೆಯೂ ಭೇಟಿ ಮಾಡಲು ಬರಲಿಲ್ಲ. ಜೊತೆಗೆ, ಕೊಲೆ ಕೇಸಿನಲ್ಲಿ ಬಂಧನವಾದಾಗ ರಾಜಕೀಯ ಪ್ರಭಾವ ಬಳಸಿ ಬೆನ್ನುನೋವಿನಿಂದ ಬಳಲುವಷ್ಟು ಶಿಕ್ಷೆ ಅನುಭವಿಸುವಾಗಲೂ ಸಹಾಯ ಮಾಡಲಿಲ್ಲ ಎಂಬ ಕೋಪವೂ ಇರಬಹುದು. ಇದಕ್ಕಾಗಿಯೇ ದರ್ಶನ್ ಸುಮಲತಾ ಅವರಿಂದ ಅಂತರ ಕಾಯ್ದುಕೊಳ್ಳಲು ಇನ್‌ಸ್ಟಾಗ್ರಾಮ್ ಅನ್‌ಫಾಲೋ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದರ ಬೆನ್ನಲ್ಲಿಯೇ ಜ್ಯೋತಿಷಿ ಪ್ರಶಾಂತ್ ಕಿಣಿ ಮತ್ತೊಮ್ಮೆ ನಟ ದರ್ಶನ್ ಬಗ್ಗೆ ಭವಿಷ್ಯವನ್ನು ಹೇಳಿದ್ದಾರೆ. ಮಂಡ್ಯ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸುಮಲತಾ ಅಂಬರೀಶ್ ಗೆಲುವಿನಲ್ಲಿ ಪಾತ್ರ ವಹಿಸಿದ್ದಕ್ಕಾಗಿ ಚಾಲೆಂಜಿಂಗ್ ದರ್ಶನ್ ಸಂಕಷ್ಟಕ್ಕೆ ಸಿಲುಕಿದರು. ದರ್ಶನ್ ಸೇರಿದಂತೆ ಪ್ರಜ್ವಲ್ ಕೂಡ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಆದರೆ, ಯಶ್ ಮಾತ್ರ ಸಂಕಷ್ಟಕ್ಕೆ ಸಿಲುಕಲಿಲ್ಲ. ದರ್ಶನ್ ಕಾರಣದಿಂದಾಗಿಯೇ ನಟಿ ಸುಮಲತಾ ಮಂಡ್ಯದಲ್ಲಿ ಗೆದ್ದರು. ಆದರೆ, ಇದೀಗ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಂತರ ಸುಮಲತಾ ದರ್ಶನ್ ಅವರನ್ನು ಕೈಬಿಟ್ಟರು. ಈಗ ದರ್ಶನ್ ಮಂಡ್ಯದಲ್ಲಿ ಮಾತ್ರ ಸುಮಲತಾ ಅವರನ್ನು ಚುನಾವಣೆಯಲ್ಲಿ ಎದುರಿಸಲಿದ್ದಾರೆ ಎಂದು ಉಲ್ಲೇಖ ಮಾಡಿದ್ದಾರೆ.
ಇದನ್ನೂ ಓದಿ: ಮಮ್ಮಿ ಸುಮಲತಾ ಮಾತ್ರವಲ್ಲ ಪುತ್ರ ವಿನೀಶ್‌ನೂ ಅನ್‌ಫಾಲೋ ಮಾಡಿದ ದರ್ಶನ್; ಯಾಕೆ ಈ ಗೇಟ್‌ಪಾಸ್?
