Asianet Suvarna News

ಕೋಟಿಲಿಂಗೇಶ್ವರ ದೇವಾಲಯದಲ್ಲಿ ಡಿ-ಬಾಸ್ ಹೆಸರಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ ಫ್ಯಾನ್!

ಡಿ-ಬಾಸ್ ಅಭಿಮಾನಿಗಳು ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್‌ ಆಗುತ್ತಿದೆ. 

Actor Darshan fan special pooja in Kolar Shree Kotilingeshwara Swamy Temple vcs
Author
Bangalore, First Published Jul 8, 2021, 1:10 PM IST
  • Facebook
  • Twitter
  • Whatsapp

ಕನ್ನಡ ಚಿತ್ರರಂಗದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಯಾವ ಮಟ್ಟಕ್ಕೆ ಬೇಕಿದ್ದರೂ ತಮ್ಮ ನೆಚ್ಚಿನ ನಟ ಡಿ ಬಾಸ್ ಮತ್ತು ದಾಸ ಅಭಿಮಾನಿಗಳು ತಮ್ಮ ಪ್ರೀತಿ ವ್ಯಕ್ತ ಪಡಿಸಲು ಮುಂದಾಗುತ್ತಾರೆ. ಇಷ್ಟು ದಿನ ನಾವೆಲ್ಲರೂ ಟ್ಯಾಟು ಹಾಕಿಸಿಕೊಳ್ಳುವುದು, ಬೈಕ್ ಮೇಲೆ ಫೋಟೋ ಹಾಕಿಸಿಕೊಳ್ಳುವುದು, ದರ್ಶನ್ ಹೆಸರಿನಲ್ಲಿ ಅನ್ನದಾನ ಇತ್ಯಾದಿ ನೋಡುತ್ತಿದ್ದೆವು. ಆದರೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋನೇ ಬೇರೆ...

ಹೌದು! ದರ್ಶನ್ ಗುಬ್ಬಿ ಅಭಿಮಾನಿಗಳು ಟ್ಟಿಟರ್‌ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಅಭಿಮಾನಿ ಕುಟುಂಬ ಕೋಟಿಲಿಂಗೇಶ್ವರ ದೇವಾಲಯದಲ್ಲಿ ಡಿ-ಬಾಸ್‌ ಹೆಸರಿನಲ್ಲಿ ಶಿವಲಿಂಗ ಪ್ರತಿಷ್ಠಾಪನೆ ಮಾಡಿದ್ದಾರೆ. ಪೂಜೆ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿದ್ದಾರೆ. 

ನಾನೂ ಒಬ್ಬ ಡಿ ಕಂಪನಿ ಹುಡುಗ; ಅಭಿಮಾನಿಗಳ ಬಗ್ಗೆ ದರ್ಶನ್ ಮಾತು! 

ಅದೆಷ್ಟೋ ಮಂದಿ ದರ್ಶನ್‌ ಅವರನ್ನು ದೇವರಂತೆ ಪೂಜಿಸುತ್ತಾರೆ. ಆರಾಧಿಸುವ ಸಾವಿರಾರು ಅಭಿಮಾನಿಗಳು ಇದ್ದಾರೆ. ಒಂದು ಕೈಯಿಂದ ಮಾಡಿದ ಸಹಾಯ ಮತ್ತೊಂದು ಕೈಗೆ ತಿಳಿಯದಂತೆ ದರ್ಶನ್ ನೋಡಿಕೊಳ್ಳುತ್ತಾರೆ. ಹೀಗಾಗಿ ಯಾರಿಗೇ ಎಷ್ಟೇ ಸಹಾಯ ಮಾಡಿದ್ದರೂ ಪ್ರಚಾರ ಆಗುವುದಿಲ್ಲ. ದರ್ಶನ್‌ ಅವರ ಈ ಗುಣವನ್ನು ಅಭಿಮಾನಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಕೊರೋನಾ ಸಮಯದಲ್ಲಿ ಫುಡ್ ಕಿಟ್ ಹಾಗೂ ದಿನವೂ ಊಟ ವಿತರಣೆ ಮಾಡುತ್ತಿದ್ದರು. ಒಟ್ಟಿನಲ್ಲಿ ಅಭಿಮಾನಿಗಳು ಹೀಗೆ ಮಾಡಿರುವುದನ್ನು ನೋಡಿ ಸ್ವತಃ ದರ್ಶನ್‌ಗೆ ಶಾಕ್ ಆಗಿರುತ್ತದೆ.

 

Follow Us:
Download App:
  • android
  • ios