ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ಬಳಿಕ ಇನ್ಸ್ಟಾಗ್ರಾಮ್‌ನಲ್ಲಿ ಸುಮಲತಾ ಅಂಬರೀಶ್ ಹಾಗೂ ಅಭಿಷೇಕ್ ಅಂಬರೀಶ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಇದಕ್ಕೆ ಸುಮಲತಾ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು (ಮಾ.12): ರೇಣುಕಾಸ್ವಾಮಿ ಕೊಲೆ ಅರೋಪಿ ದರ್ಶನ್‌ ಈಗ ಜೈಲಿನಿಂದ ಹೊರಬಂದಿದ್ದಾರೆ. ಜೈಲುವಾಸದ ಬಳಿಕ ಇದೇ ಮೊದಲ ಬಾರಿಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಬೆಳವಣಿಗೆ ಮಾಡಿದ್ದು, ಇನ್ಸ್‌ಟಾಗ್ರಾಮ್‌ನಲ್ಲಿ ಅಭಿಷೇಕ್‌ ಅಂಬರೀಷ್‌ ಹಾಗೂ ಮದರ್ ಇಂಡಿಯಾ ಎಂದೇ ಹೇಳುತ್ತಿದ್ದ ಸುಮಲತಾ ಅಂಬರೀಷ್‌ ಅವರನ್ನು ಅನ್‌ಫಾಲೋ ಮಾಡಿದ್ದಾರೆ. ಇದು ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂಬರೀಷ್‌ ಕಾಲದಿಂದಲೂ ದರ್ಶನ್‌ ಹಾಗೂ ಸುಮಲತಾ ಅಂಬರೀಷ್‌ ನಡುವೆ ಸಾಕಷ್ಟು ಆತ್ಮೀಯ ಬಾಂಧವ್ಯವಿತ್ತು. ದರ್ಶನ್‌ರನ್ನು ತನ್ನ ಮಗ ಎಂದೇ ಸುಮಲತಾ ಪರಿಗಣಿಸಿದ್ದರೆ, ಇನ್ನು ದರ್ಶನ್‌ ಕೂಡ ಸುಮಲತಾರನ್ನು ಮದರ್‌ ಇಂಡಿಯಾ ಎಂದೇ ಹೇಳುತ್ತಿದ್ದರು. ಕೊಲೆ ಕೇಸ್‌ನಲ್ಲಿ ದರ್ಶನ್‌ ಜೈಲಿಗೆ ಹೋದಾಗ ಮೌನ ಕಾಯ್ದುಕೊಂಡಿದ್ದ ಸುಮಲತಾ, ಆತ ಹೊರಬರುತ್ತಿದ್ದಂತೆ ದರ್ಶನ್‌ ಯಾವಾಗಲೂ ನನ್ನ ಮಗ ಎಂದಿದ್ದರು. ಆದರೆ, ಮೈಸೂರಿನಲ್ಲಿ ಡೆವಿಲ್ ಸಿನಿಮಾದ ಚಿತ್ರೀಕರಣ ಶುರುವಾಗುವ ಹೊತ್ತಿನಲ್ಲಿ ಸೋಶಿಯಲ್‌ ಮೀಡಿಯಾ ಪೇಜ್‌ನಲ್ಲಿ ಬಿಗ್‌ ಅಪ್‌ಡೇಟ್‌ ಮಾಡಿರುವ ದರ್ಶನ್‌, ಸುಮಲತಾ ಅಂಬರೀಷ್‌ ಹಾಗೂ ಅಭಿಷೇಕ್‌ ಅಂಬರೀಷ್‌ರನ್ನು ಇನ್ಸ್‌ಟಾಗ್ರಾಮ್‌ ಪೇಜ್‌ನಿಂದ ಅನ್‌ಫಾಲೋ ಮಾಡಿದ್ದಾರೆ.

ಇನ್ಸ್‌ಟಾಗ್ರಾಮ್‌ನಲ್ಲಿ ದರ್ಶನ್‌ ಅನ್‌ಫಾಲೋ ಮಾಡಿರುವ ವಿಚಾರ ಮಾಧ್ಯಮಗಳಲ್ಲಿ ಬಿತ್ತರವಾದ ಬೆನ್ನಲ್ಲಿಯೇ ಸುಮಲತಾ ಮಾರ್ಮಿಕವಾಗಿ ಪೋಸ್ಟ್‌ ಹಾಕಿದ್ದಾರೆ. ಇಂಗ್ಲೀಷ್‌ ಸಾಲುಗಳನ್ನು ಹಾಕಿ ದರ್ಶನ್‌ಗೆ ತಿರುಗೇಟು ನೀಡಿದ್ದಾರೆ. 'ಅತ್ಯುತ್ತಮ ನಟ ಆಸ್ಕರ್ ಅವಾರ್ಡ್ ಯಾರಿಗೆ ಹೋಗುತ್ತದೆ ಎಂದರೆ.. ಯಾರು ಸತ್ಯವನ್ನ ತಿರುಚುತ್ತಾರೆ, ಪಶ್ಚಾತಾಪ ಇಲ್ಲದೆ ಬೇರೆಯವರಿಗೆ ನೋವು ಮಾಡುತ್ತಾರೆ, ತಪ್ಪನ್ನು ಬೇರೆಯವರ ಮೇಲೆ ಹಾಕುತ್ತಾರೆ. ಆದಾಗ್ಯೂ ಅವರು ತಮ್ಮನ್ನು ತಾವು ಹೀರೋ ಎಂದುಕೊಳ್ಳುತ್ತಾರೆ’ ಎಂದು ಸುಮಲತಾ ಬರೆದುಕೊಂಡಿದ್ದಾರೆ.

ಒಟ್ಟು 6 ಮಂದಿಯನ್ನು ದರ್ಶನ್‌ ಅನ್‌ಫಾಲೋ ಮಾಡಿದ್ದಾರೆ. ಸುಮಲತಾ ಅಂಬರೀಷ್‌, ಅಭಿಷೇಕ್‌ ಅಂಬರೀಷ್‌, ಅವಿವಾ ಅಭಿಷೇಕ್‌, ಡಿ.ಕಂಪನಿ, ವಿನೇಶ್‌ ತೂಗುದೀಪರನ್ನು ಅನ್‌ಫಾಲೋ ಮಾಡಿದ್ದಾರೆ. ಅವರು ಯಾರನ್ನು ಫಾಲೋ ಮಾಡದೇ ಇರೋದು ಹಲವು ಪ್ರಶ್ನೆ ಹುಟ್ಟಿ ಹಾಕಿದೆ . ಫಾಲೋ ಮಾಡುವವರ ಸಂಖ್ಯೆ ʻ0ʼ ಆಗಿದೆ. ಆದ್ರೆ ಇಂಥ ನಿರ್ಧಾರಕ್ಕೆ ಕಾರಣ ಏನು ಅಂತ ದರ್ಶನ್‌ ಫ್ಯಾನ್ಸ್‌ ತಲೆ ಕೆಡಿಸಿಕೊಂಡಿದ್ದಾರೆ.

ದರ್ಶನ್‌ ಜೈಲಿನಲ್ಲಿ ಇದ್ದಾಗ ಸುಮಲತಾ ಒಮ್ಮೆಯೂ ಕೂಡ ಅವರನ್ನು ನೋಡಲು ಹೋಗಿರಲಿಲ್ಲ. ರಾಜಕೀಯ ಕಾರಣ ಇದ್ದಕ್ಕೆ ಕಾರಣವಿದ್ದಿರಲೂಬಹುದು. ಆದರೆ, ದರ್ಶನ್‌ಗೆ ಈ ವಿಚಾರ ಮನಸ್ಸಿಗೆ ನಾಟಿರುವ ಸಾಧ್ಯತೆ ಇದೆ. ಮದರ್‌ ಇಂಡಿಯಾ ಎನ್ನುತ್ತಿದ್ದ ಸುಮಲತಾ ತಮ್ಮ ಬೆಂಬಲಕ್ಕೆ ನೀಡಿಲ್ಲ ಎನ್ನುವ ಕಾರಣಕ್ಕಾಗಿಯೇ ದರ್ಶನ್‌ಗೆ ಬೇಸರವಾಗಿರಬಹುದು ಎನ್ನಲಾಗಿದೆ.

ಮಮ್ಮಿ ಸುಮಲತಾ ಮಾತ್ರವಲ್ಲ ಪುತ್ರ ವಿನೀಶ್‌ನೂ ಅನ್‌ಫಾಲೋ ಮಾಡಿದ ದರ್ಶನ್; ಯಾಕೆ ಈ ಗೇಟ್‌ಪಾಸ್‌?

ಇನ್ನೊಂದೆಡೆ, ಸುಮಲತಾ ಅಂಬರೀಷ್‌ ಮಾಡಿರುವ ಪೋಸ್ಟ್‌ ರಾಜ್ಯ ಪ್ರಶಸ್ತಿ ಕುರಿತಾಗಿ ಇದ್ದಿರಬಹುದು ಎನ್ನಲಾಗಿದೆ. ಈ ಬಾರಿ ರಾಜ್ಯ ಪ್ರಶಸ್ತಿಗೆ ಅತ್ಯುತ್ತಮ ನಟರಾಗಿ ಪ್ರಜ್ವಲ್‌ ದೇವರಾಜ್‌ ಅವರನ್ನು ಆಯ್ಕೆ ಮಾಡಲಾಗಿದೆ. 2019ರಿಂದ ಚಲನಚಿತ್ರ ರಾಜ್ಯ ಪ್ರಶಸ್ತಿಗೆ ಅತ್ಯಂತ ಸೂಕ್ತರಾದವರನ್ನೇ ಆಯ್ಕೆ ಮಾಡಲಾಗುತ್ತಿದೆ ಎನ್ನುವ ಮಾರ್ಮಿಕ ಅರ್ಥದಲ್ಲಿ ಇದನ್ನು ಪೋಸ್ಟ್‌ ಮಾಡಿದ್ದಾರೆ ಎನ್ನಲಾಗಿದೆ.

ನನ್ನ ಮೇಲಿನ ಅಭಿಮಾನಕ್ಕೆ ಅಕ್ಕನ ಮಗನ ಕಾಲಿಗೆ ಬೀಳುವುದು ನೋಡಿ ನೋವಾಗಿದೆ; ನಟ ದರ್ಶನ್ ಬೇಸರ